ಸಿನಿಮಾ

ಖ್ಯಾತ ಬಾಲಿವುಡ್ ನಟ, ಮೇಜರ್ ಬಿಕ್ರಮ್ ಜೀತ್ ನಿಧನ

ನವದೆಹಲಿ Prajakiran.com : ನಟ ಬಿಕ್ರಮ್ ಜೀತ್ ಕನ್ವರ್ ಪಾಲ್(52) ಕೊರೋನಾ ಸೋಂಕಿನಿಂದ ಶುಕ್ರವಾರ ನಿಧನರಾಗಿದ್ದಾರೆ.

ಜನಪ್ರಿಯ ನಟ ಪಾಲ್ ದಿಢೀರ್ ನಿಧನಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಆಘಾತವ್ಯಕ್ತಪಡಿಸಿದ್ದಾರೆ.

ನಿವೃತ್ತ ಸೇನೆ ಅಧಿಕಾರಿಯಾಗಿದ್ದ ಅವರು ಹಲವಾರು ಟಿವಿ ಸೀರಿಯಲ್ ಗಳಲ್ಲಿ ನಟಿಸುವುದರ ಜೊತೆಗೆ ಸಿನಿಮಾರಂಗದಲ್ಲಿಯೂ ದೀರ್ಘಕಾಲ ನಟಿಸಿದ್ದಾರೆ.

ಸಿನಿಮಾ ನಿರ್ಮಾಪಕ ಅಶೋಕ್ ಪಂಡಿತ್ ಅವರು ಈ ವಿಷಯ ಟ್ವೀಟ್ ಮಾಡಿದ್ದು, ನಟ, ಮೇಜರ್ ಬಿಕ್ರಮ್ ಜೀತ್ ಕನ್ವರ್ ಪಾಲ್ ನಿಧನ ಸುದ್ದಿ ಕೇಳಿ ಆಘಾತವಾಗಿದೆ.

ನಿವೃತ್ತ ಸೇನಾ ಅಧಿಕಾರಿಯಾಗಿದ್ದ ಕನ್ವರ್ ಪಾಲ್ ಹಲವಾರು ಸಿನಿಮಾಗಳಲ್ಲಿ ನಟ. ಪೋಷಕ ನಟನಾಗಿ, ಟೀವಿ ಸೀರಿಯಲ್ ಗಳಲ್ಲಿ ನಟಿಸಿದ್ದರು. ಇವರ ಕುಟುಂಬಕ್ಕೆ ಸಾಂತ್ವಾನ ಹೇಳುವುದಾಗಿ ಉಲ್ಲೇಖಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *