ರಾಜ್ಯ

ಮಹಿಳೆ ಮೇಲೆ ಹಲ್ಲೆ ಮಾಡಿದ ತಾ.ಪಂ ಸದಸ್ಯ ವಿರುದ್ದ ಪ್ರಕರಣ ದಾಖಲು

ಗಜೇಂದ್ರಗಡ(ಗದಗ) prajakiran.com : ಸಮೀಪದ ಕಾಲಕಾಲೇಶ್ವರ ಗ್ರಾಮದ ತಾಲೂಕು ಪಂಚಾಯತ  ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಶಶಿಧರ ಹೂಗಾರ ಹಾಗೂ ಗ್ರಾ.ಪಂ ಸದಸ್ಯ ಕಳಕಪ್ಪ ಹೂಗಾರ ವಿರುದ್ದ ಮಹಿಳೆ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ.

ಅದೇ ಗ್ರಾಮದ ಮಹಿಳೆಯೊಬ್ಬಳ ಮೇಲೆ ಮಾನಹಾನಿ ಯತ್ನ ಹಾಗೂ ಹಲ್ಲೆ ನಡೆಸಿ, ಗುಂಡಾ ವರ್ತನೆ  ತೋರಿದ ಹಿನ್ನೆಲೆಯಲ್ಲಿ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ : ಕಾಲಕಾಲೇಶ್ವರ ಗ್ರಾಮದ ಸುಮಿತ್ರಾ ಶಂಕ್ರಪ್ಪ ಹೂಗಾರ(೪೯) ಅವರ ಬೆಲೆ ಬಾಳುವ ಹೊಲದ ಮೇಲೆ ತಾಲೂಕು ಪಂಚಾಯತ್  ಸದಸ್ಯ ಶಶಿಧರ ಹೂಗಾರ (೫೧) ಹಾಗೂ ಅವನ ಸಹೋದರ ಕಳಕಪ್ಪ ಹೂಗಾರ(೫೩) ಅವರು ಕಳೆದ ಎರಡು ವರ್ಷದಿಂದ ಹೊಲ ಮಾರಾಟ ಮಾಡುವಂತೆ ದುಂಬಾಲು ಬಿದ್ದಿದ್ದಾರೆ.

ಅಲ್ಲದೆ, ಮಾರಾಟ ಮಾಡುವುದಿಲ್ಲ. ಇರುವುದೊಂದೆ ಹೊಲ ಅದರಿಂದ ಉಪಜೀವನ ಸಾಗಿಸುತ್ತಿದ್ದೇವೆ ಎಂದಿದ್ದರಿಂದ ಶನಿವಾರ ಬೆಳಗ್ಗೆ ಸುಮಿತ್ರಾ ಅವರ ಮನೆ ಹೊಕ್ಕ ಶಶಿಧರ ಹೂಗಾರ ಮಹಿಳೆಯ ಸೀರೆ ಎಳೆದಾಡಿ ಮಾನಹಾನಿ ಯತ್ನ ಹಾಗೂ ಹಲ್ಲೆ ನಡೆಸಿದ್ದಾರೆ ಎಂದು ನೋಂದ ಮಹಿಳೆ ದೂರು ನೀಡಿದ್ದಾರೆ.

ಕಳಕಪ್ಪ ಹೂಗಾರ,ಸುಭಾಸ ಹೂಗಾರ, ರೇಖಾ ಹೂಗಾರ, ಶೋಭಾ ಹೂಗಾರ, ಪ್ರೀತಿ ಹೂಗಾರ ಎಂಬುವರು  ಸುಮಿತ್ರಾ ಹೂಗಾರ ಅವರ ಗಂಡ ಶಂಕ್ರಪ್ಪ ಹೂಗಾರ ಹಾಗೂ ಅವರ ಮಗ ಪ್ರಶಾಂತ ಹೂಗಾರ ಅವರ ಮೇಲೆ ಬಡಿಗೆಯಿಂದ ಹಲ್ಲೆ ನಡೆಸಿದ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಕಲಂ ೧೪೩, ೧೪೭, ೧೪೮, ೩೨೩, ೩೫೪, ೫೦೪, ೫೦೬ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಹೂಗಾರ ಸಹೋದರರ ಹಾವಳಿ:

ಕಾಂಗ್ರೆಸ್‌ನ ತಾ.ಪಂ ಸದಸ್ಯ ಶಶಿಧರ ಹೂಗಾರ ಹಾಗೂ ಗ್ರಾ.ಪಂ ಸದಸ್ಯ ಕಳಕಪ್ಪ ಹೂಗಾರ ಅವರ ಅಟ್ಟಹಾಸ ಗ್ರಾಮದಲ್ಲಿ ಇದೇ ಮೊದಲಲ್ಲ.

ಕಾಲಕಾಲೇಶ್ವರ ಗ್ರಾಮದ ಮೂರಾರ್ಜಿ ಶಾಲೆಯ ವಿದ್ಯಾರ್ಥಿಗಳಿಗೆ ಪೈಪ್‌ಲೈನ್ ಜೋಡಣೆಯಲ್ಲಿ ರಾಜಕೀಯ ಮಾಡಿನೀರು ಬಿಡದೇ ಸತಾಯಿಸಿದ್ದರು.

ಗ್ರಾ.ಪಂ ಸದಸ್ಯ ಕಳಕಪ್ಪ ಹೂಗಾರ ಆಶ್ರಯಮನೆಯ ಫಲಾನುಭವಿಯೊಬ್ಬರಿಗೆ ೩೦ ಸಾವಿರ ಲಂಚ ಕೇಳಿದ ಆಡಿಯೋ ಎಲ್ಲೆಡೆ ವೈರಲ್ ಆಗಿತ್ತು.

ಕಾಲಕಾಲೇಶ್ವರ ಗ್ರಾಮಸ್ಥರಿಗೆ ಸಣ್ಣ ಸಣ್ಣ ವಿಷಯಕ್ಕೂ ಧಮ್ಕಿ ಹಾಕಿ ಪೊಲೀಸ್ ಠಾಣೆಗೆ ಕರೆಯಿಸಿ, ಅಲ್ಲಿ ಪ್ರಭಾವ ಬಳಸಿ ಅವರನ್ನು ಬಡಿಸುತ್ತಿದ್ದ ಆರೋಪ ಕೇಳಿಬಂದಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *