ಅಪರಾಧ

ಧಾರವಾಡದಲ್ಲಿ ನಕಲಿ ಕೀಲಿ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮನ ಬಂಧಿಸಿದ ಪೊಲೀಸರು….!

ಧಾರವಾಡ prajakiran.com : ಮೋಟರ್ ಸೈಕಲ್ ಗಳನ್ನು ಕಳ್ಳತನ ಮಾಡಿದ ಆರೋಪಿತನನ್ನು ಬಂಧಿಸುವಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳ್ಳತನವಾದ ದ್ವಿ ಚಕ್ರ ವಾಹನಗಳನ್ನು ಪತ್ತೆ ಹಚ್ಚಲು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬು ರಾಮ್, ಡಿಸಿಪಿ ಗಳಾದ ಕೆ.ರಾಮರಾಜನ, ಆರ್.ಬಿ. ಬಸರಗಿ, ಧಾರವಾಡ ಎಸಿಪಿ ಜಿ. ಅನುಷಾ, ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಎಮ್.ಕೆ.ಬಸಾಪೂರ ರವರ ಮಾರ್ಗದರ್ಶನದಲ್ಲಿ ಆರೋಪಿತರ ಪತ್ತೆ ಕುರಿತು ವಿಶೇಷ ತಂಡ ರಚಿಸಿ ಎಸ್.ಆರ್. ತೇಗೂರ ಪಿಎಸ್‌ಐ ಅಪರಾಧ ವಿಭಾಗ, ಸಚಿನಕುಮಾರ ದಾಸರಡ್ಡಿ ಪಿಎಸ್‌ಐ(ಕಾವಸು), ಹಾಗೂ ಬಿ.ಎಮ್.ಅಂಗಡಿ ಎಎಸ್‌ಐ, ಎಮ್.ಎಫ್. ನದಾಫ, ಐ.ಪಿ ಬುರ್ಜಿ, ಆರ್.ಕೆ. ಅತ್ತಾರ, ಬಿ.ಎಮ್.ಪಠಾತ, ಎಮ್.ಜಿ.ಪಾಟೀಲ, ಎಮ್.ಸಿ.ಮಂಕಣಿ,ಎಮ್.ವಾಯ್.ಮಾದರ, ಡಿ.ಎಸ್.ಸಾಂಗ್ಲಿಕರ ಇವರೆಲ್ಲರೂ ಕೂಡಿ ನಕಲಿ ಕೀಲಿಯನ್ನು ಬಳಸಿ ಕಳ್ಳತನ ಮಾಡುತ್ತಿದ್ದ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಕಳ್ಳನನ್ನು ಕೃಷ್ಣಾ ಅಲಿಯಾಸ್ ಕಿಟ್ಟ್ಯಾ ತಂದೆ ಜ್ಞಾನದೇವ ಮಿರಜಕರ ವಯಾ: ೩೬ ವರ್ಷ ಜಾತಿ: ಹಿಂದೂ ಮರಾಠಾ ಉದ್ಯೋಗ : ಟೇಲರಿಂಗ ಸಾ: ಮೊಟೆಬೆನ್ನೂರ ಮ್ಯಾಳಗಿ ಪ್ಯಾಟಿ ತಾ: ಬ್ಯಾಡಗಿ ಜಿ: ಹಾವೇರಿ, ಹಾಲಿ: ಧಾರವಾಡ ಮಾಳಮಡ್ಡಿ ಗೌಳಿಗಲ್ಲಿ ಹನುಮಂತ ದೇವರ ಗುಡಿ ಹತ್ತಿರದ ನಿವಾಸಿ ಎಂದು ಗುರುತಿಸಲಾಗಿದೆ.

ಈತನನ್ನು ಮೇ ೧ ರಂದು ಮುಂಜಾನೆ ೯ ಗಂಟೆಗೆ ಪತ್ತೆ ಮಾಡಿ ಈತನ ತಾಬಾದಲ್ಲಿದ್ದ ಒಟ್ಟು ೭ ಮೋಟರ ಸೈಕಲಗಳು ಹಾಗೂ ೧ ಹೊಂಡಾ ಸ್ಕೂಟರನ್ನು ಪತ್ತೆ ಮಾಡಿದ್ದು ಇವುಗಳ ಒಟ್ಟು ಅ.ಕಿ : ೨,೫೦,೦೦೦/- ರೂ ಬೆಲೆಯ ಮೋಟರ ಸೈಕಲಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇವುಗಳ ಪೈಕಿ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ೫ ಪ್ರಕರಣಗಳು ಹಾಗೂ ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯ ೧ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.

ಈ ಪ್ರಕರಣ ಭೇದಿಸಿದ ಪೊಲೀಸ್ ತಂಡಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ್  ಪ್ರಶಂಶಿಸಿರುತ್ತಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *