ಬೆಂಗಳೂರು prajakiran.com : ಕರೋನಾ ಹೆಮ್ಮಾರಿ ಕರುನಾಡನ್ನು ಬೆಂಬಿಡದೆ ಕಾಡುತ್ತಲೇ ಇದೆ. ಸೋಮವಾರ ಮತ್ತೇ ಕರೋನಾ ಸೋಂಕು ನೂರರ ಸಮೀಪ ಬಂದಿದೆ. ಬೆಳಗ್ಗೆ 69 ಪ್ರಕರಣ ಬಂದರೆ, ಸಂಜೆ ಮತ್ತೇ 24 ಕೇಸ್ ಪತ್ತೆಯಾಗುವ ಮೂಲಕ 93ಕ್ಕೆ ಬಂದು ನಿಂತಿದೆ. ಬೆಳಗ್ಗೆಯಷ್ಟೇ ಉಡುಪಿಯಲ್ಲಿ 16 ಪ್ರಕರಣಗಳು ದೃಢಪಟ್ಟಿದ್ದವು. ಮತ್ತೇ ಸಂಜೆ ವೇಳೆ ಬರೋಬ್ಬರಿ 16 ಪ್ರಕರಣಗಳು ಕಾಣಿಸಿಕೊಳ್ಳುವ ಮೂಲಕ ಒಂದೇ ದಿನ 32 ಪ್ರಕರಣಗಳು ಕೇವಲ ಒಂದೇ ಜಿಲ್ಲೆಯಲ್ಲಿ ಕಾಣಿಸಿಕೊಂಡಂತಾಗಿದೆ. ಇನ್ನೂ ಬಿಸಲನಾಡು ಕಲಬುರಗಿಯಲ್ಲಿ ಬೆಳಗ್ಗೆಯಷ್ಟೇ 14 […]
ರಾಜ್ಯ
ಮುಂಬೈನಿಂದ ಬೆಳಗಾವಿಗೆ ಬಂದ ಬಾಲಕನಿಗೆ ಕರೋನಾ ಸೋಂಕು
ಬೆಳಗಾವಿ prajakiran.com : ಸೋಮವಾರ ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಕೋವಿಡ್ 19 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಅದರಲ್ಲೂ ಮುಂಬೈನಿಂದ ಬಂದಿರುವ ಬಾಲಕನಿಗೆ ತಗುಲಿರುವ ಸೊಂಕು ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ. ಬೆಳಗಾವಿ ಜಿಲ್ಲೆಯ ಗಡಿ ಭಾಗದ ಹಂದಿಗನೂರು ಗ್ರಾಮದ ಹತ್ತು ವರ್ಷದ ಬಾಲಕನಿಗೆ ಸೊಂಕು ಧೃಡಪಟ್ಟಿದೆ. ಸೊಂಕು ಧೃಡವಾದ ಹಿನ್ನಲೆಯಲ್ಲಿ ನಿನ್ನೆ ತಡರಾತ್ರಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆ ಮೂಲಕ ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ 128ಕ್ಕೆ ಏರಿಕೆಯಾಗಿದೆ. ಆ 10 ವರ್ಷದ ಬಾಲಕನನ್ನು […]
ವಿದ್ಯಾನಗರಿ ಧಾರವಾಡದ 2.5 ವರ್ಷದ ಮಗು ಸೇರಿ ಮತ್ತೆ ಮೂವರಿಗೆ ವಕ್ಕರಿಸಿದ ಸೋಂಕು
ಧಾರವಾಡ prajakiran.com: ವಿದ್ಯಾನಗರಿ ಧಾರವಾಡ ಜಿಲ್ಲೆಗೆ ಕಳೆದ ಮೂರು ದಿನಗಳಿಂದ ಮಹಾಮಾರಿ ಕರೋನಾ ವೈರಸ್ ಬೆಂಬಿಡದೆ ಕಾಡುತ್ತಿದೆ. ಸೋಮವಾರ ಬೆಳಕಿಗೆ ಬಂದ ಮೂರು ಪ್ರಕರಣಗಳಲ್ಲಿ ಒಂದು 2.5 ವರ್ಷದ ಮಗು ಸೇರಿ ಮೂವರಿಗೆ ಕರೋನಾ ಸೋಂಕು ವಕ್ಕರಿಸಿರುವುದು ದೃಢಪಟ್ಟಿದೆ. ಸೋಂಕಿತರನ್ನು ಪಿ 2156 33 ವರ್ಷದ ಮಹಿಳೆ ಎಂದು ಗುರುತಿಸಲಾಗಿದ್ದು, ಇವರಿಗೆ ಪಿ-1942, ಪಿ-1943 ಹಾಗೂ ಪಿ-1944 ಹಾಗೂ ಪಿ 1945 ಅವರಿಂದ ಹರಡಿದೆ. ಅವರಿಗೆ ಧಾರವಾಡದ ನಿಯೋಜಿತ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ . ಅದೇ […]
ಗ್ರೀನ್ ಜೋನ್ ರಾಮನಗರಕ್ಕೆ ವಕ್ಕರಿಸಿದ ಕರೋನಾ ಕಂಟಕ
ರಾಮನಗರ prajakiran.com : ಕೊನೆಗೂ ಗ್ರೀನ್ ಜೋನ್ ನಲ್ಲಿದ್ದ ರಾಮನಗರಕ್ಕೆ ಕರೋನಾ ಕಂಟಕ ವಕ್ಕರಿಸಿದೆ. ಮಾಗಡಿ ತಾಲೂಕಿನ ಗ್ರಾಮವೊಂದರ ಎರಡು ವರ್ಷದ ಮಗುವಿಗೆ ಕರೋನಾ ಸೋಂಕು ತಗುಲಿದೆ. ಇವರ ತಂದೆ ತಾಯಿಗೆ ವರದಿ ನೆಗೇಟಿವ್ ಬಂದರೆ ಮಗುವಿಗೆ ಮಾತ್ರ ಪಾಸಿಟಿವ್ ಬಂದಿದೆ. ಆ ಮೂಲಕ ರಾಮನಗರ ಜಿಲ್ಲೆಯ ಜನತೆಯ ನೆಮ್ಮದಿಯೂ ಭಂಗವಾಗಿದೆ. ಇವರ ತಂದೆ ತಾಯಿ ಚೈನ್ನೈನಿಂದ ರಾಮನಗರಕ್ಕೆ ಬಂದಿದ್ದರು. ಇದೀಗ ರಾಮನಗರಕ್ಕೆ ಚೈನ್ನೈ ಕಂಟಕ ತಗುಲಿದೆ. ಈ ಹಿಂದೆ ರಾಮನಗರ ಜಿಲ್ಲೆಯ ಕೆಲವರನ್ನು ಕೇಂದ್ರ ಕಾರಾಗೃಹಕ್ಕೆ […]
ರಾಜ್ಯದಲ್ಲಿ ಇಂದು ಬೆಳಗ್ಗೆ 69 ಪ್ರಕರಣ ದೃಢ : ಉಡುಪಿ, ಕಲಬುರಗಿ, ಯಾದಗಿರಿಯಲ್ಲಿ ಹೆಚ್ಚು ಸೋಂಕಿತರು
ಬೆಂಗಳೂರು prajakiran.com : ಕಳೆದ ನಾಲ್ಕು ದಿನಗಳಿಂದ ಅತಿಹೆಚ್ಚು ಸೋಂಕಿತರನ್ನು ಕಂಡಿದ್ದ ಕರುನಾಡು ಸೋಮವಾರ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಹಾಗೂ ಸಮಾಧಾನ ಪಡುವಂತಾಗಿದೆ. ರಾಜ್ಯದಲ್ಲಿ ಸೋಮವಾರ ಬೆಳಗ್ಗೆ 69 ಪ್ರಕರಣ ದೃಢಪಟ್ಟಿದ್ದು, ಸಾವಿನ ಸಂಖ್ಯೆ ಕೂಡ ಒಂದು ಏರಿಕೆಯಾಗಿದ್ದು, ಆ ಮೂಲಕ ರಾಜ್ಯದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2158ಕ್ಕೆ ತಲುಪಿದೆ. ಉಡುಪಿಯಲ್ಲಿ ಸೋಮವಾರ ಮತ್ತೇ 16 ಪ್ರಕರಣಗಳು ದೃಢಪಟ್ಟಿವೆ. ಉಡುಪಿಯ 14 ಜನರಿಗೆ ಮಹಾರಾಷ್ಟ್ರ ಹಾಗೂ ಮುಂಬೈ ಕಂಟಕ ಎದುರಾದರೆ, […]
ಪೊಲೀಸ್ ಪೇದೆ ಬದಲಾಗಿ ಕಾನ್ಸ್ ಟೇಬಲ್ ಪದ ಬಳಸುವಂತೆ ಆದೇಶ : ವೈರಲ್ ಆದ ಹಳೆಯ ಸುದ್ದಿ
ಬೆಂಗಳೂರು prajakiran.com : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರನ್ನು ಈವರೆಗೆ ಎಲ್ಲರೂ ಪೊಲೀಸ್ ಪೇದೆ ಎಂದು ಕರೆಯುತ್ತಿದ್ದರು. ಆದರೆ ಇದೀಗ ಆ ಪದ ಸೂಕ್ತವಲ್ಲ ಎಂದು ನಿರ್ಧರಿಸಿರುವ ಪೊಲೀಸ್ ಇಲಾಖೆ ಇದೀಗ ಪೊಲೀಸ್ ಪೇದೆ ಎಂಬ ಪದದ ಬದಲಾಗಿ ಕಾನ್ಸ್ ಟೇಬಲ್ ಪದವನ್ನು ಬಳಸುವಂತೆ ಕರ್ನಾಟಕ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಈ ಕುರಿತಂತೆ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಾದಂತ ಅಜಯ ಕುಮಾರ ಸಿಂಗ್ ಅವರು 2009ರಲ್ಲಿಯೇ ಆದೇಶ ಹೊರಡಿಸಿದ್ದರು. ಈಗ ಸಾಮಾಜಿಕ ಜಾಲತಾಣದಲ್ಲಿ […]
ಬೆಳಗಾವಿಯ 9 ಜನರು ಗುಣಮುಖ : ಬಿಮ್ಸ್ ಆಸ್ಪತ್ರೆಯಿಂದ ಬಿಡುಗಡೆ
ಬೆಳಗಾವಿ prajakiran.com : ಕೋವಿಡ್-೧೯ ಸೋಂಕು ತಗುಲಿದ್ದ ಬೆಳಗಾವಿ ಜಿಲ್ಲೆಯ 9 ಜನರು ಸಂಪೂರ್ಣ ಗುಣಮುಖರಾಗಿದ್ದು, ಭಾನುವಾರಅವರನ್ನು ಜಿಲ್ಲೆಯ ನಿಯೋಜಿತ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ 9 ಜನರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಬಿಡುಗಡೆ ಹೊಂದಿದವರ ವಿವರ: ಪಿ-545, ಪಿ-700, ಪಿ- 713,ಪಿ-714, ಪಿ-715, ಪಿ-718, ಪಿ-720, ಪಿ-722, ಪಿ-719 ನೇ ಸೋಂಕಿತರೆಲ್ಲರೂ ಗುಣಮುಖರಾಗಿದ್ದಾರೆ. ಇದರಲ್ಲಿ ಐವರು […]
ಗ್ರೀನ್ ಜೋನ್ ನಲ್ಲಿದ್ದ ಯಾದಗಿರಿ ಜಿಲ್ಲೆಯಲ್ಲಿ ಕೇವಲ ಎರಡೇ ದಿನಕ್ಕೆ 111 ಸೋಂಕಿತರು
ಯಾದಗಿರಿ prajakiran.com : ಕಳೆದ 55 ದಿನಗಳಿಂದ ಯಾದಗಿರಿ ಜಿಲ್ಲೆ ಸಂಪೂರ್ಣ ಗ್ರೀನ್ ಜೋನ್ ನಲ್ಲಿ ಇತ್ತು. ಆದರೆ ಕೇವಲ ಎರಡೇ ಎರಡು ದಿನದಲ್ಲಿ ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳುವಂತೆಮಾಡಿದೆ. ಭಾನುವಾರ ಬೆಳಗ್ಗೆ ಯಾದಗಿರಿ ಜಿಲ್ಲೆಯ ಆರು ಜನರಿಗೆ ಕರೋನಾ ಬಂದಿತ್ತು. ಸಂಜೆ ಮತ್ತೇ 18 ಜನರಿಗೆ ಬಂದಿದ್ದು, ಒಂದೇ ದಿನ ಒಟ್ಟು 24 ಜನ ಸೋಂಕಿತರಾಗಿದ್ದಾರೆ. ಆ ಮೂಲಕ ಎರಡೇ ದಿನದಲ್ಲಿ ಶತಕ ಬಾರಿಸಿದ ಯಾದಗಿರಿ ಜಿಲ್ಲೆ ನಿನ್ನೇ 87 ಸೋಂಕಿತರಿದ್ದರು. ಇವತ್ತು 24 ಜನರಿಗೆ ಸೋಂಕು […]
ಭಾನುವಾರ ಬೆಳಗ್ಗೆ 97, ಸಂಜೆ ಮತ್ತೇ 33 ಪ್ರಕರಣ ಪತ್ತೆ : ಎರಡು ಸಾವಿರ ದಾಟಿದ ರಾಜ್ಯದ ಸೋಂಕಿತರ ಸಂಖ್ಯೆ
ಬೆಂಗಳೂರು prajakiran.com : ಮಹಾಮಾರಿ ಕರೋನಾಅಟ್ಟ ಹಾಸ ಭಾನುವಾರವೂ ಮುಂದುವರೆದಿದ್ದು, ಬರೋಬ್ಬರಿ 130 ಜನರಿಗೆ ಒಂದೇ ದಿನ ವಕ್ಕರಿಸಿಕೊಂಡಿದೆ. ಆ ಮೂಲಕ ರಾಜ್ಯದ ಸೋಂಕಿತರ ಸಂಖ್ಯೆ ಎರಡು ಸಾವಿರ ಗಡಿ ದಾಟಿದೆ. ಇದು ರಾಜ್ಯದ ಸೋಂಕಿತರನ್ನಷ್ಟೇ ಅಲ್ಲದೆ, ಅವರು ಕುಟುಂಬಸ್ಥರನ್ನು ಕೂಡ ಬೆಚ್ಚಿಬೀಳಿಸಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದರೆ ತಪ್ಪಾಗಲಾರದು. ಭಾನುವಾರ ರಾಜ್ಯದ ಸೋಂಕಿತರ ಸಂಖ್ಯೆ2089ಕ್ಕೆ ಏರಿದೆ. ಈವರೆಗೆ ಒಟ್ಟು 654 ಸೋಂಕಿತರು ಗುಣಮುಖ ರಾಗಿದ್ದು, ಸಮಾಧಾನದ ಸಂಗತಿಯೆಂದರೆ ಇಂದು […]
ಹಾಸನದಲ್ಲಿ ಭಾನುವಾರ 14 ಪ್ರಕರಣ : ನೂರಕ್ಕೂ ಅಧಿಕ ಪೊಲೀಸರಿಗೆ ಕ್ವಾರಂಟೆನ್
ಹಾಸನ prajakiran.com : ಹಾಸನದಲ್ಲಿ ಭಾನುವಾರ ಮತ್ತೆ 14 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಒಬ್ಬ ಕಾನಸ್ಟೇಬಲ್ ಇದ್ದಾರೆ. ಹೀಗಾಗಿ ಅವರೊಂದಿಗೆ ಸಂಪರ್ಕ ಹೊಂದಿದ್ದ ನೂರಕ್ಕೂ ಅಧಿಕ ಪೊಲೀಸರಿಗೆ ಕ್ವಾರಂಟೆನ್ ಮಾಡಲಾಗಿದೆ. ಇವರು ಬೆಂಗಳೂರಿನಲ್ಲಿ ಡ್ಯೂಟಿ ಮುಗಿಸಿ ಹಾಸನಕ್ಕೆ ಬಂದಿದ್ದರು. ಹಾಸನಕ್ಕೆ ಹೋಗುವ ಮುಂಚೆ 60ಕ್ಕೂ ಹೆಚ್ಚು ಜನರಿಗೆ ಭೇಟಿಯಾಗಿದ್ದರು. ಇದು ಪೊಲೀಸರಿಗೆ ತೀವ್ರ ಆತಂಕ ಸೃಷ್ಟಿಸಿತ್ತು. ಅವರ ಟ್ರಾವೆಲ್ ಹಿಸ್ಟರಿ ಆರೋಗ್ಯ ಇಲಾಖೆಯನ್ನ ಬೆಚ್ಚಿಬೀಳಿಸಿದೆ. ಸೋಂಕಿತ ಕಾನಸ್ಟೇಬಲ್ ಸಂಪರ್ಕದಲ್ಲಿದ್ದ ಸಿವಿಲ್ ಹಾಗೂ ಕೆಎಸ್ ಆರ್ ಪಿ […]