ರಾಜ್ಯ

ಕರ್ನಾಟಕಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಕಾಂಗ್ರೆಸ್ ಹಲವು ಪ್ರಶ್ನೆ

ಧಾರವಾಡದಲ್ಲಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಹೇಳಿಕೆ

ಧಾರವಾಡ prajakiran. com :
ಕೇಂದ್ರ ಬಿಜೆಪಿ ಸರಕಾರವನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸಿದಕ್ಕೆ ಸ್ವಾಗತ ಕೋರಿರುವ ಕಾಂಗ್ರೆಸ್ ಪಕ್ಷದ ವಕ್ತಾರ ಪಿ.ಎಚ್. ನೀರಲಕೇರಿ ಹಲವು ಪ್ರಶ್ನೆ ಕೇಳಿದ್ದಾರೆ.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಕರ್ನಾಟಕ ರಾಜ್ಯದ ಜನತೆಯ ಪರವಾಗಿ ಕೆಲವು ಪ್ರಶ್ನೆಗಳು ಕೇಳುವುದಾಗಿ ತಿಳಿಸಿದರು.
ಪ್ರಶ್ನೆ ವಿವರ ಹೀಗಿದೆ.
1) ಕಳೆದ 3 ವರ್ಷಗಳಿಂದ ರಾಜ್ಯಕ್ಕೆ ಬರಬೇಕಾಗಿದ್ದ GST ಪಾಲಿನ ಹಣವನ್ನು ಯಾವಾಗ ನೀಡುತ್ತೀರಿ?
2) ಇತ್ತೀಚಿಗೆ ಕೇಂದ್ರದಿಂದ ರಾಜ್ಯಕ್ಕೆ ನೀಡುತ್ತಿದ್ದ ತೆರಿಗೆ ಹಣದ ಕಡಿತಕ್ಕೆ ಕಾರಣವೇನು?
3) ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ನೀವು ನೀಡಿದ ಸುಳ್ಳು ಭರವಸೆಯನ್ನು ನಿಜ ಮಾಡುವಿರಾ?
4) ಕೃಷಿ ಕಾಯ್ದೆಗಳನ್ನು ನೀವು ಕೇಂದ್ರದಲ್ಲಿ ಹಿಂಪಡೆದರು, ಕರ್ನಾಟಕ ಸರ್ಕಾರ ಹಿಂಪಡೆಯಲು ನಿರ್ದೇಶನ ನೀಡುವಿರಾ?
5) ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಶ್ರೀ ಕೆಂಪಣ್ಣ ಅವರು ಬರೆದ ಪತ್ರಕ್ಕೆ ಉತ್ತರ ನೀಡುವಿರಾ?
6) ಹಿಂದೆ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ 10% ಕಮಿಷನ್ ಸರ್ಕಾರ ಎಂದು ದೂಷಿಸಿದ್ರಿ, ಆದರೆ ಈಗಿನ ನಿಮ್ಮ ಬಿಜೆಪಿ ಸರಕಾರ 40% ಪಡೆಯುತ್ತಿರುವುದು ನಿಮಗೆ ಅರಿವಿಲ್ಲವೆ?
7) ದೇಶದ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲು ಕಾರಣವೇನು?
8) ಅಗ್ನಿಪತ್ ಯೋಜನೆಯಿಂದ ದೇಶಕ್ಕೆ ರಕ್ಷಣೆ ನೀಡುವ ರಕ್ಷಕರ 4 ವರ್ಷಗಳ ನಂತರ ಅವರ ಸ್ಥಿತಿ ಏನು?
9) ಈ ಯೋಜನೆಯಿಂದ RSS, ಭಜರಂಗದಳ ಮತ್ತು ಶ್ರೀರಾಮಸೇನೆ ಅವರನ್ನು ಸೇನೆಗೆ ಸೇರಿಸುವ ಯೋಚನೆ ಏನಾದ್ರೂ ಇದೆಯಾ?
10) ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು, ದ್ವೇಷ ರಾಜಕಾರಣ ಮಾಡುವ ಹುನ್ನಾರ ಏಕೆ?
11) ಕಳೆದ 3 ವರ್ಷಗಳಿಂದ ರಾಜ್ಯ ಅತಿವೃಷ್ಟಿಗೆ ತುತ್ತಾದರು ನೀವು ನೆರೆ ವೀಕ್ಷಣೆಗೆ ಬರಲಿಲ್ಲ ಏಕೆ?
12) ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 70 ಲಕ್ಷ ಹುದ್ದೆಗಳನ್ನು ಏಕೆ ಭರ್ತಿ ಮಾಡಿಲ್ಲ?
13) ಸದ್ಯ ಖಾಲಿ ಇರುವ ಸುಮಾರು 126000 ಹುದೆಗಳನ್ನು 1954 ರ ಮಿಲಿಟರಿ ಸೇನಾ ಭರ್ತಿ ನಿಯಮದ ಪ್ರಕಾರ ಭರ್ತಿ ಮಾಡಿಲ್ಲ ಏಕೆ?
ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರ ಮತ್ತು ಬಿಜೆಪಿ ನಾಯಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ನೋಡಬೇಕಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *