ಅಂತಾರಾಷ್ಟ್ರೀಯ

ಧಾರವಾಡದ ಕೆ ಐ ಎ ಡಿ ಬಿಯ 25 ಕೋಟಿ ಹಗರಣ : ಐ ಡಿ ಬಿ ಐ ಬ್ಯಾಂಕ್ ಮ್ಯಾನೇಜರ್ ಸೇರಿ ಇಬ್ಬರ ಬಂಧನ….!

ಕೆ ಐ ಎ ಡಿ ಬಿ 25 ಕೋಟಿ ಹಗರಣ

: ಐ ಡಿ ಬಿ ಐ ಬ್ಯಾಂಕ್ ಮ್ಯಾನೇಜರ್ ಸೇರಿ ಇಬ್ಬರಿಗೆ ಮಾ.20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಸಿ ಐ ಡಿ

ಧಾರವಾಡ ಪ್ರಜಾಕಿರಣ.ಕಾಮ್  : ಧಾರವಾಡದ ಕೆ ಐ ಎ ಡಿ ಬಿಯಲ್ಲಿ ರೈತರ ಭೂಮಿ ಸ್ವಾಧೀನದ ಪರಿಹಾರ ಧನ ವಿತರಣೆಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಹುಬ್ಬಳ್ಳಿಯ ಐಡಿಬಿಐ ಬ್ಯಾಂಕ್ ಖಾತೆಯಲ್ಲಿ ಐದಕ್ಕೂ ಹೆಚ್ಚು ಖೊಟ್ಟಿ ಬ್ಯಾಂಕ್ ಖಾತೆಗಳನ್ನು ತೆಗೆದು
ಕೋಟ್ಯಾಂತರ ರೂಪಾಯಿ ಅವ್ಯವಹಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಬ್ಯಾಂಕ್ ಮ್ಯಾನೇಜರ್
ಕ್ಲರ್ಕ್ ಸೇರಿ ಇಬ್ಬರನ್ನೂ ಕೊನೆಗೂ ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಿದರು‌.

ಬಂಧಿತರನ್ನು ಐ ಡಿ ಬಿ ಐ ಉಣಕಲ್ ಶಾಖೆಯ ಬ್ಯಾಂಕ್ ಮ್ಯಾನೇಜರ್
ಲಕ್ಷ್ಮಣರಾವ್‌ ಅಪ್ಪಾಜಿರಾವ್‌ ಪಾಂಡುರಂಗಿ ಹಾಗೂ
ಮಂಜುನಾಥ ಮುರಗೋಡ ಕ್ಲರ್ಕ್ ಎಂದು ಗುರುತಿಸಲಾಗಿದೆ.

ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಧಾರವಾಡದ ಮೂರನೇ ಹಿರಿಯ ಸಿಜೆ ಹಾಗೂ ಸಿಜೆಎಂ ನ್ಯಾಯಾಧೀಶರಾದ ಮಹೇಶ ನಾಗರಾಳ ಅವರ ಎದುರು ಹಾಜರುಪಡಿಸಲಾಯಿತು.

ಇಬ್ಬರನ್ನೂ ಮಾರ್ಚ್ 20ರವರೆಗೆ ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ‌ಒಪ್ಪಿಸಲಾಯಿತು.

ಈ ಇಬ್ಬರು ಅಶ್ಫಕ್ ಅಲಿಯಾಸ್ ಮೆಹಬೂಬ್ ದುಂಡಸಿ ಮುಖಾಂತರ ಕೆ ಐ ಎ ಡಿ (kiadb) ಹಗರಣಕ್ಕೆ ಸಂಬಂಧಿಸಿದಂತೆ ಐದು ಖೊಟ್ಟಿ ಬ್ಯಾಂಕ್ ಖಾತೆಗಳನ್ನು ತೆಗೆದು
೨೦ಕೋಟಿ ಹಣ ವರ್ಗಾವಣೆ ಮಾಡಿದ ಗಂಭೀರವಾದ ಆರೋಪ ಎದುರಿಸುತ್ತಿದ್ದಾರೆ.

ಇವರಿಬ್ಬರು ಲಾಡ್ಜವೊಂದರಲ್ಲಿ ಆಕೌಂಟ್‌ ಓಪನಿಂಗ್‌ ಮಾಡಿದ್ದರು.
ಅಲ್ಲದೆ, 1950ರಲ್ಲಿ ಮೃತಪಟ್ಟ ಮದರಸಾಬ ಎಂಬ ಸತ್ತವನ ಹೆಸರಲ್ಲಿ ಖಾತೆ ತೆರೆದುದಲ್ಲದೆ
ಆ ಖಾತೆಗೆ 5 ಕೋಟಿ ಹಾಕಿ 2 ದಿನದಲ್ಲಿ ಅದನ್ನು ಡ್ರಾ ಮಾಡಲು ಸಹಕರಿಸಿದ ಆರೋಪ ಎದುರಿಸುತ್ತಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *