ಮಂಡ್ಯ ಪ್ರಜಾಕಿರಣ.ಕಾಮ್ ಮಾ. 12 : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾನುವಾರ 8479 ಕೋಟಿ ರೂ.ಗಳ ವೆಚ್ಚದ ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ರಾಷ್ಟಕ್ಕೆ ಸಮರ್ಪಿಸಿದರು.
ಇದೇ ವೇಳೆ 4128 ಕೋಟಿ ರೂ.ವೆಚ್ಚದ ಮೈಸೂರು – ಕುಶಾಲನಗರ 4 ಪಥಗಳ ಹೆದ್ದಾರಿ ಕಾಮಗಾರಿಯ 4 ಪ್ಯಾಕೇಜ್ ಹಾಗೂ ಷಟ್ಪಥ ಬೆಂಗಳೂರು- ಮೈಸೂರು ವಿಭಾಗ ರಾಷ್ಟ್ರೀಯ ಹೆದ್ದಾರಿ 275 ರ 2 ಪ್ಯಾಕೇಜ್ ಗಳ ಶಂಕುಸ್ಥಾಪನೆ ನೆರವೇರಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ರಾಷ್ಟ್ರೀಯ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ, ಸಂಸದರಾದ ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್ ಮೊದಲಾದ ಗಣ್ಯರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.