ರಾಜ್ಯ

ಧಾರವಾಡ ಜಿಲ್ಲೆಯ ಅಮ್ಮಿನಬಾವಿ, ಹೆಬ್ಬಳ್ಳಿ, ಕಬ್ಬೆನೂರ, ಮುಗದ ಸೇರಿ ಹಲವು ಹಳ್ಳಿ ಪಾಸಿಟಿವ್

ಕೋವಿಡ್ 9242 ಪ್ರಕರಣಗಳು : 6531 ಜನ ಗುಣಮುಖ ಬಿಡುಗಡೆ* ಧಾರವಾಡ prajakiran.com : ಜಿಲ್ಲೆಯಲ್ಲಿ ಭಾನುವಾರ  194 ಕೋವಿಡ್  ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 9242 ಕ್ಕೆ ಏರಿದೆ. ಇದುವರೆಗೆ 6531 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2440 ಪ್ರಕರಣಗಳು ಸಕ್ರಿಯವಾಗಿವೆ.  68 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 271  ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. ಭಾನುವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು:* *ಧಾರವಾಡ ತಾಲೂಕು*: ಮಾಳಮಡ್ಡಿ,ಅಮ್ಮಿನಬಾವಿ,ಬೆಳ್ಳಿಗಟ್ಟಿ,ಸಾಧನಕೇರಿ,ಹೆಬ್ಬಳ್ಳಿ ಗ್ರಾಮದ […]

ರಾಜ್ಯ

ಬಿ.ಆರ್ ಟಿಎಸ್ ವಿರುದ್ದ ಆಮ್ ಆದ್ಮಿ ಪಕ್ಷದಿಂದ ಸಸ್ಯಾಗ್ರಹ ಚಳುವಳಿ…!

ಹುಬ್ಬಳ್ಳಿ prajakiran.com :  ಹುಬ್ಬಳ್ಳಿಯ ನವನಗರದ ಬಿ.ಆರ್ ಟಿಎಸ್ ಬಸ್ ನಿಲ್ದಾಣ ಎದುರು ಭಾನುವಾರ ಬಿಆರ್ ಟಿಎಸ್ ಯೋಜನಾ  ವ್ಯಾಪ್ತಿಯಲ್ಲಿ ಸಸಿ ನೆಡುವ ಹಾಗೂ ಅವಳಿನಗರದ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಆಮ್ ಆದ್ಮಿ ಪಕ್ಷದ ವತಿಯಿಂದ ಸಸ್ಯಾಗ್ರಹ ಚಳುವಳಿ ನಡೆಯಿತು. ‘ಬಿ.ಆರ್.ಟಿ.ಎಸ್. ಸಸ್ಯಾಗ್ರಹ ಚಳುವಳಿ’ ಗೆ ಅವಳಿ ನಗರದ ಪರಿಸರ ತಜ್ಞರು, ಸಂಘ ಸಂಸ್ಥೆಗಳ ಸದಸ್ಯರು ಮತ್ತು ಆಮ್ ಆದ್ಮಿ ಪಕ್ಷದ ಮುಖಂಡರು ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಈ ಚಳುವಳಿಗೆ […]

ರಾಜ್ಯ

ರಾಜ್ಯದಲ್ಲಿ ಭಾನುವಾರ 5938 ಕರೋನಾ, 68 ಸಾವು

ರಾಜ್ಯದಲ್ಲಿ 4996 ಜನ ಬಿಡುಗಡೆ ಬೆಂಗಳೂರು prajakiran.com : ರಾಜ್ಯದಲ್ಲಿ ಭಾನುವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 68 ಜನ ಸಾವನ್ನಪ್ಪಿದ್ದಾರೆ. ಮತ್ತೆ ಹೊಸದಾಗಿ 5938 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ   2,77,814  ಕ್ಕೆ  ಏರಿಕೆಯಾಗಿದೆ.  ಇಂದು ರಾಜ್ಯದಲ್ಲಿ 4996 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 1,89,564 ಜನ ಗುಣಮುಖರಾಗಿದ್ದು,  83,551 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  787 ಜನ ಐಸಿಯುನಲ್ಲಿ ಚಿಕಿತ್ಸೆ […]

ರಾಜ್ಯ

ಧಾರವಾಡದಲ್ಲಿ ಭಾನುವಾರ 194 ಜನರಿಗೆ ಕರೋನಾ, 3 ಸಾವು

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಭಾನುವಾರ ಸಂಜೆ ಮತ್ತೆ ಹೊಸದಾಗಿ  194 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ. ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 9245ಕ್ಕೆ ಏರಿಕೆಯಾದಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.  ಧಾರವಾಡ ಜಿಲ್ಲೆಯಲ್ಲಿ ಈವರೆಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದವರ ಸಂಖ್ಯೆ 271ಕ್ಕೆ ಏರಿದಂತಾಗಿದೆ.  ಭಾನುವಾರ ಜಿಲ್ಲೆಯಲ್ಲಿ 170 ಜನ ಬಿಡುಗಡೆಗೊಂಡಿದ್ದಾರೆ. ಆ ಮೂಲಕ ಈವರೆಗೆ 6525ಜನರು ಬಿಡುಗಡೆಗೊಂಡತಾಗಿದೆ. ಇನ್ನೂ 2449ಸಕ್ರಿಯ ಕರೋನಾ ಸೋಂಕಿತರು  ಜಿಲ್ಲೆಯಲ್ಲಿದ್ದಾರೆ  ಎಂದು […]

ರಾಜ್ಯ

ಮಿಸ್ಟರ್ ಶಿವಕುಮಾರ್ ಯು ಆರ್ ಆನ್ ಬೇಲ್….!

ಹುಬ್ಬಳ್ಳಿ prajakiran.com : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದು, ಮಿಸ್ಟರ್ ಶಿವಕುಮಾರ್ ಯು ಆರ್ ಆನ್ ಬೇಲ್ ಎಂದು ತಿರುಗೇಟು ನೀಡಿದರು. ಅವರು ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೀವು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮಿಸ್ಟರ್ ಕಮಿಷನರ್ ಐ ವಿಲ್ ಸಿ ಯು ಅಂತೀರಾ. ಹಾಗಿದ್ದರೆ ನಾನು ನಿಮ್ಮನ್ನು ಹೇಳ್ತೇನಿ. ಮಿಸ್ಟರ್ ಶಿವಕುಮಾರ್ ಯು ಆರ್ ಆನ್ ಬೇಲ್ ಮರೆಯಬೇಡಿ, ನಿಮ್ಮ ಗುಂಡಾಗಿರಿ ನಡೆಯಲ್ಲ ಎಂದು ಕಡಕ್ […]

ರಾಜ್ಯ

ಧಾರವಾಡ ಜಿಲ್ಲೆಯ 30 ಜನರಿಗೆ ಪ್ಲಾಸ್ಮಾ ಚಿಕಿತ್ಸೆ

ಸಂಜೀವಿನಿಯಾಗಿರುವ ಹುಬ್ಬಳ್ಳಿಯ ಕಿಮ್ಸ್ ವೈದ್ಯರು ಹುಬ್ಬಳ್ಳಿ prajakiran.com : ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಕಿಮ್ಸ್ ವೈದ್ಯರು, ಅರೆವೈದ್ಯಕೀಯ ,ನರ್ಸಿಂಗ್ ಹಾಗೂ ಸಹಾಯಕ ಸಿಬ್ಬಂದಿ ತಂಡ ಕರೊನಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿ ಸರ್ಕಾರದ ವೈದ್ಯಕೀಯ ಸಂಸ್ಥೆಯೊಂದರ ಬಗ್ಗೆ ಜನಸಾಮಾನ್ಯರಲ್ಲಿದ್ದ ಭಾವನೆಗಳನ್ನೇ ಬದಲಿಸುವಲ್ಲಿ ಯಶಸ್ವಿಯಾಗಿದೆ. ಕಿಮ್ಸ್  ಚಿಕಿತ್ಸೆಗೆ ಹೋದವರು ಮರಳಿ ಮನೆಗೆ ಬರುವುದಿಲ್ಲ ಎಂಬ ತಪ್ಪು  ಗ್ರಹಿಕೆಯೊಂದು ಕೆಲವು ಜನವರ್ಗದಲ್ಲಿತ್ತು. ಈಗ ಈ ಕಲ್ಪನೆ ನಿವಾರಣೆಯಾಗುವಷ್ಟರ ಮಟ್ಟಿಗೆ ಕರೋನಾ ಚಿಕಿತ್ಸೆಯಲ್ಲಿ ಯಶಗಳಿಸಿದ್ದಾರೆ ಎಂದರೆ ತಪ್ಪಾಗಲಾರದು. ಹುಬ್ಬಳ್ಳಿಯ ಕಿಮ್ಸ್ ಉತ್ತರ ಕರ್ನಾಟಕದ […]

ರಾಜ್ಯ

ಕೊನೆಗೂ ಎಚ್ಚೆತ್ತ ಧಾರವಾಡ ಜಿಲ್ಲಾಡಳಿತ

ತೇಲಿಹೋದ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ  ಪರಿಹಾರ ಧಾರವಾಡ prajakiran.com : ತುಪ್ಪರಿಹಳ್ಳದ ಪ್ರವಾಹದಲ್ಲಿ ತೇಲಿಹೋದ ಹಾರೋಬೆಳವಡಿಯ ರೈತ ಮಡಿವಾಳಪ್ಪ ಜಕ್ಕಣ್ಣವರ ಅವರ ತಂದೆ ನಾಗಪ್ಪ ಅವರಿಗೆ 5 ಲಕ್ಷ ಮೊತ್ತದ ಪರಿಹಾರದ ಚೆಕ್ ಅನ್ನು ಭಾನುವಾರ ಧಾರವಾಡ ಜಿಲ್ಲಾಡಳಿತ ಕೊನೆಗೂ ಹಸ್ತಾಂತರಿಸಿ, ಅವರ ಕಣ್ಣೀರು ಒರೆಸುವ ಕೆಲಸ ಮಾಡಿದೆ. ತುಪರಿಹಳ್ಳದಲ್ಲಿ ಕೋಚ್ಚಿ ಹೋದ ರೈತ 56 ದಿನ ಕಳೆದರೂ ನಾಪತ್ತೆ, ಹಿರಿಯ ಜೀವಗಳ ಕಣ್ಣೀರು ಒರೆಸದ ಜಿಲ್ಲಾಡಳಿತ ಎಂದು ಈ ಕುರಿತು ಪ್ರಜಾಕಿರಣ.ಕಾಮ್ ಸಮಗ್ರ ವರದಿ ಪ್ರಕಟಿಸಿತ್ತು. […]

ರಾಜ್ಯ

ಬಿಜೆಪಿ ಮುಖಂಡನಿಂದ ಎರಡನೇ ಹೆಂಡತಿ ಮೇಲೆ ಮತ್ತೆ ಮಾರಣಾಂತಿಕ ಹಲ್ಲೆ….!

ಹುಬ್ಬಳ್ಳಿ prajakiran.com : ಹಿಂದೊಮ್ಮೆ ತನ್ನ 27 ಲಕ್ಷ ಮರಳಿಸುವಂತೆ ಕೇಳಲು ಹೋದ ಎರಡನೇ ಹಂಡತಿಯನ್ನು ಓಣಿಯಲ್ಲಿಯೇ ಓಡಾಡಿಸಿ ಬಡಿದಿದ್ದ ಬಿಜೆಪಿ ಮುಖಂಡ ಬಸವರಾಜ ಕೆಲಗೇರಿ ಇದೀಗ ಮತ್ತೊಮ್ಮೆತನ್ನ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಶನಿವಾರ ತನ್ನ ಮಗಳ ಕಾಲೇಜ್ ಶಿಕ್ಷಣಕ್ಕಾಗಿ ಹಣ ನೀಡುವಂತೆ ಕೇಳಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದರಿಂದಾಗಿ ರಕ್ತಸಿಕ್ತಗೊಂಡ ಮಹಿಳೆ ಅನಿತಾ ಕೋಮಾ ಸ್ಥಿತಿಗೆ ಹೋಗಿದ್ದಾಳೆ. ಅವಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಷ್ಟೆಲ್ಲಾ ಅವಾಂತರವಾದರೂ ಹುಬ್ಬಳ್ಳಿ ಪೊಲೀಸರು […]

ರಾಜ್ಯ

ಕೋವಿಡಗೆ ಹುಬ್ಬಳ್ಳಿ-ಧಾರವಾಡ ನಿವೃತ್ತ ಎಸಿಪಿ ಬಲಿ….!

ಹುಬ್ಬಳ್ಳಿ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕೋವಿಡ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ಸಾವನ್ನಪ್ಪಿದ್ದವರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಳವಾಗುತ್ತ ಸಾಗಿದೆ. ಹುಬ್ಬಳ್ಳಿ-ಧಾರವಾಡ ನಿವೃತ್ತ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಎಂ.ವಿ ನಾಗನೂರುಅವರು ಕೋವಿಡ್ ಸೋಂಕಿನಿಂದ ಚಿಕಿತ್ಸೆ ಫಲಿಸದೆ ಅವರು ನಿನ್ನೇ ರಾತ್ರಿ ಸಾವನ್ನಪ್ಪಿದ್ದಾರೆ. ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳಲು ಅವರಿಗೆ ಕಿಮ್ಸ್ ನಲ್ಲಿ  ಪಾಸ್ಲಾ ಚಿಕಿತ್ಸೆ ಕೋಡಲು ತಯಾರಿ  ನಡೆದಿತ್ತು. ಒಬ್ಬ ಪ್ಲಾಸ್ಮಾ ದಾನಿ ಮುಂದೆ ಬಂದರೂ ಅವರ ಹಿಮೋಗ್ಲೋಬಿನ್ […]

ರಾಜ್ಯ

ಧಾರವಾಡದಲ್ಲಿ ಲಾರಿಯಲ್ಲಿಯೇ ಗಣೇಶ ಪ್ರತಿಷ್ಠಾಪನೆ…!

ಧಾರವಾಡ prajakiran.com : ಧಾರವಾಡದ ಸುಪರ್  ಮಾರ್ಕೆಟ್ ನಲ್ಲಿ ಶನಿವಾರ ಶ್ರೀ ಗಜಾನನ ಉತ್ಸವ ಸಮಿತಿ ಇವರ ವತಿಯಿಂದ ಈ ವರ್ಷ ಸಾರ್ವಜನಿಕ ಗಣೇಶೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಕರೋನಾ ಹಾವಳಿಯಿಂದಾಗಿ ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಸರ್ವರ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿ ವರ್ಷದಂತೆ ಅದ್ದೂರಿಯಾಗಿ ಆಚರಿಸದೆ ಶ್ರದ್ದಾ ಭಕ್ತಿಯಿಂದ ನಡೆಯಿತು. ಅಲ್ಲದೆ, ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗಣೇಶ ವಿಗ್ರಹವನ್ನು ಲಾರಿಯೊಂದರಲ್ಲಿಯೇ ಸುತ್ತಲೂ ಅಲಂಕಾರ ಮಾಡಿ ಪ್ರತಿಷ್ಠಾಪಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾರುಕಟ್ಟೆಯ ವ್ಯಾಪಾರಸ್ಥರು, ಸಾರ್ವಜನಿಕರು ಪೂಜಿಸಿದ್ದು ವಿಶೇಷವಾಗಿತ್ತು. […]