dist hospital dharwad
ಜಿಲ್ಲೆ

ಧಾರವಾಡ : ಮೇ 28 ರಂದು ಕೋವಿಡ್-19 ಮುಂಚೂಣಿ ಕಾರ್ಯಕರ್ತೆಯರಿಗೆ ಕೋವಿಶೀಲ್ಡ್ ಲಸಿಕೆ ನೀಡುವ ಸ್ಥಳಗಳು

ಧಾರವಾಡ (prajakiran.com) ಮೇ.27: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮೇ.28 ರಂದು ಕೋರೋನಾ ಮುಂಚೂಣಿ ಕಾರ್ಯಕರ್ತೆಯರಿಗೆ ಲಸಿಕೆಯನ್ನು ನೀಡಲಾಗುತ್ತದೆ. 

ಧಾರವಾಡ ತಾಲ್ಲೂಕಿನಲ್ಲಿ ಲಸಿಕೆ ಪಡೆಯುವ ಸ್ಥಳ:* ಕಲಾಭವನ-(250) ಮತ್ತು ಬಾಷಲ್ ಮಿಷನ್ ಹೈಸ್ಕೂಲ್ (250)- ಬೀದಿಬದಿ ವ್ಯಾಪಾರಸ್ಥರಿಗೆ, ಧಾರವಾಡ ಆಯ್.ಎಮ್.ಏ-(250) – ಔಷಧ ವಿತರಕರು ಹಾಗೂ ವ್ಯಾಪಾರಸ್ಥರಗೆ ಮತ್ತು ಎಪಿಎಂಸಿ ಧಾರವಾಡ -(300), .ಎ.ಪಿ.ಎಮ್.ಸಿ ಸಿಬ್ಬಂದಿಗಳು,

*ಹುಬ್ಬಳ್ಳಿ ತಾಲ್ಲೂಕಿನಲ್ಲಿ ಲಸಿಕೆ ಪಡೆಯುವ ಸ್ಥಳ :* ಲ್ಯಾಮಿಂಟನ್ ಹೈಸ್ಕೂಲ್-(250) ಮತ್ತು ಚಿಟಗುಪ್ಪಿ ಆಸ್ಪತ್ರೆ – (250) ಬೀದಿಬದಿ ವ್ಯಾಪಾರಸ್ಥರಿಗೆ, ಗೋಕುಲ್ ರೋಡ ಓಂ ಗ್ಯಾಸ್ ಏಜೆನ್ಸಿಯಲ್ಲಿ- (75) ತೈಲ್ ಉದ್ಯಮ ಮತ್ತು ಅನಿಲ್ ಪೂರೈಕೆದಾರರಿಗೆ ( ಪೆಟ್ರೋಲ್ ಬಂಕ್‍ದಲ್ಲಿ ಕೆಲಸ ಮಾಡುವವರು ಸೇರಿದಂತೆ), ಜೆ.ಸಿ ನಗರದ ಜಿಲ್ಲಾ ಕೆಮಿಸ್ಟ್ರಿ ರಿಜಸ್ಟ್ರಿಷನ್ ಅಸೋಸಿಯಷನಲ್ಲಿ- (500) ಔಷಧ ತಯಾರಕರು ಹಾಗೂ ಸರಬರಾಜುದಾರರಿಗೆ, ಮಧುವನ್ ಕಾಂಪ್ಲೆಕ್ಸ್‍ನಲ್ಲಿ- (300) ಔಷಧ ವಿತರಕರು ಹಾಗೂ ವ್ಯಾಪಾರಸ್ಥರಗೆ,

*ಕುಂದಗೋಳ ತಾಲ್ಲೂಕಿನಲ್ಲಿ ಲಸಿಕೆ ಪಡೆಯುವ ಸ್ಥಳ :* ಕುಂದಗೋಳ ಪುರಸಭೆಯಲ್ಲಿ (60) ಬೀದಿಬದಿ ವ್ಯಾಪಾರಸ್ಥರಿಗೆ ಮತ್ತು ಅಟೋ ಟ್ರಾಫಿಕ್ (ಡೈವರ್ಸ್) – 60

*ಕಲಘಟಗಿ ತಾಲ್ಲೂಕಿನಲ್ಲಿ ಲಸಿಕೆ ಪಡೆಯುವ ಸ್ಥಳ:* ಕಲಘಟಗಿ ಸಭಾಭವನದಲ್ಲಿ (100) ಬೀದಿಬದಿ ವ್ಯಾಪಾರಸ್ಥರಿಗೆ,

*ನವಲಗುಂದ ತಾಲ್ಲೂಕಿನಲ್ಲಿ ಲಸಿಕೆ ಪಡೆಯುವ ಸ್ಥಳ :* ನವಲಗುಂದ ಕೆ.ಎಸ್.ಆರ್.ಟಿ.ಸಿ.ಯಲ್ಲಿ 350 ಸಿಬ್ಬಂದಿಗಳಿಗೆ

ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ತಾಲೂಕಾ ಆರೋಗ್ಯ ಕೇಂದ್ರಗಳಲ್ಲಿ, ಕಿಮ್ಸ್ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಲಸಿಕೆಗಳು ಲಭ್ಯವಿದ್ದು 2ನೇ ಡೋಸ್‍ಗೆ ಪ್ರಾಶಸ್ತ್ಯ ನೀಡಲಾಗುವುದು.

ಕೋವಿಶೀಲ್ಡ್ ಲಸಿಕೆಯ ಪ್ರಥಮ ಡೋಸ್ ತೆಗೆದುಕೊಂಡವರು 84 ದಿನಗಳ ಮುಗಿದ ನಂತರ 2 ನೇಯ ಡೋಸ್ ನೀಡಲಾಗುವುದು. 

ಮತ್ತು ಈಗಾಲೇ ಕೋವ್ಯಾಕ್ಸಿನ್ ಲಸಿಕೆಯ ಫಸ್ಟ್ ಡೋಜ್ ಪಡೆದಿರುವ ಫಲಾನುಭವಿಗಳು ನಾಲ್ಕು ವಾರ ಪೂರೈಸಿದ್ದರೆ ತಕ್ಷಣ ಅವರು ಧಾರವಾಡ ಜಿಲ್ಲಾ ಆಸ್ಪತ್ರೆ, ಹುಬ್ಬಳ್ಳಿ ಕಿಮ್ಸ್ ಹಾಗೂ ಕುಂದಗೋಳ, ಕಲಘಟಗಿ, ನವಲಗುಂದ ತಾಲೂಕಾ ಆಸ್ಪತ್ರೆಗಳು ಮತ್ತು ನವನಗರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಕೋವ್ಯಾಕ್ಸಿನ್ ಸೆಕೆಂಡ್ ಡೋಜ್ ಲಸಿಕೆ ಪಡೆದುಕೊಳ್ಳಬೇಕೆಂದು ಜಿಲ್ಲಾ ಆರ್.ಸಿ.ಎಚ್.ಓ ಡಾ.ಎಸ್.ಎಂ.ಹೊನಕೆರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *