ಪುಣೆ prajakiran.com : ಮಹಾಮಾರಿ ಕೊರೋನಾ ಸೋಂಕಿಗೆ ಮತ್ತೊಬ್ಬ ರಾಜಕಾರಣಿ, ಕಾಂಗ್ರೆಸ್ ರಾಜ್ಯಸಭಾ ಸದಸ್ಯ ರಾಜೀವ್ ಸತಾವ್ ಭಾನುವಾರ ಮೃತ ಪಟ್ಟಿದ್ದಾರೆ.
ಸತಾವ್ ಅವರಿಗೆ ಏ. 22 ರಂದು ಕೊರೋನಾ ಸೋಂಕು ತಗುಲಿದ್ದು, ಪುಣೆಯ ಜಹಾಂಗೀರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.
ಪ್ರಸ್ತುತ ರಾಜೀವ್ ಅವರು ರಾಜ್ಯ ಸಭೆ ಮೂಲಕ ಸದಸ್ಯರಾಗಿದ್ದರು.
ಇದಕ್ಕೂ ಹಿಂದೆ ಮಹಾರಾಷ್ಟ್ರದ ಹಿಂಗೋಲಿಯಿಂದ 16ನೇ ಲೋಕಸಭೆಯಲ್ಲಿ ಸಂಸತ್ ಸದಸ್ಯರಾಗಿದ್ದರು.