ಧಾರವಾಡ Prajakiran.com : ಬೈಕ್ ಹಾಗೂ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದ ಘಟನೆ ಧಾರವಾಡ ಎಸ್ಪಿ ಕಚೇರಿಯ ಎದುರು ಗುರುವಾರ ಸಂಜೆ ನಡೆದಿದೆ.
ಘಟನೆಯಲ್ಲಿ ಬೈಕ್ ಸವಾರನಿಗೆ ಗಾಯವಾಗಿದ್ದು ಸ್ಥಳಿಯ ವಾಹನ ಸವಾರರು ಗಾಯಗೊಂಡ ಬೈಕ್ ಸವಾರನನ್ನು ಅಂಬುಲೆನ್ಸ್ ಸಹಾಯ ಪಡೆದು ಧಾರವಾಡದ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು.
ಘಟನಾ ಸ್ಥಳಕ್ಕೆ ಧಾರವಾಡ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಘಟನೆ ಕುರಿತು ಮಾಹಿತಿ ಕಲೆ ಹಾಕಿ ಮುಂದಿನ ಕ್ರಮ ಜರುಗಿಸಿದರು.