ನವದೆಹಲಿ prajakiran.com : ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ಗೆ ಕೊರೋನಾ ಸೋಂಕು ದೃಢಪಟ್ಟಿದೆ.
ರಿಷಭ್ ಪಂತ್ ಸದ್ಯ ಐಸೋಲೇಶನ್ನಲ್ಲಿದ್ದಾರೆ.
ಕೌಂಟಿ ಚಾಂಪಿಯನ್ XI ಟೀಮ್ ವಿರುದ್ಧದ ಆಟದಲ್ಲಿ ಆಡಬೇಕಿತ್ತು.
ಕೊರೋನಾ ಕಾರಣದಿಂದ ಅದು ರದ್ದಾಗಿದೆ. ಅವರ ದುರ್ಹಾಮ್ ಪ್ರವಾಸವನ್ನು ಕೂಡ ರದ್ದು ಮಾಡಲಾಗಿದೆ.
ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಂತರ ಭಾರತೀಯ ಕ್ರಿಕೆಟಿಗರು ಮೂರು ವಾರಗಳ ವಿರಾಮದಲ್ಲಿದ್ದರು.
ಈ ವೇಳೆ ಮನೆಯಲ್ಲಿಯೇ ಆರೋಗ್ಯವಾಗಿರುವಂತೆ ಜೇಯ್ ಷಾ ಅವರು ಕ್ರಿಕೆಟಿಗರನ್ನು ಎಚ್ಚರಿಸಿದ್ದರು.
ಅದಾಗ್ಯೂ ಆಟಗಾರರು ವಿಂಬಲ್ಡನ್ ಮತ್ತು ಯೂರೋ ಪಂದ್ಯಗಳನ್ನು ವೀಕ್ಷಿಸಿದ್ದರು.
ಇದೀಗ ರಿಷಭ್ ಪಂತ್ಗೆ ಪಾಸಿಟಿವ್ ಬಂದಿದ್ದು, ಉಳಿದ ಆಟಗಾರರನ್ನು ಕ್ವಾರೆಂಟೀನ್ನಲ್ಲಿ ಇಡಲಾಗಿದೆ.