ರಾಜ್ಯ

ರಾಜ್ಯದಲ್ಲಿ ಸೋಮವಾರ ಕರೋನಾಕ್ಕೆ 72 ಸಾವು, 3648 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಸೋಮವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ72  ಜನ ಸಾವನ್ನಪ್ಪಿದ್ದಾರೆ.

ಮತ್ತೆ ಹೊಸದಾಗಿ 3648  ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ  67420 ಕ್ಕೆ ಏರಿಕೆಯಾಗಿದೆ.

 ಇಂದು ರಾಜ್ಯದಲ್ಲಿ730 ಜನ ಬಿಡುಗಡೆಗೊಂಡಿದ್ದು,  ಈವರೆಗೆ ಒಟ್ಟು  23795 ಜನ ಗುಣಮುಖರಾಗಿದ್ದು,   42216 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 580 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ  ಸೋಮವಾರವೂ  72 ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 1403 ಕ್ಕೆ ಏರಿಕೆಯಾದಂತಾಗಿದೆ.

ಸೋಮವಾರ ಪತ್ತೆಯಾದ ಪ್ರಕರಣಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರ ದಲ್ಲಿಯೇ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ.

ಬೆಂಗಳೂರಿನಲ್ಲಿ 1452  ಬರೋಬ್ಬರಿ    ಜನ ಸೋಂಕಿತರು ಕಂಡು ಬಂದಿರುವುದು ಬೆಂಗಳೂರಿಗರನ್ನು ಮತ್ತೆ ಬೆಚ್ಚಿಬೀಳಿಸುವಂತೆ ಮಾಡಿದೆ.

ಇನ್ನೂಳಿದಂತೆ  ಬಳ್ಳಾರಿ 234, ಬೆಂಗಳೂರು ಗ್ರಾಮಾಂತರ 208, ಧಾರವಾಡ 200, ವಿಜಯಪುರ 160, ಮೈಸೂರು 149, ಕಲಬುರಗಿ 124, ಉಡುಪಿ 98, ದಕ್ಷಿಣ ಕನ್ನಡ 89, ಉತ್ತರ ಕನ್ನಡ 78, ದಾವಣಗೆರೆ 73, ಹಾಸನ 67, ಕೊಪ್ಪಳ 62, ಬೆಳಗಾವಿ ಹಾಗೂ ಚಿಕ್ಕಬಳ್ಳಾಪುರ ತಲಾ 60, ರಾಮನಗರ 56, ತುಮಕೂರು 55, ಬಾಗಲಕೋಟೆ 54, ಚಾಮರಾಜನಗರ 49, ಯಾದಗಿರಿ ಹಾಗೂ ಚಿಕ್ಕಮಗಳೂರು ತಲಾ 43, ಮಂಡ್ಯ ಹಾಗೂ ಕೋಲಾರ ತಲಾ 41, ಹಾವೇರಿ 36, ಗದಗ 31, ಚಿತ್ರದುರ್ಗ 29, ಬೀದರ 26, ಶಿವಮೊಗ್ಗ 19, ಕೊಡಗು 8, ರಾಯಚೂರು 3, ಹೀಗೆ ಒಟ್ಟು 30 ಜಿಲ್ಲೆಗಳಲ್ಲಿ ಕರೋನಾ ವೈರಸ್ ತನ್ನ ಅಟ್ಟಹಾಸ ಮೆರೆದಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸಾವಿನ ರಣಕೇಕೆ ರಾಜ್ಯದಲ್ಲಿ ಸೋಮವಾರವೂ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ 31 ಜನ ಸಾವನ್ನಪ್ಪಿದ್ದಾರೆ. 

ದಕ್ಷಿಣ ಕನ್ನಡ 7, ಧಾರವಾಡ 6, ಮೈಸೂರು 5,ಬೀದರ 4, ಬಾಗಲಕೋಟೆ 3, ಬಳ್ಳಾರಿ, ಕಲಬುರಗಿ, ಕೊಪ್ಪಳ ಹಾಗೂ ಚಿತ್ರದುರ್ಗ ತಲಾ 2, ವಿಜಯಪುರು, ಉಡುಪಿ, ದಾವಣಗೆರೆ, ಹಾಸನ, ತುಮಕೂರು, ಚಿಕ್ಕಮಗಳೂರು, ಹಾವೇರಿ ಹಾಗೂ ಶಿವಮೊಗ್ಗದಲ್ಲಿ  ತಲಾ ಒಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *