ರಾಜ್ಯ

ಶೇ. 76 ಜನರಿಗೆ ಕರೋನಾ ಲಕ್ಷಣಗಳೇ ಇಲ್ಲ….!

ಬೆಂಗಳೂರು prajakiran.com : ರಾಜ್ಯದ ಶೇ. 24 ರಷ್ಟು ಜನರಿಗೆ ಮಾತ್ರ ಈವರೆಗೆ ಕರೋನಾ ವೈರಸ್ ಇರುವ ರೋಗ ಲಕ್ಷಣಗಳು ಕಂಡು ಬಂದಿವೆ.

ಆದರೆ ಶೇ. 76 ಜನರಿಗೆ ಯಾವುದೇ ರೋಗ ಲಕ್ಷಣಗಳು ಕಂಡು ಬಾರದಿರುವುದು ಎಲ್ಲರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ರಾಜ್ಯದ ಒಟ್ಟು 848 ಜನ ಸೋಂಕಿತರ ಪೈಕಿ 645 ಜನರಿಗೆ ಕರೋನಾ ರೋಗ ಲಕ್ಷಣಗಳೇ ಇಲ್ಲ ಎಂಬ ಆತಂಕಕಾರಿ ಸಂಗತಿ ಹೊರ ಬಿದ್ದಿದೆ.

ಇದನ್ನು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೂಡ ಖಚಿತ ಪಡಿಸಿದೆ. ಹೀಗಾಗಿ ನನಗೆ ಸೋಂಕಿನ ಲಕ್ಷಣಗಳಿಲ್ಲ ಎಂದು ಬಿಂದಾಸ್ ಆಗಿ ಇರುವವರಿಗೆ ಸಂಕಷ್ಟ ಎದುರಾಗುವುದು ಖಚಿತ.

ರೋಗ ಲಕ್ಷಣಗಳು ಇಲ್ಲದಿದ್ದರೂ ಪ್ರತಿಯೊಬ್ಬರು ಸ್ವಲ್ಪ ಮುಂಜಾಗ್ರತೆ ವಹಿಸುವುದು ಅಗತ್ಯ.

ಅದೇ ರೀತಿ ಸಾಮಾಜಿಕಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ,ಆಗಾಗ ಕೈ ತೊಳೆದುಕೊಳ್ಳುವುದು ಮತ್ತು ಸ್ಯಾನಿಟೇಶರ್ ಉಪಯೋಗಿಸುವುದು ಒಳಿತು.

ಸ್ವಲ್ಪ ಜ್ವರ, ನೆಗಡಿ, ಕೆಮ್ಮು ಬಂದರೂ ಕೂಡ ಮನೆಯಲ್ಲಿಯೇ ಚಿಕಿತ್ಸೆ ಪಡೆಯುವ ಬದಲಿಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *