ರಾಜ್ಯ

ವಿಜಯ ಕುಲಕರ್ಣಿ, ಚಂದೂ ಮಾಮ, ಸೋಮು ನ್ಯಾಮಗೌಡ, ಬಸವರಾಜ ಮುತ್ತಗಿ ಸೇರಿ ಹಲವರ ದಿನವೀಡಿ ವಿಚಾರಣೆ ನಡೆಸಿದ ಸಿಬಿಐ

ಧಾರವಾಡ prajakiran.com : ಧಾರವಾಡ ಜಿಪಂ ಸದಸ್ಯ ಯೋಗೀಶ್ ಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆಸಿಬಿಐ ಅಧಿಕಾರಿಗಳ ತಂಡ ಹಲವರನ್ನು ದಿನವೀಡಿ ಡ್ರಿಲ್ ನಡೆಸಿದ್ದಾರೆ.

ಸತತ ಎಂಟು ಗಂಟೆಗಳ ಕಾಲ ಹತ್ತು ಹಲವು ಆಯಾಮಗಳಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನಿಟ್ಟು ಸತ್ಯ ಬಾಯಿಬಿಡುವಂತೆ ಮಾಡಿ ಕೆಲವರನ್ನು ಇಕ್ಕಟ್ಟಿಗೆ ಸಿಲುಕಿದರು ಎಂದು ಹೇಳಲಾಗಿದೆ.

ಸತ್ಯ ಮರೆ ಮಾಚಲು ಯತ್ನಿಸದವರಿಗೆ ಸರಿಯಾಗಿ ಬಿಸಿ ತಾಕಿದ್ದರಿಂದ ಹಲವರು ಕಂಗಾಲಾಗಿದ್ದರು ಎಂದು ತಿಳಿದುಬಂದಿದೆ.

ಶನಿವಾರ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ
ಹಾಜರಾದರು.

ಧಾರವಾಡದ ಉಪನಗರ ಠಾಣೆಗೆ ಅವರು ಬಂದ ಬೆನ್ನಲ್ಲೇ ಮಾಜಿ ಸಚಿವ ವಿನಯ ಕುಲಕರ್ಣಿ ಸಚಿವರಾಗಿದ್ದ ವೇಳೆ ಆಪ್ತ ಕಾರ್ಯದರ್ಶಿಯಾಗಿದ್ದ
ಸೋಮು ನ್ಯಾಮಗೌಡ ಹಾಗೂ ಚಂದೂ ಮಾಮ ಅಲಿಯಾಸ್ ಚಂದ್ರಶೇಖರ ಇಂಡಿ ಅವರನ್ನು ಮತ್ತೆ ಸಿಬಿಐ ತಂಡ ಉಪನಗರ ಠಾಣೆಗೆ ಕರೆಸಿ ಮೊದಲು ಪ್ರತ್ಯೇಕ ಹಾಗೂ ಆನಂತರ ಒಟ್ಟಿಗೆ ವಿಚಾರಣೆ ನಡೆಸಿ ಹಲವು ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದರು ಎಂದು ಹೇಳಲಾಗಿದೆ.

ಬೆಳಗ್ಗೆಯಿಂದ ರಾತ್ರಿಯ ವರೆಗೆ ಸಿಬಿಐ ಅಧಿಕಾರಿಗಳು ತೀವ್ರವಾದ ವಿಚಾರಣೆ ನಡೆಸಿದರು.

ಈಗಾಗಲೇ ಹಲವು ಬಾರಿ ಸಿಬಿಐ ಅಧಿಕಾರಿಗಳ ವಿಚಾರಣೆ ಎದುರಿಸಿರೋ ವಿಜಯ ಕುಲಕರ್ಣಿ, ಚಂದೂ ಮಾಮ, ಸೋಮು ನ್ಯಾಮಗೌಡಗೆ
ಹೆಚ್ಚಿನ ಮಾಹಿತಿಗಾಗಿ ಮತ್ತೆ ಸಿಬಿಐ ಬುಲಾವ್ ನೀಡಿದ ಬೆನ್ನಲ್ಲೇ ಬಸವರಾಜ ಮುತ್ತಗಿಯನ್ನು ಕೂಡ ಕರೆಸಿ ತನಿಖೆ ಚುರುಕುಗೊಳಿಸಿದ ಸಿಬಿಐ ಅಧಿಕಾರಿಗಳು ನಿನ್ನೆ ರಾಜೀ ಸಂಧಾನಕ್ಕೆ ಯತ್ನಿಸಿದ್ದ ಡಿವೈಎಸ್ಪಿ ತುಳಜಪ್ಪ ಸುಲ್ಫಿ ಅವರಿಗೆ ವಿಚಾರಣೆಗೆ ಒಳಪಡಿಸಿದ್ದರು.

ಶನಿವಾರ ಧಾರವಾಡದ ರೌಡಿಶೀಟರ್ ಮುಕ್ತುಂ ಸೊಗಲದ ಹಾಗೂ ಆತನ ಗೆಳೆಯ ಯೂನುಸ್ ಹುಲಗೂರನನ್ನು ಕೂಡ ಉಪನಗರ ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿರುವುದು ಏತಕ್ಕೆ .

ಅವರಿಗೂ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ರೀತಿಯ ನಂಟಿದೆ. ಎನಾದರೂ ಮಹತ್ವದ ಸುಳಿವು ಅಥವಾ ನಂಟು ಇತ್ತಾ ಎಂಬುದರ ಕುರಿತು ವಿಚಾರಣೆ ನಡೆಸಿದರು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ  ತಿಳಿದುಬರಬೇಕಿದೆ.

ವಿನಯ ಕುಲಕರ್ಣಿ ಸೋದರಮಾವ ಚಂದ್ರಶೇಖರ ಇಂಡಿ ಅಲಿಯಾಸ್ ಚಂದೂಮಾಮ, ಸೋಮು ನ್ಯಾಮಗೌಡ ಹಾಗೂ ವಿಜಯ ಕುಲಕರ್ಣಿ, ಬಸವರಾಜ ಮುತ್ತಗಿಯನ್ನು  ದಿನವೀಡಿ ಎನೆಲ್ಲಾ ವಿಚಾರಿಸಿದರೂ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ವರನ್ನು ಕರೆಸಿ ವಿಚಾರಣೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *