ಅಂತಾರಾಷ್ಟ್ರೀಯ

ಪಿ ಎಸ್ ಐ ಅಕ್ರಮ ನೇಮಕಾತಿ ಆರೋಪಿಗಳ ಹೆಡೆಮುರಿ ಕಟ್ಟಿದ ಸಿಐಡಿ ಡಿವೈಎಸ್ಪಿ ಶಂಕರಗೌಡರಿಗೆ ಕೇಂದ್ರ ಸರಕಾರದ ವಿಶೇಷ ಗೌರವ ಪದಕ

ಬೆಂಗಳೂರು prajakiran. com : ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಸೇರಿ ರಾಜ್ಯದ ಆರು ಹಿರಿಯ ಪೊಲೀಸ್ ಅಧಿಕಾರಿಗಳು ಕೇಂದ್ರ ಗೃಹ ಸಚಿವರ ವಿಶೇಷ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ.

ಪಿಎಸ್ಐ ಅಕ್ರಮ ನೇಮಕಾತಿ ಆರೋಪಿಯೊಬ್ಬನನ್ನು ಕಾಲರ್ ಪಟ್ಟಿ ಹಿಡಿದು ಎಳೆದು ತಂದ ಖ್ಯಾತಿಯ ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಅವರು ಈ ಆರು ಜನರಲ್ಲಿ ಒಬ್ಬರಾಗಿರುವುದು ವಿಶೇಷ.

ಸಿಐಡಿ ತನಿಖೆ ಬಗ್ಗೆ ಮತ್ತೆ ರಾಜ್ಯದ ಜನರಿಗೆ ಭರವಸೆ ಮೂಡಿಸಿದ ಶಂಕರಗೌಡ ವೀರನಗೌಡ ಪಾಟೀಲ್
ಪಿಎಸ್ಐ ಅಕ್ರಮದ ಎಲ್ಲಾ ಆರೋಪಿಗಳನ್ನು ಯಾವುದೇ ಮುಲಾಜಿಲ್ಲದೆ ಬಂಧಿಸಿ ಅವರ ಹೆಡೆಮುರಿಗೆ ಕಟ್ಟಿರುವುದು ಜನಮಾನಸದಲ್ಲಿ ಅಚ್ಚಳಿಯದೆ ಹಾಗೆ ಉಳಿದಿದೆ.

ಇವರೊಂದಿಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಿ ಗಣೇಶ.ಕೆ. ಡಿವೈಎಸ್ಪಿಗಳಾದ ವೆಂಕಟಪ್ಪ ನಾಯ್ಕ್, ಮೈಸೂರು ರಾಜೇಂದ್ರ ಗೌತಮ್,  ಶಂಕರ್ ಕಲ್ಲಪ್ಪ ಮಾರಿಹಾಳ, ಸರ್ಕಲ್ ಇನ್ಸ್ಪೆಕ್ಟರ್ ಗುರುಬಸವರಾಜ ಹೆಚ್. ಹಿರೇಗೌಡರ ಅವರ ವಿವಿಧ ಸಾಧನೆಗೂ ಕೇಂದ್ರ ಸರ್ಕಾರದ ಗೃಹಸಚಿವರ ವಿಶೇಷ ಗೌರವ ಪದಕ ಸಂದಿವೆ.

ಇವರಿಗೆಲ್ಲಾ ಪಿಎಸ್ಐ ಅಕ್ರಮ ನೇಮಕಾತಿ ವಿರುದ್ದ ಸಿಡಿದೆದ್ದು, ಬೀದಿಗಿಳಿದು ಹೋರಾಟ ನಡೆಸಿದ ರಾಜ್ಯದ 54 ಸಾವಿರ ಅಭ್ಯರ್ಥಿಗಳ ಪರ ಗಟ್ಟಿಧ್ವನಿ ಮೊಳಗಿಸಿದ  ರವಿಶಂಕರ್ ಮಾಲಿ ಪಾಟೀಲ್ ಹಾಗೂ ಅವರ ಗೆಳೆಯರ ಬಳಗ ಮತ್ತು ಅವರಿಗೆ ಸದಾ ಬೆನ್ನುಬಾಗಿ ನಿಂತು ಮಾರ್ಗದರ್ಶನ ಮಾಡಿದ ಜನಜಾಗೃತಿ ಸಂಘ ಅಧ್ಯಕ್ಷರಾದ ಬಸವರಾಜ ಕೊರವರ, ಉಪಾಧ್ಯಕ್ಷರಾದ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಸೇರಿದಂತೆ ಅನೇಕ ಗಣ್ಯರು ಅಭಿನಂದಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *