prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ಅಪರಾಧ

ಚಾಮರಾಜನಗರ : ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡ ರೈತ….!

ಬಿಳಿಗಿರಿ ಶ್ರೀನಿವಾಸ ಚಾಮರಾಜನಗರ prajakiran.com : ರೈತನೊಬ್ಬ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರ ತಾಲ್ಲೂಕಿನ ಜ್ಯೋತಿಗೌಡನಪುರದ ರೈತ ಪುಟ್ಟಣ್ಣ ಅವರೇ ಆತ್ಮ ಹತ್ಯೆ ಮಾಡಿಕೊಂಡ ರ್ದುದೈವಿ. ಖಾಸಗಿ ಬ್ಯಾಂಕಿನಲ್ಲಿ ಭತ್ತದ ಬೆಳೆಗೆ ೩ಲಕ್ಷ ಸಾಲವನ್ನು ಮಾಡಿದ್ದ ಪುಟ್ಟಣ್ಣ. ಭತ್ತಕ್ಕೆ ಸೂಕ್ತ ಬೆಲೆ ಸಿಗದೆ, ಹಾಗೂ ಸಕಾಲಕ್ಕೆ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ಚಾಮರಾಜನಗರದ ರೈತ ಸಂಘದ ವತಿಯಿಂದ ಜಿಲ್ಲಾಸ್ಪತ್ರೆಯ ಮುಂದೆ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕೆಂದು ಆಗ್ರಹಿಸಿ […]

ರಾಜ್ಯ

ತಮಿಳು ನಾಮಫಲಕ ತೆರವುಗೊಳಿಸಿದ ವಾಟಾಳ್ ನಾಗರಾಜ್

ಬಿಳಿಗಿರಿ ಶ್ರೀನಿವಾಸ ಚಾಮರಾಜನಗರ prajakiran.com : ಕರ್ನಾಟಕ ವ್ಯಾಪ್ತಿಯಲ್ಲಿ ಇದ್ದ ತಮಿಳು ನಾಮಫಲಕಗಳನ್ನು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ತೆರವುಗೊಳಿಸಿ ಆಕ್ರೋಶ ಹೊರಹಾಕಿದರು. ಚಾಮರಾಜನಗರ ತಾಲೂಕಿನ ಪುಣಜನೂರು ಹಾಗೂ ಕೋಳಿಪಾಳ್ಯ ನಡುವೆ ಹೆದ್ದಾರಿ ಪ್ರಾಧಿಕಾರ ಹಾಗೂ ತಮಿಳುನಾಡಿನ ಸರ್ಕಾರ ಅಳವಡಿಸಿದ್ದ ತಮಿಳು ನಾಮಫಲಕಗಳನ್ನು ಬೆಂಬಲಿಗರೊಟ್ಟಿಗೆ ಸೇರಿ ತೆರವುಗೊಳಿಸಿ, ರಾಜ್ಯಾದ್ಯಂತ ಗಡಿಯಲ್ಲಿರುವ ಅನ್ಯ ಭಾಷಾ ಬೋರ್ಡ್​ಗಳನ್ನು ಕಿತ್ತೆಸೆಯುವುದಾಗಿ ಎಚ್ಚರಿಸಿದರು. ಇದಕ್ಕೂ ಮುನ್ನ ಚಾಮರಾಜನಗರ ರೈಲ್ವೆ ನಿಲ್ದಾಣ ಮುಂಭಾಗ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಖಂಡಿಸಿ ಸರ್ಕಾರದ ಪ್ರತಿಕೃತಿ ದಹಿಸಿ […]

ಅಂತಾರಾಷ್ಟ್ರೀಯ

ದೆಹಲಿ ರೈತ ಹೋರಾಟದ ಸಂಘಟಕ ಈ ವೈದ್ಯ….!

ಇದು ರೈತ ಹೋರಾಟದ ಸಂಘಟನೆ, ಸರ್ಕಾರದೊಂದಿಗೆ ಮಾತುಕತೆ, ಮಾಧ್ಯಮ ಹಾಗೂ ನಾಗರಿಕರಿಗೆ ಕೃಷಿ ನೀತಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ರೈತ ನಾಯಕರನ್ನು ಪರಿಚಯಿಸುವ ಸರಣಿ ಹೋರಾಟದ ಮುಖಗಳು -1 ದರ್ಶನ್ ಪಾಲ್ ವಿಶೇಷ ನವದೆಹಲಿ prajakiran.com : ಎಪ್ಪತ್ತು ವರ್ಷದ ಈ ವ್ಯಕ್ತಿ ಒಂದು ಕಾಲದಲ್ಲಿ ವೈದ್ಯರು. ಅರಿವಳಿಕೆಯ ತಜ್ಞರಾಗಿ ರೋಗ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದರು. ಈಗಲೂ ಅರಿವಳಿಕೆ ಪಡೆದ ಸ್ಥಿತಿಯಲ್ಲಿರುವ ವ್ಯವಸ್ಥೆಗೆ ಮದ್ದು ನೀಡುವ ಹೋರಾಟಕ್ಕೆ ಮುಂಚೂಣಿಯಲ್ಲಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ದೆಹಲಿಯ […]

ಅಂತಾರಾಷ್ಟ್ರೀಯ

ಶಹಜಹನಾಪುರ ಗಡಿಯಲ್ಲಿ ಲಾಠಿ, ವಾಟರ್‌ ಕ್ಯಾನನ್‌ಗೆ ಜಗ್ಗದೆ ಕೂತ ಮಣ್ಣಿನ ಮಕ್ಕಳು….!

ಶಹಜಹಾನ್‌ಪುರ prajakiran. com : ಟ್ರಿಕಿ, ಸಿಂಗು, ಗಾಜಿಯಾಪುರ‌ದಂತೆಯೇ ರಾಜಸ್ಥಾನ-ಹರಿಯಾಣ ರಾಜ್ಯಗಳನ್ನು ಬೆಸೆಯುವ ಹೆದ್ದಾರಿಯಲ್ಲಿರುವ ಶಹಜಹಾನ್‌ಪುರ್‌ ಗಡಿಯಲ್ಲಿ ರೈತರ ಹೋರಾಟ ನಡೆಯುತ್ತಿದೆ.  ಟಿಕ್ರಿ ಮತ್ತು ಸಿಂಘು ಗಡಿಯಲ್ಲಿ ಪಂಜಾಬ್‌, ಹರಿಯಾಣದಿಂದ ದೊಡ್ಡ ಸಂಖ್ಯೆಯಲ್ಲಿ ಬಂದ ರೈತರು ಹೋರಾಟಕ್ಕೆ ಕುಳಿತಿದ್ದರೆ, ಶಹಜಹಾನ್‌ಪುರ್‌ ಗಡಿಯಲ್ಲಿ ಡಿಸೆಂಬರ್‌ 12ರಿಂದ ರಾಜಸ್ಥಾನದಿಂದ ಬಂದ ರೈತರು ಹೋರಾಟಕ್ಕೆ ಕುಳಿತಿದ್ದಾರೆ. ಈ ಹೋರಾಟದ ಮುಂದಾಳತ್ವವನ್ನು ಆಲ್‌ ಇಂಡಿಯಾ ಕಿಸಾನ್‌ ಸಭಾ ವಹಿಸಿಕೊಂಡಿದೆ. ಕಳೆದ ಒಂದು ವಾರದಿಂದ ಮಹಾರಾಷ್ಟ್ರ, ಕೇರಳದಿಂದಲೂ ಸಾವಿರಾರು ಸಂಖ್ಯೆಯ ರೈತರು ಈ ಗಡಿ […]

ಜಿಲ್ಲೆ

ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಚುನಾವಣೆ ಮೀಸಲಾತಿ ನಿಗದಿಗೆ ಸಭೆ ದಿನಾಂಕ ಪ್ರಕಟ

ಧಾರವಾಡ  Prajakiran.com : ಧಾರವಾಡ ಜಿಲ್ಲೆಯಾದ್ಯಂತ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲು ಆಯಾ ತಾಲೂಕಿನಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಗ್ರಾಪಂ ಚುನಾವಣೆ ಮೀಸಲಾತಿಗಾಗಿ ಸಭೆ ನಿಗದಿಯಾಗಿದ್ದು, ಈ ಕುರಿತು  ಅಧಿಕೃತ ಮಾಹಿತಿ ಹೊರಬಿದ್ದಿದೆ.  ಈಗಾಗಲೇ ಗ್ರಾಪಂ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮಾತ್ರ ಚುನಾವಣೆ ಜರುಗಬೇಕಿದೆ. ಈ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲು ಆಯಾ ತಾಲೂಕಿನ ತಹಶೀಲ್ದಾರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ. ಅಳ್ನಾವರ ತಾಲೂಕಿನ 4 ಗ್ರಾಮ […]

ಅಂತಾರಾಷ್ಟ್ರೀಯ

ದೆಹಲಿ ರೈತರ ಹೋರಾಟ ಬೆಂಬಲಿಸಿ ಧಾರವಾಡದಲ್ಲಿ ಟ್ರ‍್ಯಾಕ್ಟರ್ ಜಾಥಾ

ಧಾರವಾಡ prajakiran.com : ದೆಹಲಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ಹೋರಾಟ ನಿರತ ರೈತರ ಹೋರಾಟ ಬೆಂಬಲಿಸಿ ಹಾಗೂ ರೈತ ಹೋರಾಟದಲ್ಲಿ ಅಸುನೀಗಿದ ೬೦ ರೈತರ ಸ್ಮರಣಾರ್ಥ ರೈತ ಹಿತರಕ್ಷಣಾ ಪರಿವಾರದ ವತಿಯಿಂದ ಧಾರವಾಡದಲ್ಲಿ ಟ್ರ‍್ಯಾಕ್ಟರ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ನೂರಾರು ರೈತರು ಟ್ರ‍್ಯಾಕ್ಟರ್ ಸಮೇತ ರಸ್ತೆಗಳಿದರೆ, ಅವರಿಗೆ ಬೆಂಬಲ ಸೂಚಿಸಿ, ವಿವಿಧ ರೈತ ಸಂಘಟನೆಗಳ ಹೋರಾಟಗಾರರು, ರೈತ ಚಿಂತಕರು, ಕಾಂಗ್ರೆಸ್, ಜೆಡಿಎಸ್ ಮತ್ತು ಎಡಪಂಥೀಯ ಸಂಘಟನೆಗಳ ಮುಖಂಡರು ಸಾಥ್ ನೀಡಿದ್ದು ವಿಶೇಷವಾಗಿತ್ತು. ಧಾರವಾಡದ ಕಲಾಭವನದಿಂದ ಆರಂಭಗೊಂಡ ಟ್ರ‍್ಯಾಕ್ಟರ್ ಜಾಥಾ […]

ಅಪರಾಧ

ಧಾರವಾಡದಿಂದ ಕಲಘಟಗಿ ಕಡೆಗೆ ಹೊರಟಿದ್ದ ಇಂಧನ ಟ್ಯಾಂಕರ್ ಪಲ್ಟಿ

ಧಾರವಾಡ Prajakiran. Com : ಇಂಧನ ಟ್ಯಾಂಕರ್ ಒಂದು ಪಲ್ಟಿಯಾದ ಘಟನೆ ಧಾರವಾಡದ ಹೊರವಲಯದಲ್ಲಿರುವ ಕಲಘಟಗಿ ರಸ್ತೆಯಲ್ಲಿ ಶನಿವಾರ ಸಂಜೆ ಜರುಗಿದೆ. ಧಾರವಾಡದಿಂದ ಕಲಘಟಗಿ ಕಡೆಗೆ ಹೊರಟಿದ್ದ ಇಂಧನ ಟ್ಯಾಂಕರ್ ಪಲ್ಟಿಯಾಗಿದ್ದು, ಧಾರವಾಡ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಕ್ರೈನ್ ಮೂಲಕ ಪಲ್ಟಿಯಾದ ಟ್ಯಾಂಕರ್ ಎತ್ತಲಾಯಿತು. ಘಟನಾ ಸ್ಳಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಕಲೆಹಾಕಿದ್ದಾರೆ. Share on: WhatsApp

amit sha and bsy
ಅಂತಾರಾಷ್ಟ್ರೀಯ

ಕೇಂದ್ರ ಸೂಚಿಸಿದಾಗ ಸಂಪುಟ ವಿಸ್ತರಣೆ: ಬಿಎಸ್‌ವೈ

ಕೊಪ್ಪಳ prajakiran.com: ಹಲವು ದಿನಗಳಿಂದ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನರ್ರಚನೆ ನನೆಗುದಿಗೆ ಬಿದ್ದಿರುವ ಕುರಿತು ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರ ತಿಳಿಸಿದಾಗ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದರು. ಕೊಪ್ಪಳದ ಬಸಾಪುರ ಏರ್‌ಸ್ಟ್ರಿಪ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೋಕ್ಷವಾಗಿ ಸಂಪುಟ ಪುನರ್ರಚನೆ ಇಲ್ಲ, ಸಂಕ್ರಾಂತಿ ನಂತರ ಸಂಪುಟ ವಿಸ್ತರಣೆ ಆಗಲಿದೆ ಎಂದು ತಿಳಿಸಿದರು. ರಾಜ್ಯದ ಬಿಜೆಪಿ ಸಚಿವರು, ಶಾಸಕರ ಜೊತೆ ಯುವರಾಜ್ ಫೋಟೋ ತೆಗೆಸಿಕೊಂಡದ್ದು ಅಪರಾಧ ಏನಲ್ಲ. ಆದರೆ ಯುವರಾಜ ಪ್ರಕರಣ ತನಿಖೆ ಹಂತದಲ್ಲಿದೆ. ತನಿಖೆ […]

ರಾಜ್ಯ

ಧಾರವಾಡದಲ್ಲಿ ಸುರಿದ ಧಾರಕಾರಾ ಮಳೆಗೆ ಜನಜೀವನ ತತ್ತರ

ಧಾರವಾಡ prajakiran.com : ಧಾರವಾಡದಲ್ಲಿ ಶುಕ್ರವಾರ ಸಂಜೆ ಸುರಿದ ಧಾರಕಾರಾ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸುಮಾರು ೨ ಗಂಟೆಗಳ ಕಾಲ ಸುರಿದ ಅಕಾಲಿಕ ಮಳೆ ಸಾಕಷ್ಟು ಅವಾಂತರವನ್ನೇ ಸೃಷ್ಟಿಸಿದೆ. ಗಾಳಿ ಸಮೇತ ಅರ್ಧ ಗಂಟೆಗಳ ಕಾಲ ತುಂತುರು ಮಳೆ ಸುರಿದ ಬಳಿಕ ೨ ಗಂಟೆಗಳ ಕಾಲ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ, ಅಂಗಡಿಗಳಿಗೆ, ಹೊಟೇಲ್ ಗಳಿಗೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಅಲ್ಲದೆ, ಹಲವಡೆ ಬೈಕುಗಳು ನೀರಿನಲ್ಲಿ ಕೊಚ್ಚಿಕೊಂಡು […]

ರಾಜ್ಯ

ಮಾಜಿ ಸಚಿವ ವಿನಯ ಕುಲಕರ್ಣಿ, ಸೋದರ ಮಾವ ಚಂದ್ರಶೇಖರ್ ಇಂಡಿ ನ್ಯಾಯಾಂಗ ಬಂಧನದ ಅವಧಿ ಜ. 22ರ ವರೆಗೆ ವಿಸ್ತರಣೆ

ಧಾರವಾಡ prajakiran.com : ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಮತ್ತು ಅವರ ಸೋದರ ಮಾವ ಚಂದ್ರಶೇಖರ್ ಇಂಡಿ ಅಲಿಯಾಸ್ ಚಂದೂ ಮಾಮ ನ್ಯಾಯಾಂಗ ಬಂಧನದ ಅವಧಿಯನ್ನು ಜ. 22ರ ವರೆಗೆ ವಿಸ್ತರಿಸಿ ಧಾರವಾಡದ ಮೂರನೇ ಅಧಿಕ ಹಾಗೂ ವಿಶೇಷ ಸಿಬಿಐ ನ್ಯಾಯಾಲಯ ಆದೇಶ ಹೊರಡಿಸಿದೆ. ಇಬ್ಬರು ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಜ. 8ರಂದು ಮುಕ್ತಾಯವಾದ ಹಿನ್ನೆಲೆಯಲ್ಲಿ ಮತ್ತೆ ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಲಾಯಿತು. ಸಿಬಿಐ […]