ರಾಜ್ಯ

ಕೇಂದ್ರ, ರಾಜ್ಯ ಸರ್ಕಾರಿ ನೌಕರಿ ಕೊಡಿಸುವುದಾಗಿ ನೂರಾರು ಅಮಾಯಕ ವಿದ್ಯಾರ್ಥಿಗಳಿಗೆ  ವಂಚನೆ  ಪ್ರಕರಣ : ಸಮಗ್ರ ತನಿಖೆ ನಡೆಸಲು ಬಸವರಾಜ ಕೊರವರ ಆಗ್ರಹ

ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಸರು ಕೂಡ ರ್ದುಬಳಕೆ

ನೋಂದವರಿಗೆ ನ್ಯಾಯ ಕೊಡಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಕೇವಲ ಮೂವರು ವಿದ್ಯಾರ್ಥಿಗಳಿಂದಲೇ ೨೨,೬೫,೦೦೦/ ರೂಪಾಯಿ ಪಡೆದು ವಂಚನೆ ಬೆಳಕಿಗೆ

ಧಾರವಾಡ prajakiran.com : ಕೇಂದ್ರ ಸರ್ಕಾರದ ಎನ್ ಇ ಪಿ (ರಾಷ್ಟ್ರೀಯ ಶಿಕ್ಷಣ ನೀತಿ)  ಕಾಯ್ದೆ ಅನ್ವಯ ಒಂದು ದೇಶ ಒಂದು ಪಠ್ಯ ಜಾರಿಗೆ ತಂದಿದೆ.

ಅದರ ತರಬೇತಿಗೆ ಸಾವಿರಾರು ವಿದ್ಯಾರ್ಥಿಗಳಿಗೆ ಸಜ್ಜುಗೊಳಿಸುವ ಜವಾಬ್ದಾರಿ ರಾಘವೇಂದ್ರ ಕಟ್ಟಿ ಅವರ ಎಸ್ ಜಿ ಎಸ್ ಎಸ್ ಮಾನವ ಸಂಪನ್ಮೂಲ ಸೇವಾ ಸಂಸ್ಥೆ ( ಎಸ್ ಜಿ ಎಸ್ ಎಸ್ ಮಾನವ ಸಂಪನ್ಮೂಲ ಕನ್ಸಲ್ಟೆನ್ಸಿ ) ಗಿದೆ ಎಂದು ಕೇವಲ ಮೂವರು ವಿದ್ಯಾರ್ಥಿಗಳಿಂದಲೇ ೨೨,೬೫,೦೦೦/ ರೂಪಾಯಿ ಪಡೆದು ನೌಕರಿ ಕೊಡಿಸದೆ ಹಣವೂ ಮರಳಿಸದೆ ವಂಚನೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆರೋಪಿಸಿದರು.

ಅವರು ಬುಧವಾರ ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಕರ್ನಾಟಕ ರಾಜ್ಯ ಮಾನವ ಸಂಪನ್ಮೂಲ ಅಭಿವೃದ್ದಿ ಹಾಗೂ ಪೂರೈಕೆ ಪ್ರಾಧಿಕಾರ ನಮಗೆ ಕೊಟ್ಟಿದೆ ಎಂದು ಅದರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ.

ಆ ದಾಖಲೆ ನೋಡಿ ಅನೇಕರು ಮೋಸ ಹೋಗಿದ್ದಾರೆ. ಆದರೆ, ಅಚ್ಚರಿ ಸಂಗತಿಯೆಂದರೆ ಜಿಲ್ಲೆಯ ಹಲವು ಹಿರಿಯ ಅಧಿಕಾರಿಗಳಿಗೆ ವಿಚಾರಿಸಿದಾಗ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಮಾನವ ಸಂಪನ್ಮೂಲ ಹಾಗು ಅಭಿವೃದ್ದಿ ಪ್ರಾಧಿಕಾರ ಅಸ್ತಿತ್ವದಲ್ಲಿಯೇ ಇಲ್ಲ ಎಂಬುದು ಗೊತ್ತಾಗಿದೆ ಎಂದು ವಿವರಿಸಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಿ ಹುದ್ದೆಗೆ ಸರಿಸಮಾನದ ಹುದ್ದೆ ನೀಡುವುದಾಗಿ ರಾಘವೇಂದ್ರ ಕಟ್ಟಿ ಅವರು ನೂರಾರು ಅಮಾಯಕ ವಿದ್ಯಾರ್ಥಿಗಳಿಂದ ಕೋಟ್ಯಾಂತರ ಹಣ ಪಡೆದು ವಂಚನೆ ಮಾಡಿರುವ ಮಾಹಿತಿ ಇದೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಸರು ಕೂಡ ರ್ದುಬಳಕೆ  ಮಾಡಿಕೊಂಡಿರುವ ರಾಘವೇಂದ್ರ ಕಟ್ಟಿ ಅವರು ನನ್ನೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ. ವೀಡಿಯೋ ಕಾಲ್ ನಲ್ಲಿ ಮಾತನಾಡುತ್ತೇವೆ.

ಎಲ್ಲಾ ಚಲನವಲನಗಳನ್ನು ಆನ್ ಲೈನ್ ನಲ್ಲಿ ಗಮನಿಸುತ್ತಾರೆ. ಸುಮಾರ ೭೫ ಸಾವಿರ ಅಭ್ಯರ್ಥಿಗಳಿಗೆ ಈವರೆಗೆ ನೇಮಕ ಮಾಡಲಾಗಿದೆ ಎಂದು ಹೇಳಿ ವಂಚಿಸಿದ್ದಾರೆ ಎಂದರು.

ಈಗಾಗಲೇ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಕಳೆದ ಫೆಬ್ರುವರಿ ತಿಂಗಳಿನಲ್ಲಿಯೇ ಒಂದು ದೂರು ದಾಖಲಾಗಿದೆ.

ಆ ಕುರಿತು ಪೊಲೀಸರು ಗಂಭೀರವಾದ ತನಿಖೆ ನಡೆಸದೆ ಮಾಹಿತಿ ಇದೆ.  ಹೀಗಾಗಿ ಈ ಪ್ರಕರಣವನ್ನು ರಾಜ್ಯ ಸರಕಾರ ಸಮಗ್ರ ತನಿಖೆ ನಡೆಸಲು ಮುಂದಾಗಬೇಕು. ಆ ಮೂಲಕ ನೂರಾರು ನೋಂದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ಜನ ಜಾಗೃತಿ ಸಂಘದ ವತಿಯಿಂದ ಮುಂಬರುವ ದಿನಗಳಲ್ಲಿ ಬೀದಿಗಿಳಿದು ಉಗ್ರಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ರಾಘವೇಂದ್ರ ಕಟ್ಟಿ ಅವರ ಹತ್ರ ಕರೆದುಕೊಂಡು ಹೋದ ಮಧ್ಯವರ್ತಿಗಳಾದ ಶರಣಪ್ಪ ತಿಕೋಟಿಕರ, ಸತೀಶ ಹೊಸಮನಿ ಹಾಗೂ ಪ್ರೇಮಾ ಪ್ರಭಾಕರ ಪುದುರ ಇವರು ಈ ವಿದ್ಯಾರ್ಥಿಗಳಿಗೆ ಪದೇ ಪದೇ ಕಾಲ್ ಮಾಡಿ ಬೇಗ ಕೆಲಸ ಮಾಡಿಕೊಳ್ಳಿ ಇಲ್ಲವೆಂದರೆ ಎಲ್ಲಾ ಹುದ್ದೆಗಳು ಭರ್ತಿ ಆದರೆ ಮತ್ತೆ ಇದೇ ಹುದ್ದೆಗೆ ಸರಿ ಸುಮಾರು ೨೫ ಲಕ್ಷ ರೂಗಳವರೆಗೂ ಕೊಡಬೇಕಾಗುತ್ತದೆ ಎಂದು ದಾರಿ ತಪ್ಪಿಸಿದ್ದಾರೆ.

ಈ ಮೂವರಲ್ಲಿ ಶರಣಪ್ಪ ತಿಕೋಟಿಕರ ಅವರು  ಅಲ್ಲೇ ಕೆಲಸ  ಮಾಡುತ್ತೀದ್ದೇನೆ ಎಲ್ಲವು ಸರಿ ಇದೆ, ಏನೇ ಆದರೂ ನಾವೆಲ್ಲಾ ಜವಾಬ್ದಾರಿ ಇರುತ್ತೆವೆ ಎಂದು ಹೇಳಿ ಈ ಮೂವರನ್ನು ಒಪ್ಪಿಸಿದ್ದಾರೆ.

ಒಬ್ಬರಿಂದ ತಲಾ ೭,೫೫,೦೦೦ ರೂಪಾಯಿಗಳಂತೆ ಮೂವರು ಹತ್ತಿರ ತೆಗೆದುಕೊಂಡಿರುತ್ತಾರೆ.

ಹಣ ಕೊಟ್ಟ ವಿವರ :
ಸಾಗರ ಶೀಳಿನ ಇವರ ಬ್ಯಾಂಕ್ ಖಾತೆಯಿಂದ ದಿನಾಂಕ : ೩೧/೦೩/೨೦೨೧/ ೧೬/೦೪/೨೦೨೧ ರಂದು ಶರಣಪ್ಪ ತಿಕೋಟಿಕರ ಇವರ ಖಾತೆಗೆ ೪,೭೮,೦೦೦ ರೂಪಾಯಿಗಳನ್ನು  ( ಓಇಈಖಿ & UPI ) ಮುಖಾಂತರ ರವಾನಿಸಿದೆ.

ಮಲ್ಲಿಕಾರ್ಜುನ ಕೂಡಗಿ ಬ್ಯಾಂಕ್ ಖಾತೆಯಿಂದ ದಿನಾಂಕ : ೨೭/೦೪/೨೦೨೧ ರಂದು ರಾಘವೇಂದ್ರ ಕಟ್ಟಿ ಇವರ ಖಾತೆಗೆ ೨,೦೫,೦೦೦ ರೂಪಾಯಿಗಳನ್ನು  ( ಓಇಈಖಿ) ಮುಖಾಂತರ ರವಾನಿಸಿದೆ.

ಶಿವರಾಜ ಅವಟಿ  ಬ್ಯಾಂಕ್ ಖಾತೆಯಿಂದ ದಿನಾಂಕ : ೨೭/೦೪/೨೦೨೧ ರಂದು ರಾಘವೇಂದ್ರ ಕಟ್ಟಿ ಇವರ ಖಾತೆಗೆ ೧,೯೫,೦೦೦ ರೂಪಾಯಿಗಳನ್ನು  ( ಓಇಈಖಿ) ಮುಖಾಂತರ ರವಾನಿಸಿದೆ.

ಇನ್ನುಳಿದ ಹಣವನ್ನು ದಿನಾಂಕ : ೨೮/೦೭/೨೦೨೧ ರಂದು ೧೩,೮೭,೦೦೦ ರೂಪಾಯಿಗಳನ್ನು ಸುಮಾರು ಎಂಟು ( ೮ ) ಜನರ ಕಣ್ಣಮುಂದೆ ,ರಾಘವೇಂದ್ರ ಕಟ್ಟಿ ಇವರ ಆಪ್ತರಾದ ಶರಣಪ್ಪ ತಿಕೋಟಿಕರ, ಪ್ರೇಮಾ ಪ್ರಭಾಕರ ಪುದುರ, ವೀರೇಶ ಪ್ರಭಾಕರ ಪುದುರ, ಸತೀಶ ಹೊಸಮನಿ, ಉಮೇಶ ಕಳಸದ , ನಾಗರಾಜ ಸಾವನೂರ, ಶಶಿ, ಪ್ರಭಾಕರ ಭಜಂತ್ರಿ ಈ ಎಂಟು ಜನರ ಸಮಕ್ಷಮದಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಶಿಕ್ಷಣ ಇಲಾಖೆಯ (ಟಿeಠಿ) ಹೊಸ ಶಿಕ್ಷಣ ನೀತಿಯಲ್ಲಿ ವಿವಿಧ ಹುದ್ದೆಗಳ ಭರ್ತಿ ಮಾಡುವರಿದ್ದು ವ್ಯವಸ್ಥಾಪಕ ಹುದ್ದೆಯನ್ನು ಕೊಡಿಸುವುದಾಗಿ ನಂಬಿಸಿ ನಮ್ಮನ್ನು ಎಂಬ ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಸಿರುತ್ತಾರೆ.

ಸುಮಾರು ೬ ತಿಂಗಳು ಕಳೆದರೂ ಕೇಂದ್ರ ಸರ್ಕಾರದಿಂದ ಹುದ್ದೆಯ ಕುರಿತು ಯಾವುದೇ ಲಿಖಿತ ಪರೀಕ್ಷೆ & ಯಾವುದೇ ಜಾಹಿರಾತುಗಳಲ್ಲಿ ಬಂದಿರುವುದಿಲ್ಲ. ಆ ಬಗ್ಗೆ ಶಿಕ್ಷಣ ಇಲಾಖೆ ಹಾಗೂ ಬಿಜೆಪಿಯ ಕೆಲ ಮುಖಂಡರಗಳನ್ನು ಸಂಪರ್ಕಿಸಿದಾಗ ರಾಘವೇಂದ್ರ ಕಟ್ಟಿ & ಶರಣಪ್ಪ ತಿಕೋಟಿಕರ ಹಾಗೂ ಪ್ರೇಮಾ ಪ್ರಭಾಕರ ಪುದುರ ಮತ್ತೆ ಇನ್ನುಳಿದವರು ಮೋಸ, ವಂಚನೆ ಮಾಡಿದ್ದು ಅರಿವಾಗಿದೆ ಎಂದು ವಿವರಿಸಿದರು.

ಹಣವನ್ನು ಹಿಂತಿರುಗಿಸಲು ಕೇಳಿದಾಗ ಇಲ್ಲದ ಸಬಾಬುಗಳನ್ನು ಹೇಳುತ್ತಾ ಪ್ರತಿ ದಿನ ನಾಳೆ, ನಾಳೆ ಎಂದು ಸುಳ್ಳು ನೆಪಗಳನ್ನು ಹೇಳಿ ಕಾಲಹರಣ ಮಾಡುತ್ತಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೀವೇನಾದರು ನಮ್ಮ ಮೇಲೆ ದೂರು ಕೊಡಲು ಮುಂದಾದರೆ ನಮ್ಮ ಜೊತೆಗೆ ದೊಡ್ಡ ದೊಡ್ಡ ಅಧಿಕಾರಿಗಳಿದ್ದಾರೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.

ಈ ಕುರಿತು ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ ಬುಧವಾರ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ತಕ್ಷಣ ರಾಜ್ಯ ಸರಕಾರ ವಿಶೇಷ ಮುತುವರ್ಜಿಯಿಂದ ತನಿಖೆಗೆ ಒಪ್ಪಿಸಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜನ ಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ  ರಾಘವೇಂದ್ರ ಶೆಟ್ಟಿ ಸೇರಿದಂತೆ ಅನೇಕ ನೋಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *