prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ರಾಜ್ಯ

ಕರ್ನಾಟಕ ವಿಶ್ವವಿದ್ಯಾಲಯ ಕುಲಸಚಿವರಾಗಿ ಐಎಫ್ ಎಸ್ ಅಧಿಕಾರಿ ನೇಮಕ

ಧಾರವಾಡ prajakiran.com : ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಸಿ.ಬಿ. ಹೊನ್ನುಸಿದ್ದಾರ್ಥ ಅವರನ್ನು ರಾಜ್ಯದ ಬಿಜೆಪಿ ಸರಕಾರ ಕೋನೆಗೂ ನಿರೀಕ್ಷೆಯಂತೆ ಎತ್ತಂಗಡಿ ಮಾಡಿದೆ. ಅವರು ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮೀಶ್ರ ಸರಕಾರದ ಅವಧಿಯಲ್ಲಿ ಕುಲಸಚಿವರಾಗಿ ನೇಮಕಗೊಂಡಿದ್ದರು ಎನ್ನುವ ಕಾರಣಕ್ಕೆ ಅವರನ್ನು ಮರಳಿ ಮಾತೃಸಂಸ್ಥೆಯಾದ ಬೆಂಗಳೂರಿನ ವಿಶ್ವವಿದ್ಯಾಲಯಕ್ಕೆ ಮರಳಿ ಕಳುಹಿಸಲಾಗಿದೆ.   ಅವರ ಸ್ಥಾನಕ್ಕೆ ಧಾರವಾಡದ ಹಲವು ಪ್ರಾಧ್ಯಾಪಕರು ಕಣ್ಣಿಟ್ಟಿದ್ದರು. ಆದರೆ ಅವರ ಎತ್ತಂಗಡಿಯಿಂದ ತೆರವಾದ ಜಾಗಕ್ಕೆ ಐಎಫ್ ಎಸ್ ಅಧಿಕಾರಿ ಡಾ. ಕೆ.ಟಿ. ಹನುಮಂತಪ್ಪಅವರನ್ನು ನೇಮಕ […]

ಸಿನಿಮಾ

ಲಾಕ್‌ಡೌನ್‌ನಲ್ಲೇ ಮನೆಯೊಳಗೆಯೇ ಮೂಡಿಬಂದ ’ಮಾಮ ರೋನಾ’

ಕೊರೊನಾ ವೈರಸ್ ಇಡೀ ಜಗತ್ತನ್ನೇ ಕಂಗೆಡಿಸಿದೆ. ನಮ್ಮ ದೇಶದಲ್ಲೂ ಬಹುತೇಕರು ಮನೆಯೊಳಗೆ ಇದ್ದಾರೆ. ಇಂಥ ಸಂದರ್ಭದಲ್ಲಿ ಮನೆಯೊಳಗಿದ್ದೇ  ಅಭಿನಯಿಸಿ ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿರುವ ‘ಮಾಮ ರೋನಾ’ ಕಿರುಚಿತ್ರ ಎಲ್ಲೆಡೆ ಸದ್ದು ಮಾಡುತ್ತಿದೆ. ಕಿರುಚಿತ್ರ ತಯಾರಿಕೆಯಲ್ಲಿ ಆಸಕ್ತಿ ಹೊಂದಿರುವ ಯುವಕರೇ ಕಟ್ಟಿಕೊಂಡಿರುವ ಮಿಡಿಯಾ ಮೈಂಡ್ ಕ್ರಿಯೇಷನ್ಸ್ ವತಿಯಿಂದ ಈ ಕಿರುಚಿತ್ರ ನಿರ್ಮಿಸಲಾಗಿದೆ. ನಟರೆಲ್ಲರೂ ಹೊಸಬರೇ ಆಗಿದ್ದು, ಅದು ಗೊತ್ತಾಗದ ರೀತಿಯಲ್ಲೇ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದ್ದಾರೆ. ಲಾಕ್‌ಡೌನ್‌ನಿಂದ ಇಂದು ಪ್ರತಿಯೊಬ್ಬರು ಮನೆಯೊಳಗೆ ಇದ್ದಾರೆ. ವರ್ಕ್ ಫ್ರಾಮ್ ಹೋಂ ಕಲ್ಪನೆಯೂ […]

ರಾಜ್ಯ

ರಾಜ್ಯದಲ್ಲಿ ಒಂದೇ ದಿನ 11 ಪ್ರಕರಣ ಪತ್ತೆ : 534ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

ಬೆಂಗಳೂರು prajakiran.com : ರಾಜ್ಯದಲ್ಲಿ ಬುಧವಾರ ಒಂದೇ ದಿನ 11 ಕರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಆ ಮೂಲಕ ಸೋಂಕಿತರ ಸಂಖ್ಯೆ 534ಕ್ಕೆ ಏರಿಕೆಯಾಗಿದೆ. ಕುಂದಾನಗರಿ ಬೆಳಗಾವಿ , ಮೈಸೂರು ಹಾಗೂ ದಾವಣಗೆರೆಯಲ್ಲಿ ತಲಾ ಒಂದು ಪ್ರಕರಣ ಬೆಳಕಿಗೆ ಬಂದಿರುವುದು ರಾಜ್ಯದ ಜನತೆಯನ್ನು ಆತಂಕಕ್ಕೆ ಸಿಲುಕಿಸಿದೆ. ಅದರಲ್ಲೂ ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಯಾವುದೇ ಕರೋನಾ ಸೋಂಕು ಪತ್ತೆಯಾಗದಿರುವುದು ಜನತೆಯನ್ನು ಸ್ವಲ್ಪ ಸಮಾಧಾನ ತರಿಸಿದೆ. ಆದರೆ ಕಲಬುರಗಿ ನಗರವೊಂದರಲ್ಲಿಯೇ 8 ಪ್ರಕರಣ ಬೆಳಕಿಗೆ ಬಂದಿರುವುದು ಜಿಲ್ಲೆಯ ಜನತೆಯನ್ನು […]

ರಾಜ್ಯ

ನಿಖಿಲ್ ಕುಮಾರಸ್ವಾಮಿ ಮದುವೆ ವರದಿ ಕೇಳಿದ ಹೈಕೋರ್ಟ್

ಬೆಂಗಳೂರು prajakiran.com : ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಕಲ್ಯಾಣಕ್ಕೆ ಪರವಾನಿಗೆ ನೀಡಿರುವ ಕುರಿತು ವರದಿ ನೀಡುವಂತೆ ಹೈಕೋರ್ಟ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ. ಈ ಮದುವೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಹಾಗೂ ಅಗತ್ಯಕ್ಕಿಂತ ಹೆಚ್ಚಿನ ಜನ ಸೇರಿದ್ದರೂ ಎಂದು ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಇ ಮೇಲ್ ಮೂಲಕ ಹೈಕೋರ್ಟ್ ಕದ ಬಡಿಯಲಾಗಿತ್ತು. ಈ ಕುರಿತು ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ, […]

ರಾಜ್ಯ

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಿಂದ ಕರೊನಾ ಸಾಲ ಯೋಜನೆ

ಧಾರವಾಡ prajakiran.com :   ಕರೊನಾ ವೈರಸ್ ನಿಗ್ರಹಕ್ಕೆ ಸಂಬಂಧಿಸಿ ರಾಜ್ಯದ ಎಲ್ಲಡೆ ಕಟ್ಟುನಿಟ್ಟಿನ ಬಂದ್ (ಲಾಕ್ ಡೌನ್) ಆಚರಣೆಯಲ್ಲಿದೆ. ಈ ದಿನಗಳಲ್ಲಿ ವ್ಯಾಪಾರ ವಹಿವಾಟು ಧಕ್ಕೆಗೊಂಡು ಆದಾಯ ನಿಂತಿರುವುದು ಸಹಜವೇ ಆಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಕಾಸ ಗಾಮೀಣ ಬ್ಯಾಂಕು  ವ್ಯಾಪಾರ ವಹಿವಾಟು ಸ್ಥಗಿತಗೊಂಡಿರುವ ವ್ಯಾಪಾರ ವಹಿವಾಟುದಾರರಿಗೆ ಅಲ್ಪಮಟ್ಟಿನ ಆರ್ಥಿಕ ಸಹಾಯ ನೀಡಿ ಮತ್ತೆ ವ್ಯಾಪಾರಿ ಚಟುವಟಿಕೆ ಮುಂದುವರೆಸಲು ಹೊಸ ಸಾಲ ಯೋಜನೆಯೊಂದನ್ನು ಬುಧವಾರದಂದು ಬಿಡುಗಡೆ ಮಾಡಿದೆ.  “ವಿಕಾಸ ಅಭಯ” ಹೆಸರಿನ ಈ ಸಾಲ ಯೋಜನೆಯನ್ನು ಬಿಡುಗಡೆ […]

ಜಿಲ್ಲೆ

ಕೋವಿಡ್ ಪರಿಹಾರ ನಿಧಿಗೆ ಕೆಸಿಸಿ ಬ್ಯಾಂಕಿನಿಂದ  ೧೦ ಲಕ್ಷ ರೂ

ಧಾರವಾಡ prajakiran.com :  ಕೆಸಿಸಿ ಬ್ಯಾಂಕ್ ವತಿಯಿಂದ  ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬುಧವಾರ ೧೦ ಲಕ್ಷ ರೂಪಾಯಿಗಳ ಚೆಕ್‌ನ್ನು ಸಲ್ಲಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಬಾಪುಗೌಡ ಪಾಟೀಲ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಅವರ ಮೂಲಕ ಚೆಕ್ ಸಲ್ಲಿಸಲಾಯಿತು. ಕರೊನಾ ವೈರಸ್ ಹರಡುವಿಕೆಯಿಂದ ಜನಜೀವನ ಅಸ್ತವ್ಯವಸ್ತಗೊಂಡಿದೆ. ಈ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರಕಾರ ನಿರಂತರ ಶ್ರಮಿಸುತ್ತಿದೆ. ಸರಕಾರದ ಚಾಣಾಕ್ಷತನದ ಕಾರ್ಯವೈಖರಿಯಿಂದ ಪರಿಸ್ಥಿತಿ ಗಂಭೀರ ಹಂತ ತಲುಪಿಲ್ಲ ಎಂಬುದು ಸಮಾಧಾನದ ಸಂಗತಿ. ಸರಕಾರಕ್ಕೆ […]

ರಾಜ್ಯ

ಗ್ರೀನ್ ಜೋನ್ ಗೆ ಹೋಗಿದ್ದ ದಾವಣಗೆರೆಯಲ್ಲಿ ಮತ್ತೆ ಕರೋನಾ ಸೋಂಕು ಪತ್ತೆ

ದಾವಣಗೆರೆ prajakiran.com : ಕಳೇದ 28 ದಿನಗಳಿಂದ ಯಾವುದೇ ಸೋಂಕು ಪತ್ತೆಯಾಗದ ಹಿನ್ನಲೆಯಲ್ಲಿ ಗ್ರೀನ್ ಜೋನ್ ಗೆ ಹೋಗಿದ್ದ ದಾವಣಗೆರೆಯಲ್ಲಿ ಬುಧವಾರ ಮತ್ತೆ ಕರೋನಾ ಸೋಂಕು ಪತ್ತೆಯಾಗುವುದರ ಮೂಲಕ ಜಿಲ್ಲೆಯ ಜನತೆಯನ್ನು ಅಚ್ಚರಿ ಹಾಗೂ ಆತಂಕಕ್ಕೆ ಸಿಲುಕಿಸಿದೆ. ದಾವಣಗೆರೆಯ ಕಮ್ಯೂನಿಟಿ ಹೆಲ್ತ್ ಸೆಂಟರ್ ನಲ್ಲಿ ನರ್ಸ್ ಆಗಿದ್ದ 38 ವರ್ಷದ ಮಹಿಳೆ ವಾಸವಿದ್ದ ಪ್ರದೇಶವನ್ನು ಜಿಲ್ಲಾಡಳಿತ ಕಂಟೋನ್ ಮೆಂಟ್ ಪ್ರದೇಶವೆಂದು ಘೋಷಿಸಿ ನಿರ್ಬಂಧ ಹೇರಿದೆ ಎಂದು ಮನೆಯಿಂದಅನಗತ್ಯವಾಗಿ ಹೊರಬಂದರೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ […]

ಜಿಲ್ಲೆ

ತಾಲ್ಲೂಕು ಕೇಂದ್ರ ,ಗ್ರಾಮಿಣ ಪ್ರದೇಶಗಳಲ್ಲಿ ವ್ಯಾಪಾರ ಚಟುವಟಿಕೆಗಳಿಗೆ ವಿನಾಯಿತಿ : ಹುಬ್ಬಳ್ಳಿಯಲ್ಲಿ ನಿರ್ಬಂಧ ಮುಂದುವರಿಕೆ

ಧಾರವಾಡ prajakiran.com : ಕರೊನಾ ನಿಯಂತ್ರಿಸಲು ದೇಶದಾದ್ಯಂತ ಪ್ರಕರಣಗಳನ್ನು ಆಧರಿಸಿ ಜಿಲ್ಲೆಗಳನ್ನು ಕೆಂಪು,ಕಿತ್ತಳೆ,ಹಳದಿ ಮತ್ತು ಹಸಿರು ಎಂದು ನಾಲ್ಕು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಧಾರವಾಡ ಜಿಲ್ಲೆಯು ಕಿತ್ತಳೆ ವಲಯದಲ್ಲಿದೆ. ಹುಬ್ಬಳ್ಳಿ ಶಹರ ಹೊರತುಪಡಿಸಿ ,ಧಾರವಾಡ ನಗರದಲ್ಲಿ ಕೆಲವು ಷರತ್ತುಗಳೊಂದಿಗೆ ಹಾಗೂ ಜಿಲ್ಲೆಯಾದ್ಯಂತ ಇತರ ತಾಲ್ಲೂಕುಗಳು ಮತ್ತು  ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಸೇವೆಗಳ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರು ಸೂಕ್ತ ಆರೋಗ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಇದರ ಸದುಪಯೋಗ ಪಡೆಯಬೇಕು ಎಂದು ಬೃಹತ್,ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ […]

ಅಂತಾರಾಷ್ಟ್ರೀಯ

ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನು ನೆನಪು ಮಾತ್ರ

ಮುಂಬಯಿ prajakiran.com : ತನ್ನ ವಿಶಿಷ್ಟ ನಟನೆಯಿಂದಲೇ ವಿಶ್ವದ ಗಮನ ಸೆಳೆದಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್ ಬುಧವಾರ ವಿಧಿವಶರಾದರು.ಅವರು ಕಳೆದ ಹಲವು ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಈ ಕಾಯಿಲೆಗೆ ಅವರು ಲಂಡನ್ ನಲ್ಲಿ ಚಿಕಿತ್ಸೆ ಪಡೆದಿದ್ದರು. ಅದರಿಂದಸ್ವಲ್ಪ ಗುಣಮುಖರಾಗಿದ್ದರು. ಆದರೆ ಇತ್ತೀಚೆಗೆ ಮತ್ತೇ ಆರೋಗ್ಯ ಕೈ ಕೊಟ್ಟಿದ್ದರಿಂದ ಸೋಮವಾರ ಮುಂಬಯಿ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದರು. ಕೇವಲ 54 ವರ್ಷದವರಾಗಿದ್ದಅವರು ನ್ಯೂರೋ ಎಂಡ್ರೋಕ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದರು. ಇದು ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ […]

ರಾಜ್ಯ

ಕಲಬುರಗಿಯಲ್ಲಿ ಮತ್ತೇ ಎಂಟು ಪ್ರಕರಣ ಪತ್ತೆ : ರಾಜ್ಯದಲ್ಲಿ 532ಕ್ಕೆ ಏರಿಕೆಯಾದ ಕರೋನಾ ಸೋಂಕಿತರ ಸಂಖ್ಯೆ

ಬೆಂಗಳೂರು Prajakiran.com :  ಕಲಬುರಗಿಯಲ್ಲಿ ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಬುಧವಾರ ಮತ್ತೇ ಒಂದೇ ದಿನ ಬರೋಬ್ಬರಿ 8 ಪ್ರಕರಣ ಬೆಳಕಿಗೆ ಬಂದಿವೆ. ಇದು ಕಲಬುರಗಿಯಷ್ಟೇ ಇಡೀ ರಾಜ್ಯದ ಜನತೆಯನ್ನು ಬೆಚ್ಚಿ ಬೀಳುವಂತೆಮಾಡಿದೆ. 26 ವರ್ಷದ ಯುವತಿಯಿಂದ ನಾಲ್ವರಿಗೆ  ಸೋಂಕು ಹರಡಿದರೆ, 19 ವರ್ಷದ ಯುವಕನಿಂದ ಹತ್ತು ಜನರಿಗೆ ಹರಡಿದೆ. ಬೆಳಗಾವಿ ಜಿಲ್ಲೆಯ ಸಂಕೇಶ್ವರದ 12 ವರ್ಷದ ಬಾಲಕನಿಗೆ ಸೋಂಕು ಹರಡಿದೆ. ಆತನಿಗೆ ಚಿಕ್ಕಪ್ಪನಿಂದ ಕರೋನಾ ಬಂದಿದೆ. ಈ ಚಿಕ್ಕಪ್ಪ ಪಿ-393ಸೋಂಕಿತನಾಗಿದ್ದು,ಅವರು ದೆಹಲಿಯ […]