ಅಪರಾಧ

ಮೂರು ಸಾವಿರ ಮಠದ ಗಂಗಾಧರ ಸ್ವಾಮೀಜಿ ಕೊಲೆಗೆ ಯತ್ನ..!

ಬೆಳಗಾವಿ prajakiran.com : ಮೂರು ಸಾವಿರ ಮಠದ ಸ್ವಾಮೀಜಿ ಕೊಲೆಗೆ ಯತ್ನ ನಡೆದ ರ್ದುಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೊಸುರು ಗ್ರಾಮದ ಮೂರು ಸಾವಿರ ಮಠದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮೂರು ಸಾವಿರ ಮಠದ ಗಂಗಾಧರ ಸ್ವಾಮೀಜಿ ಅವರ ಮೇಲೆಯೇ ಕೊಲೆಗೆ ಯತ್ನ ನಡೆದಿದ್ದು,  ಕೊಲೆ ಮಾಡಲು ಬಂದ ವ್ಯಕ್ತಿಯನ್ನು ಪೋಲಿಸರ ವಶಕ್ಕೆ ಪಡೆದಿದ್ದಾರೆ. ಆತನನ್ನು ಅದೇ ಗ್ರಾಮದ ಮಲ್ಲಿಕಾರ್ಜುನ ಬುಡಶೆಟ್ಟಿ ಎಂದು ಗುರುತಿಸಲಾಗಿದೆ. ಮಧ್ಯರಾತ್ರಿ ಮಠದಲ್ಲಿ ಕಳ್ಳತನ ಮಾಡಲು ಹೋಗಿದ್ದಾಗ ಸ್ವಾಮೀಜಿ ಅವರಿಂದ ಪ್ರತಿರೋಧ […]

ಅಪರಾಧ

ಟಿಕ್ ಟಾಕ್ ಮಾಡಿ ಸಿಕ್ಕಿ ಬಿದ್ದ ಕಾಡು ಪ್ರಾಣಿ ಬೇಟೆಗಾರರು…!

ಬೀದರ prajakiran.com : ಕಾಡುಪ್ರಾಣಿಗಳನ್ನು ಬೇಟೆಯಾಡಿ ಕೊಂದು ತಿಂದಿರುವುದಲ್ಲದೆ, ಅವುಗಳ ವೀಡಿಯೋ ಟಿಕ್ ಟಾಕ್ ಮಾಡಿ ಸಿಕ್ಕಿ ಬಿದ್ದ ಘಟನೆ ಬೀದರ ಜಿಲ್ಲೆಯಲ್ಲಿ ನಡೆದಿದೆ. ಬಂಧಿತರನ್ನು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಖೆರ್ಡ್ ಕೆ ವಾಡಿ ಗ್ರಾಮದವರಾದ ಚನ್ನಪ್ಪ ತಂದೆ ದೇವಿಂದ್ರಪ್ಪ ದೇವಗಿರಿ (19), ಆಕಾಶ ತಂದೆ ದೇವಿಂದ್ರಪ್ಪ ದೇವಗಿರಿ (18), ಮದರೇಶ ತಂದೆ ಮಾರುತಿ ಮಸ್ಕೆ (20) ಎಂದು ಗುರುತಿಸಲಾಗಿದೆ. ಅಲ್ಲದೆ, ಇವರೊಂದಿಗೆ ಕೈ ಜೋಡಿಸಿದ ಸಚಿನ್ ವೈಜನಾಥ್ ಮುಲಗೆ, ರಜನಿಕಾಂತ ಪಂಡಿತ ಚಲ್ಮುಡೆ,ಆಕಾಶ ದೇವಿಂದ್ರ […]

ಅಪರಾಧ

ಆಕಸ್ಮಿಕ ಬೆಂಕಿ ತಗುಲಿ ಮನೆ ಸುಟ್ಟು ಭಸ್ಮ

ಯಾದಗಿರಿ prajakiran.com  : ಆಕಸ್ಮಿಕ ಬೆಂಕಿ ತಗುಲಿ ಮನೆ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಸುರಪುರ ತಾಲ್ಲೂಕಿನ ಮಾಚಗುಂಡಾಳ ಗ್ರಾಮದಲ್ಲಿ ನಡೆದಿದೆ.  ಇದರಿಂದಾಗಿ ಮನೆಯಲ್ಲಿನ  ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು  ಸುಟ್ಟು ಕರಕಲು ಆಗಿವೆ. ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯುಟ್ ತಗುಲಿದ್ದರಿಂದ ಈ ರ್ದುಘಟನೆ ಸಂಭವಿಸಿದೆ. ಮಾಚಗುಂಡಾಳ ಗ್ರಾಮದ ಮಾನಪ್ಪ ಹೆಬ್ಬಾಳ ಅವರ ಮನೆಗೆ ಬೆಂಕಿ ತಗುಲಿ ಮನೆಯ ಅಗತ್ಯ ದಿನ ಬಳಕೆ ವಸ್ತುಗಳು ಮತ್ತು ಜಮೀನಿನ ಕಾಗದ ಪತ್ರ ಆಧಾರ ಕಾರ್ಡ, ರೇಶನ್ ಕಾರ್ಡ,  ನಗದು   ಸೇರಿದಂತೆ […]

ಅಪರಾಧ

ಹೋಟೆಲ್ ಮುಂದೆ ಉಗುಳಿ ಸಿಕ್ಕಿಹಾಕಿಕೊಂಡ ಕುಖ್ಯಾತ ರೌಡಿ ಸಲೀಂ ಬಳ್ಳಾರಿ

ಹುಬ್ಬಳ್ಳಿ prajakiran.com : ಖತರನಾಕ್ ರೌಡಿಯೊಬ್ಬ ಜನರಿಂದಲೇ ಸಿಕ್ಕು ಒದೆ ತಿನ್ನೋದಲ್ಲದೆ ತನ್ನ ಜಾತಕವನ್ನ ತಾನೇ ಒಪ್ಪಿಕೊಂಡಿರುವ ಘಟನೆ  ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಹೆಗ್ಗೇರಿ ಮೂಲದ ಕುಖ್ಯಾತ ರೌಡಿಯಾಗಿದ್ದ ಸಲೀಂ ಬಳ್ಳಾರಿ ಅನ್ನೋನೆ ಸದ್ಯ ಜನರಿಂದಲೇ ಒದೆ ತಿಂದು ಪೊಲೀಸರ ಅಥಿತಿಯಾಗಿದ್ದಾನೆ. ಈ ಖಾತರ್ನಾಕ್ ರೌಡಿಯ ಹಿನ್ನೆಲೆಯನ್ನ ಕೇಳಿದ್ರೆ ನೀವು ಕೂಡ ಒಂದು ಬಾರಿ ಶಾಕ್ ಆಗ್ತೀರಾ. ಸುಪಾರಿ ಕಿಲ್ಲರ್ ಆಗಿರುವ ಈತ ಕಲಬುರಗಿಯಲ್ಲಿ ಕೊಲೆ ಮಾಡಿ ಅಲ್ಲಿಂದ ತಲೆಮರೆಸಿಕೊಂಡಿದ್ದ ಈ ಸಲೀಂ ಹುಬ್ಬಳ್ಳಿಯ ನೇಕಾರ ನಗರದಲ್ಲಿ […]

ಅಪರಾಧ

ಧಾರವಾಡ : ಆಸ್ತಿಗಾಗಿ ಒಡಹುಟ್ಟಿದ ತಮ್ಮನನ್ನೇ ಕೊಚ್ಚಿ ಕೊಲೆ ಮಾಡಿದ ಅಣ್ಣಂದಿರು

ಧಾರವಾಡ prajakiran.com : ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಡಹುಟ್ಟಿದ ಅಣ್ಣಂದಿರೇ ತಮ್ಮನನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ಶುಕ್ರವಾರ ನಡೆದಿದೆ. ಧಾರವಾಡದ ಕಮಲಾಪೂರ ಬಡಾವಣೆಯಲ್ಲಿ ಹಾಡಹಗಲೇ ಈ ದುಷ್ಕೃತ್ಯ ನಡೆದಿದ್ದು, ಇದರಿಂದಾಗಿ ಪತ್ರೇಶ್ವರ ನಗರ ಹಾಗೂ ಕಮಲಾಪುರ ಮತ್ತು ಧಾರವಾಡದ ಜನತೆ ಬೆಚ್ಚಿ ಬಿದ್ದಿದ್ದಾರೆ. ಉಮೇಶ ಬಾಳಗಿ (೩೯) ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದು, ಹಾರಿ ಹಾಗೂ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು  ಪೊಲೀಸರು ಶಂಕಿಸಿದ್ದಾರೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿಅಣ್ಣಂದಿರು ಹಾಗೂ ತಮ್ಮನ ನಡುವೆ […]

ಅಪರಾಧ

ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳ ತಡೆ

 ಕೊಡಗು prajakiran.com : ಪುಟ್ಟದಾದ ಮಾರುತಿ 800 ಕಾರಿನಲ್ಲಿ ಸರಿಯಾಗಿ ನಾಲ್ಕು ಮಂದಿ ಪ್ರಯಾಣಿಸುವುದೇ ಕಷ್ಟ. ಅಂತಹದರಲ್ಲಿ ಬಡಪಾಯಿ ಹಸುಗಳನ್ನು ತುಂಬಿಕೊಂಡು ಕಸಾಯಿಖಾನೆಗೆ ಸಾಗಿಸುತ್ತಿದ್ದ ವೇಳೆ ಕೆಲವು ಹಿಂದುಪರ ಸಂಘಟನೆಗಳ ಕಾರ್ಯಕತರು ಮತ್ತು ಸಾರ್ವಜನಿಕರು ಅವುಗಳನ್ನು ತಡೆದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ದೇವರಪುರ ಅಬ್ಬೂರುಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಗೋಣಿಕೊಪ್ಪ ಪೋಲಿಸ್ ಠಾಣೆ ವ್ಯಾಪ್ತಿ  ಸೇರಿದಂತೆ ಪಾಲಿಬೆಟ್ಟ,ನೆಲ್ಯುದಿಕೇರಿ,ಚೆಟ್ಟಳ್ಳಿ ಸೇರಿದಂತೆ ವಿವಿಧೆಡೆ ಮೇಯಲು ಬಿಡುವ ಹಸುಗಳನ್ನು ಕದ್ದು ಖಸಾಯಿಖಾನೆಗೆ ಸಾಗಿಸುವುದು ಸಾಮಾನ್ಯವಾಗಿತ್ತು.  ಇದೀಗ ಅಬ್ಬೂರುಕಟ್ಟೆಯಲ್ಲಿ […]

ಅಪರಾಧ

ಏರಿಯಾಗೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ  ರೌಡಿಗಳ ಅಟ್ಟಹಾಸ

ಕಲಬುರಗಿ prajakiran.com : ಏರಿಯಾಗೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ  ರೌಡಿಗಳು ಅಟ್ಟಹಾಸನಡೆಸಿರುವ ಘಟನೆ ಬಿಸಲನಾಡು ಕಲಬುರಗಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಕಲಬುರಗಿ ನಗರದ ರಾಜೀವಗಾಂಧಿ  ನಗರದಲ್ಲಿ  ರಾಡ್ ಹಾಗೂ ಬಡಿಗೆಯಿಂದ ಹಲ್ಲೆ ಮಾಡಲಾಗಿದ್ದು, ಗಾಯಾಳುಗಳು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗೇಶ ಮತ್ತು ಮಹಮ್ಮದ್ ಗೌಸ್ ಎಂಬ ಇಬ್ಬರ ಯುವಕರ ಮೇಲೆಯೇ ಮಾರಣಾಂತಿಕ ಹಲ್ಲೆ  ಹಲ್ಲೆ ನಡೆದಿದೆ.  ಸುಮಾರು ನಲವತ್ತು ಜನರಿರುವ ಗುಂಪಿನಿಂದ ಈ ಹಲ್ಲೆ ನಡೆದಿದೆ. ರಾಜು ಕಪನೂರ್ (ಕಾರ್ಪೋರೇಟರ್) ಹಾಗೂ  ನಂದು ನಾಗಭುಜಂಗೆ(ಕನ್ನಡ ಹೋರಾಟಗಾರ)ಮತ್ತು […]

ಅಪರಾಧ

ದರೋಡೆ ಪ್ರಕರಣ ಭೇದಿಸಿದ ಪೊಲೀಸ್ : ಮೂವರು ಆರೋಪಿಗಳ ಬಂಧನ

ಕೊಡಗು prajakiran.com : ಕಾರ್ಮಿಕರಿಗೆ ವೇತನ ನೀಡುವ ಸಲುವಾಗಿ ಏಪ್ರಿಲ್ 2 ರಂದು ಸೋಮವಾರಪೇಟೆ ತಾಲ್ಲೂಕಿನ ಸುಂಠಿಕೊಪ್ಪ  ಸಮೀಪದ ಗುಂಡುಕುಟ್ಟಿ ಎಸ್ಟೇಟ್ ವ್ಯವಸ್ಥಾಪಕ ವಿಜಯ್ ಕುಮಾರ್ ಅವರಿಂದ ದಾರಿಯಲ್ಲಿ ವಾಹನ ತಡೆದು 5,18,000 ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಕೊಡಗು ಪೊಲೀಸ್ ಯಶಸ್ವಿಯಾಗಿದ್ದು,ಮೂವರನ್ನು ಬಂಧಿಸಿದ್ದಾರೆ. ಬಂಧಿತ ದರೋಡೆಕೋರರಿಂದ  5.02 ಲಕ್ಷ  ನಗದು ವಶ ಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಮೈಸೂರು ಜಿಲ್ಲೆಯ ಪಿರಿಯಪಟ್ಟಣ ಮೂಲದ  ಟಿ.ವಿ. ಹರೀಶ್ ಮುಖ್ಯ ಆರೋಪಿ, ಸುಂಟಿಕೊಪ್ಪದ ಕುಮಾರೇಶ್, ಮಾದಾಪುರ ಬಳಿಯ ಇಗ್ಗೋಡ್ಲು ನಿವಾಸಿ ಜಗ್ಗರಂಡ ಕಾವೇರಪ್ಪ ಎಂದು […]

ಅಪರಾಧ

ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಪತಿ

ಮಂಡ್ಯ prajakiran.com :  ಪತ್ನಿಯ ಅಕ್ರಮ ಸಂಬಂಧ ಕುರಿತು ಶಂಕಿಸಿ ಆಕೆಯ ಕತ್ತು ಹಿಸುಕಿ  ಕೊಲೆ ಮಾಡಿ ಪೋಲಿಸರಿಗೆ ಶರಣಾಗಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮೂಡನಹಳ್ಳಿ ಗ್ರಾಮದ ಬಳಿ ಶುಂಠಿ ಬೆಳೆ ಬೇಸಾಯ ಮಾಡಲು ಆಗಮಿಸಿದ್ದ ಮೇಸ್ತ್ರಿ ಸ್ವಾಮಿ ಯೇ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.  ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯ ಶುಂಠಿ ಬೆಳೆಯ ಬೇಸಾಯ ಮಾಡಲು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಂಗಾಪುರ ಗ್ರಾಮದಿಂದ ತನ್ನ ಪತ್ನಿ ಮುನಿಯಮ್ಮಳ ಜೊತೆ ಆಗಮಿಸಿದ್ದ  ಮೇಸ್ತ್ರಿ ಸ್ವಾಮಿ ಹರಿಹರಪುರದಲ್ಲಿ […]

ಅಪರಾಧ

ಪತ್ರಿಕೆ ಹಾಕುವ ಬಾಲಕನ ಮೇಲೆ ದೌರ್ಜನ್ಯ

ಧಾರವಾಡ prajakiran.com : ಪತ್ರಿಕೆ ಹಾಕುವ ಬಾಲಕನ ಮೇಲೆ ಮನಬಂದಂತೆ ಥಳಿಸಿ, ದೌರ್ಜನ್ಯ ಎಸಗಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ. ಹಲ್ಲೆಗೊಳಗಾದ ಬಾಲಕನನ್ನು ರಾಜು ಪವಾರ ಎಂದು ಗುರುತಿಸಲಾಗಿದ್ದು, ಆತ ಸದ್ಯ ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಆಶೀಫ್, ರಾಮು ದ್ಯಾಮಕ್ಕನವರ, ರೋಹಿತ್ ಕುಂದಗೋಳ, ಹನುಮಂತ, ರಾಜು ಹಲ್ಲೆ ಮಾಡಿದವರು.  ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಳೆದ ಹಲವು ದಿನಗಳಿಂದ ಧಾರವಾಡದ ಅಂಬೇಡ್ಕರ್ ನಗರದಲ್ಲಿ  ಕೆಲ ಯುವಕರು ಗುಂಪು […]