ರಾಜ್ಯ

ಶೇ. 76 ಜನರಿಗೆ ಕರೋನಾ ಲಕ್ಷಣಗಳೇ ಇಲ್ಲ….!

ಬೆಂಗಳೂರು prajakiran.com : ರಾಜ್ಯದ ಶೇ. 24 ರಷ್ಟು ಜನರಿಗೆ ಮಾತ್ರ ಈವರೆಗೆ ಕರೋನಾ ವೈರಸ್ ಇರುವ ರೋಗ ಲಕ್ಷಣಗಳು ಕಂಡು ಬಂದಿವೆ. ಆದರೆ ಶೇ. 76 ಜನರಿಗೆ ಯಾವುದೇ ರೋಗ ಲಕ್ಷಣಗಳು ಕಂಡು ಬಾರದಿರುವುದು ಎಲ್ಲರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ರಾಜ್ಯದ ಒಟ್ಟು 848 ಜನ ಸೋಂಕಿತರ ಪೈಕಿ 645 ಜನರಿಗೆ ಕರೋನಾ ರೋಗ ಲಕ್ಷಣಗಳೇ ಇಲ್ಲ ಎಂಬ ಆತಂಕಕಾರಿ ಸಂಗತಿ ಹೊರ ಬಿದ್ದಿದೆ. ಇದನ್ನು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೂಡ […]

ರಾಜ್ಯ

ಮಹಾಮಾರಿ ಕರೊನಾ ಹಿನ್ನೆಲೆ : ಸರಳ ವಿವಾಹ ಮೂಲಕ ದಾಂಪತ್ಯಕ್ಕೆ ಕಾಲಿರಿಸಿದ ಪತ್ರಕರ್ತ  

ಧಾರವಾಡ prajakiran.com :  ಮಹಾಮಾರಿ ಕರೊನಾ ಹಿನ್ನೆಲೆಯಲ್ಲಿ ಯುವ ಪತ್ರಕರ್ತ  ರವಿ ಗೋಸಾವಿ ಹಾಗೂ ಶಿವಲೀಲಾ ಜವಳಿ ಭಾನುವಾರ ಸರಳ ವಿವಾಹ ಮೂಲಕ ದಾಂಪತ್ಯಕ್ಕೆ ಕಾಲಿರಿಸಿದರು. ಧಾರವಾಡ ಜಿಲ್ಲೆಯ ಕೊಟಬಾಗಿಯ ಸ್ವಗೃಹದಲ್ಲಿ ತಂದೆ ತಾಯಿ ಹಾಗೂ ಕೆಲವೇ ಕೆಲವು ಕುಟುಂಬಸ್ಥರ  ಸಮ್ಮುಖದಲ್ಲಿ ಸತಿಪತಿಗಳಾದರು. ಈ ಮದುವೆಯ ಇನ್ನೊಂದು ವಿಶೇಷವೆಂದರೆ ಮೊದಲು ಇಬ್ಬರು ಪರಸ್ಪರ ಕೈಗೆ ಸ್ಯಾನಿಟೇಶರ್ ಹಚ್ಚಿಕೊಂಡ ಬಳಿಕಅಕ್ಷತೆ ಹಾಕಿಕೊಂಡರು. ಜೊತೆಗೆ ಮುಖಕ್ಕೆ ಮಾಸ್ಕ್ ಹಾಕಿಕೊಂಡೇ ಮದುವೆಯಾದರು. ಇಬ್ಬರು ಪತ್ರಿಕೋದ್ಯಮದಲ್ಲಿ ಪದವಿಧರರಾಗಿದ್ದು, ಪರಸ್ಪರ ಪ್ರೀತಿಸಿ, ಎರಡು ಕುಟುಂಬದವರ […]

ರಾಜ್ಯ

ಮಹಿಳೆ ಮೇಲೆ ಹಲ್ಲೆ ಮಾಡಿದ ತಾ.ಪಂ ಸದಸ್ಯ ವಿರುದ್ದ ಪ್ರಕರಣ ದಾಖಲು

ಗಜೇಂದ್ರಗಡ(ಗದಗ) prajakiran.com : ಸಮೀಪದ ಕಾಲಕಾಲೇಶ್ವರ ಗ್ರಾಮದ ತಾಲೂಕು ಪಂಚಾಯತ  ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಶಶಿಧರ ಹೂಗಾರ ಹಾಗೂ ಗ್ರಾ.ಪಂ ಸದಸ್ಯ ಕಳಕಪ್ಪ ಹೂಗಾರ ವಿರುದ್ದ ಮಹಿಳೆ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ಅದೇ ಗ್ರಾಮದ ಮಹಿಳೆಯೊಬ್ಬಳ ಮೇಲೆ ಮಾನಹಾನಿ ಯತ್ನ ಹಾಗೂ ಹಲ್ಲೆ ನಡೆಸಿ, ಗುಂಡಾ ವರ್ತನೆ  ತೋರಿದ ಹಿನ್ನೆಲೆಯಲ್ಲಿ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ. ಪ್ರಕರಣದ ವಿವರ : ಕಾಲಕಾಲೇಶ್ವರ ಗ್ರಾಮದ ಸುಮಿತ್ರಾ ಶಂಕ್ರಪ್ಪ ಹೂಗಾರ(೪೯) ಅವರ ಬೆಲೆ ಬಾಳುವ […]

ರಾಜ್ಯ

ಪ್ರಶಾಂತ ಕೇಕರೆ, ನಾಗರಾಜ ಗೌರಿ, ತಲಾಟಿ ವೀರೇಶ ಬ್ಯಾಹಟ್ಟಿ ಸೇರಿ ಹಲವರ ವಿಚಾರಣೆ ನಡೆಸಿದ ಸಿಬಿಐ

ಧಾರವಾಡ Prajakiran.com :  ಧಾರವಾಡ ಜಿಲ್ಲಾ ಪಂಚಾಯತ್ ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ  ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಭಾನುವಾರವೂ ಹಲವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದರು. ಮಾಜಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಶಾಂತ ಕೇಕರೆ, ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ, ತಲಾಟಿ ವೀರೇಶ ಬ್ಯಾಹಟ್ಟಿ ಸೇರಿದಂತೆ ಹಲವರನ್ನು ಭಾನುವಾರ ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು ಕಂಡು ಬಂತು.   ನಿನ್ನೇಯಷ್ಟೇ  ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಶಿವಾನಂದ ಕರಿಗಾರ, ಕಾಂಗ್ರೆಸ್ ಮುಖಂಡ ನಾಗರಾಜ […]

ರಾಜ್ಯ

ಕರಾಳ ಭಾನುವಾರ : ರಾಜ್ಯದಲ್ಲಿ ಒಂದೇ ದಿನ 53 ಕೇಸ್ ದೃಢ

ಬೆಂಗಳೂರು prajakiran.com : ರಾಜ್ಯದಲ್ಲಿ ಮಹಾಮಾರಿ ಕರೋನಾಅಟ್ಟಹಾಸ ಮುಂದುವರೆದಿದ್ದು, ಭಾನುವಾರ ಸೊಂಕಿತರ ಸಂಖ್ಯೆ 847ಕ್ಕೆ ಏರಿಕೆಯಾಗಿದೆ. ಕಳೆದ ಮೂರು ದಿನಗಳಿಂದ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ. ದೆಹಲಿಯ ನಿಜಾಮೋದ್ದಿನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಿ ನಂತರ ಗುಜರಾತ್ ನ ಅಹಮದಾಬಾದಗೆ ಹೋಗಿದ್ದರು. ಅವರನ್ನು ಗುಜರಾತ್ ಸರಕಾರ ಮರಳಿ ಕಳುಹಿಸಿತ್ತು. ಲಾಕ್ ಡೌನ್ ಹಿನ್ನಲೆಯಲ್ಲಿ ಅವರನ್ನು ಅಲ್ಲಿ ಕ್ವಾರಂಟೆನ್ ಮಾಡಿ ಆನಂತರ ಕಳುಹಿಸಲಾಗಿತ್ತು. ಆದರೂ ಇದೀಗ ಶಿಕಾರಿಪುರದ 7 ಜನರಲ್ಲಿ ಹಾಗೂ ತೀರ್ಥ ಹಳ್ಳಿಯ ಒಬ್ಬರಿಗೆ ಸೋಂಕು […]

ರಾಜ್ಯ

ಹೊರ ರಾಜ್ಯಗಳಿಂದ ಬರುವ ಎಲ್ಲರಿಗೂ ಸರ್ಕಾರಿ ಕ್ವಾರಂಟೈನ್

ಧಾರವಾಡ prajakiran.com : ಅತಿಹೆಚ್ಚು ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ್, ತಮಿಳುನಾಡು ಹಾಗೂ ದೆಹಲಿ ರಾಜ್ಯಗಳಿಂದ ಬರುವ ಎಲ್ಲರನ್ನೂ ಸರ್ಕಾರಿ ಕ್ವಾರಂಟೈನ್ ಗೆ ಒಳಪಡಿಸಲಾಗುವುದು ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು. ಹೊರರಾಜ್ಯಗಳಿಂದ ಬರುವ ಜನರಿಗೆ ಎಲ್ಲರನ್ನೂ ಕೃಷಿ ವಿ.ವಿ.ಆವರಣದಲ್ಲಿ ತಪಾಸಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ ಮಾತನಾಡಿ, ಸದ್ಯ ಕಿಮ್ಸ್ ಹೊರರೋಗಿ ವಿಭಾಗದಲ್ಲಿ ೮೦೦, ಒಳರೋಗಿ  ೫೦೦ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ, ತುರ್ತು ಚಿಕಿತ್ಸಾ ಘಟಕದಲ್ಲಿಯೂ ರೋಗಿಗಳಿದ್ದಾರೆ. […]

ರಾಜ್ಯ

ಬಹುರಾಷ್ಟ್ರೀಯ ಕಂಪನಿಗಳ ಹೂಡಿಕೆದಾರರ ಆಕರ್ಷಿಸಲು ಕಾರ್ಯಪಡೆ ರಚನೆ

ಧಾರವಾಡ prajakiran.com : ವಿಶ್ವವ್ಯಾಪಿಯಾಗಿ ಕರೊನಾ ಹರಡುತ್ತಿರುವ ಹಿನ್ನಲೆಯಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ಚೈನಾ ದೇಶದಿಂದ ಹೊರಬರಲು ಮುಂದಾಗಿವೆ. ಮುಂಬರುವ ಒಂದು ವರ್ಷದ ಅವಧಿಯಲ್ಲಿ ಭಾರತ  ಮತ್ತು ಕರ್ನಾಟಕ ದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಅಂತಾರಾಷ್ಟ್ರೀಯ ಬಂಡವಾಳ ಹೂಡಿಕೆದಾರರು ಉತ್ಸುಕರಾಗಿದ್ದಾರೆ. ಇವರನ್ನು ಸೆಳೆಯಲು ರಾಜ್ಯ ಸರ್ಕಾರದಿಂದ ಪ್ರತ್ಯೇಕ ಕಾರ್ಯಪಡೆ ರಚಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಹೇಳಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಕರೊನಾ […]

ರಾಜ್ಯ

ಶಿವಾನಂದ ಕರಿಗಾರ, ನಾಗರಾಜ ಗೌರಿ ಸೇರಿ ಹಲವರ ವಿಚಾರಣೆ ನಡೆಸಿದ ಸಿಬಿಐ

ಧಾರವಾಡ Prajakiran.com : ಧಾರವಾಡದ ಹೆಬ್ಬಳ್ಳಿ ಬಿಜೆಪಿ ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಶನಿವಾರವೂ ಹಲವರ ವಿಚಾರಣೆ ನಡೆಸಿದರು. ಧಾರವಾಡ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಶಿವಾನಂದ ಕರಿಗಾರ, ಕಾಂಗ್ರೆಸ್ ಪಕ್ಷದ ಮುಖಂಡ ನಾಗರಾಜ ಗೌರಿ ಅವರನ್ನು ಶನಿವಾರ ಮಧ್ಯಾಹ್ನ ಹಲವು ಗಂಟೆಗಳಿಂದ ವಿಚಾರಣೆ ನಡೆಸುತ್ತಿದ್ದಾರೆ. ಯೋಗೀಶಗೌಡ ಗೌಡರ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದಾಗ ಶಿವಾನಂದ ಕರಿಗಾರ ಜೊತೆಗೆ ಒಡನಾಟ ಹೊಂದಿದ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. ಆನಂತರ ಇವರು ನಾಗರಾಜ ಗೌರಿ, ಜಿಪಂ […]

ರಾಜ್ಯ

ಪಾದರಾಯನಪುರದ ಪುಂಡನಿಗೂ ತಗುಲಿದ ಕರೋನಾ ಸೋಂಕು

ಬೆಂಗಳೂರು prajakiran.com : ಪಾದರಾಯನಪುರದ ಗಲಾಟೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಪುಂಡನಿಗೂ ಕರೋನಾ ಸೋಂಕು ಹರಡಿದೆ. ಈತ ಗಲಾಟೆ ನಂತರ ಬೆಂಗಳೂರಿನಿಂದ ತಪ್ಪಿಸಿಕೊಂಡು  ತುಮಕೂರಿನ ಶಿರಾ ನಗರದ ಕೋಟೆ ಬೀದಿಯ ಸಂಬಂಧಿ ಮನೆಯಲ್ಲಿ ಅವಿತುಕೊಂಡು ಕುಳಿತಿದ್ದ. ಪೊಲೀಸರಿಂದ ತಪ್ಪಿಸಿಕೊಂಡು ಬಂದಿದ್ದರೂ ಕರೋನಾದಿಂದ ತಪ್ಪಿಸಿಕೊಳ್ಳಲು ಆಗಿಲ್ಲ ಎಂಬುದು ಈ ಪ್ರಕರಣದಲ್ಲಿ ಖಚಿತಗೊಂಡಿದೆ. ಕರೋನಾ ಸೋಂಕು ಯಾರು ಎಲ್ಲೆ ಅವಿತುಕೊಂಡು ಕುಳಿತರೂ ಬಿಡಲ್ಲ ಎಂಬುದು ಇಲ್ಲಿ ಗಮನಿಸಬಹುದು.   ಇದರಿಂದಾಗಿ ಇದೀಗ ಆತನ ಸಂಬಂಧಿಕರನ್ನು ತುಮಕೂರು ಜಿಲ್ಲಾಡಳಿತ ಹುಡುಕಾಡಿ ಅವರನ್ನು […]

ರಾಜ್ಯ

ರಾಜ್ಯದಲ್ಲಿ ಶನಿವಾರ ಮತ್ತೇ 36 ಸೋಂಕಿತರು ಪತ್ತೆ : ಹಲವು ಜಿಲ್ಲೆಗಳಲ್ಲಿ ಆತಂಕ

ಬೆಂಗಳೂರು prajakiran.com : ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ರಾಜ್ಯದಲ್ಲಿ ಶನಿವಾರ ಮತ್ತೇ 36 ಸೋಂಕಿತರು ಪತ್ತೆಯಾಗಿದ್ದಾರೆ. ಆ ಮೂಲಕ ರಾಜ್ಯದ  ಹಲವು ಜಿಲ್ಲೆಗಳಲ್ಲಿ ಆತಂಕ ಮೂಡಿಸಿದೆ. ರಾಜ್ಯದ ರಾಜಧಾನಿ ಬೆಂಗಳೂರಿನ ಹೋಂಗಸಂದ್ರದಲ್ಲಿ 5 ಜನರಿಗೆ ಕರೋನಾ ಪಾಸಿಟಿವ್ ಬಂದಿದೆ. ಅವರೆಲ್ಲರೂ ಬಿಹಾರಿ ಕಾರ್ಮಿಕರಾಗಿದ್ದು, ಅವರನ್ನು ಕ್ವಾರಂಟನ್ ನಲ್ಲಿಡಲಾಗಿತ್ತು.ಅವರು ಗುಂಪು ಗುಂಪಾಗಿ ಕೂಡಿದ್ದರಿಂದ 5 ಜನರಿಗೆ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಬುಲೇಟಿನ್ ನಲ್ಲಿ ಖಚಿತಪಟ್ಟಿದೆ. ಅದೇ ರೀತಿ ಬೆಂಗಳೂರಿನ ಪಾದರಾಯನಪುರದಲ್ಲಿ 7 ಪ್ರಕರಣ ಬೆಳಕಿಗೆ […]