ಧಾರವಾಡ prajakiran.com : ರೈತ ಸಮುದಾಯದಲ್ಲಿ ಸ್ವಾಭಿಮಾನ ತುಂಬಿದ ವಿಚಾರವಾದಿ ಬಾಬಾಗೌಡ ಪಾಟೀಲ. ಹಳ್ಳಿಯಿಂದ ದಿಲ್ಲಿಯವರೆಗೆ ರೈತ ಚಳುವಳಿಯನ್ನು ಕಟ್ಟಿ ಆಡಳಿತಾರೂಢ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಿದರು. ಅಂತಹ ಹೋರಾಟದ ಮನಸ್ಥಿತಿ ಇಂದು ಪ್ರಸ್ತುತ ಎಂದು ರೈತ ಮುಖಂಡ ಕೇಶವ ಯಾದವ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಾಜಿ ಕೇಂದ್ರ ಸಚಿವ, ರೈತ ಹೋರಾಟಗಾರ ಬಾಬಾಗೌಡ ಪಾಟೀಲರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹದಗೆಟ್ಟ ಇಂದಿನ ವ್ಯವಸ್ಥೆಯನ್ನು ಸುಧಾರಿಸುವ ಕಾರ್ಯ ಮಾಡುವ ಅಗತ್ಯವಿದೆ ಎಂದು ಸ್ಮರಿಸಿದರು.
ಹಿರಿಯ ನ್ಯಾಯವಾದಿ ಪಿ.ಎಚ್.ನೀರಲಕೇರಿ ಮಾತನಾಡಿ,ಯುವಕರ ಹವ್ಯಾಸ, ರಾಜಕೀಯ, ಬಾಬಾಗೌಡ ಪಾಟೀಲ ಅಂತಾ ವಸ್ತು ನಿಷ್ಠ ವ್ಯಕ್ತಿ, ಒಂದು ಕಾಲದಲ್ಲಿ ರಾಷ್ಟ್ರ ನಾಯಕರಾದ ಬಾಬಾಗೌಡರ ಧ್ವನಿ ಎತ್ತಿದರೆ ಭಯ ಪಡುತ್ತಿದ್ದರು.
ದೇಶದಲ್ಲಿ ಯಾರಿಗಾದರೂ ಹೆಚ್ಚು ಶೋಷಣೆ ಆಗುತ್ತಿದ್ದರೆ ಅದು ರೈತರಿಗೆ ಎಂಬ ಸತ್ಯ ಅಂಶವನ್ನು ಬಾಬಾಗೌಡರು ತಿಳಿದು ಕೊಂಡಿದ್ದರು.
ರೈತರು ಸಹ ಚಿಂತನೆ ಮಾಡುವ ಸಮಯವಿಲ್ಲದಂತಾಗಿದೆ. ಬಣ್ಣದ ಮಾತುಗಳನ್ನಾಡುವ ಮಂದಿ ರಾಜಕೀಯ ದಲ್ಲಿ ಬರುತ್ತಿದ್ದಾರೆ. ಎಂದು ಟೀಕಿಸಿದರು. ಇನ್ನೂ
ಹತ್ತು ವರ್ಷ ಬಾಬಾಗೌಡರು ಬದುಕಿದ್ದರೆ ಮತ್ತೇ ದೇಶದ , ರಾಜ್ಯದ ಪರಿಸ್ಥಿತಿ ಬೇರೆ ಆಗುತ್ತಿತ್ತು ಎಂದರು.
ಸಮಾಜದಲ್ಲಿ ಕಣ್ಣಿಗೆ ಕಾಣುವಂತ ಸಮಸ್ಯೆಗಳಿಗೆ ಯಾರು ಕೇಳದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಯಾಕೋ ನಿರುತ್ಸಾಹವಾಗಿದ್ದಾರೆ.
ಸಮಾಜದ ಬಗ್ಗೆ ಚಿಂತನೆ ಮಾಡುವಂತರು, ರೈತರ ಬಗ್ಗೆ ಕಾಳಜಿ, ಸರಕಾರದಿಂದ ಏನಾದರೂ ಅನಾನುಕೂಲ ಮಾಡಿದರೆ ಕೇಳುವ ಮನಸ್ಥಿತಿ ಬಂದರೆ ಮಾತ್ರ ಬದಲಾವಣೆ ಸಾಧ್ಯ ಎಂದರು.
ಇನ್ನೋರ್ವ ರೈತ ಹೋರಾಟಗಾರ ಈಶ್ವರಚಂದ್ರ ಹೊಸಮನಿ ಮಾತನಾಡಿ, ರೈತರ ಮೇಲಿನ ಶೋಷಣೆ ವಿರುದ್ಧ ಹೋರಾಟಕ್ಕಿಳಿಯುವ ಮೂಲಕ ಸಾವಿರಾರು ರೈತರನ್ನು ಜಾಗೃತಗೊಳಿಸಿದರು.
ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಎಚ್. ಎಸ್.ರುದ್ರಪ್ಪ, ಎನ್.ಡಿ.ಸುಂದರೇಶ ಇನ್ನಿತರ ಮುಖಂಡರು ರೈತರ ಪರ ನಡೆಸಿದ ಚಳುವಳಿ ಐತಿಹಾಸಿಕ ಎಂದರು.
ಹಿರಿಯ ರೈತ ಮುಖಂಡ ಶಿವಾನಂದ ಹೊಳೆಹಡಗಲಿ ಅಧ್ಯಕ್ಷತೆವಹಿಸಿದ್ದರು.
ಅಖಿಲ ಭಾರತ
ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರದ, ಮಲ್ಲನಗೌಡ ಪಾಟೀಲ,
ಮಹಾಂತೇಶ ರಾವುತ ಮಾತನಾಡಿದರು.
ಅಪ್ಪೇಶ ದಳವಾಯಿ, ಶಂಕರ ಹಲಗತ್ತಿ, ಶಂಕರ ಕುಂಬಿ, ಮಲ್ಲಿಕಾರ್ಜುನ ಹಡಪದ , ಭೀಮಪ್ಪ ಕಾಸಾಯಿ, ಗಂಗನಗೌಡ ಮುದಿಗೌಡ್ರ, ನಿಂಗಪ್ಪ ಕುಡವಕ್ಕಲಿಗರ, ಲಕ್ಷ್ಮಣ ಬಕ್ಕಾಯಿ,ಮೀರಾ ಬೀರಣ್ಣನವರ, ಸಕ್ಕುಬಾಯಿ ಶಿಂಧೆ
ಮತ್ತಿತರರು ಕಾರ್ಯಕ್ರಮದಲ್ಲಿದ್ದರು. ಸಿದ್ದಣ್ಣ ಕಂಬಾರ ಕಾರ್ಯಕ್ರಮ ನಿರ್ವಹಿಸಿದರು.