ಧಾರವಾಡ prajakiran. com : ಧಾರವಾಡದ ನವೋದಯ ನಗರದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ವಯೋವೃದ್ಧ ಮಹಿಳೆಯನ್ನು ಮರಳಿ ಗೂಡಿಗೆ ಸೇರಿಸುವ ಮೂಲಕ ಧಾರವಾಡದ ವಿದ್ಯಾಗಿರಿ ನವನಗರವನ್ನು ಠಾಣೆಯ
ಎ ಎಸ್ ಐ ಚನ್ನಬಸಪ್ಪ ಚಲವಾದಿ ಮಾನವೀಯತೆ ಮೆರೆದಿದ್ದಾರೆ.
ಈ ಬಗ್ಗೆ ಸಾರ್ವಜನಿಕರು 112 ಗೆ ಕರೆ ಮಾಡಿ ಮಾಹಿತಿ ತಿಳಿಸಿದಾಗ, ಹೊಯ್ಸಳ 112 ವಾಹನದ ಕರ್ತವ್ಯದಲ್ಲಿದ್ದ ಎಎಸ್ಐ ಚನ್ನಬಸಪ್ಪ ಸಿ.ಯು. ಹಾಗೂ ಸಿಬ್ಬಂದಿಯವರು ಸಾರ್ವಜನಿಕರ ಸಹಾಯದಿಂದ ಮಾತನಾಡಲು ಆಗದ ಸ್ಥಿತಿಯಲ್ಲಿದ್ದ ಸುಮಾರು 80 ವರ್ಷದ ವೃದ್ಧೆಯನ್ನು ಮೇಲಧಿಕಾರಿಗಳ ನಿರ್ದೇಶನದ ಮೇರೆಗೆ ನವನಗರದ ವಿವೇಕಾನಂದ ವೃದ್ಧಾಶ್ರಮದಲ್ಲಿ ಆಶ್ರಯ ಕಲ್ಪಿಸಿದ್ದರು.
ನಂತರ ಎಎಸ್ಐ ಚನ್ನಬಸಪ್ಪ ದೈನಂದಿನ ಕರ್ತವ್ಯದ ಜೊತೆಗೆ ಸದರಿ ವೃದ್ಧೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಧಾರವಾಡ ತಾಲೂಕಿನ ಹಳ್ಳಿಗೇರಿ ಗ್ರಾಮದ ಶ್ರೀಮತಿ ಸೀತಮ್ಮ ನವಲೆ ಅಂತಾ ತಿಳಿದು ಬಂದಿದ್ದರಿಂದ, ಅವರ ಮೊಮ್ಮಗನಾದ ಪುಂಡಲೀಕ ನವಲೆ ಇವರನ್ನು ಸಂಪರ್ಕಿಸಿ ವೃದ್ಧಾಶ್ರಮದಿಂದ ಸುರಕ್ಷಿತವಾಗಿ ತಮ್ಮ ಗ್ರಾಮಕ್ಕೆ ಕಳುಹಿಸಿಕೊಟ್ಟು ಪೊಲೀಸ್ ಇಲಾಖೆಯ ಗರಿಮೆ ಹೆಚ್ಚಿಸಿದ್ದಾರೆ.
80ರ ಅಜ್ಜಿಯನ್ನು ಸುರಕ್ಷಿತವಾಗಿ ವೃದ್ಧಾಶ್ರಮಕ್ಕೆ ಸೇರಿಸಿ ಹೆಸರು, ವಿಳಾಸವನ್ನು ಪತ್ತೆ ಮಾಡಿ ಮರಳಿ ಗ್ರಾಮಕ್ಕೆ ತಲುಪಿಸಿದ ವಿದ್ಯಾಗಿರಿ ಠಾಣೆಯ ಎಎಸ್ಐ ಚನಬಸಪ್ಪ ಸಿ.ಯು. ಹಾಗೂ ಹೊಯ್ಸಳ ಸಿಬ್ಬಂದಿಯವರಿಗೆ ಅಜ್ಜಿಯ ಸಂಬಂಧಿಕರು ಪ್ರಶಂಸೆ ವ್ಯಕ್ತಪಡಿಸಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.