ಧಾರವಾಡ prajakiran.com : ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ ಏಳು ಹಾಗೂ ಹಾವೇರಿ ಜಿಲ್ಲೆಯ ಒಬ್ಬರು ಸೇರಿ ಒಟ್ಟು ಎಂಟು ಜನ ಕಳೆದ ಐದು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಿಳಿಸಿದೆ.
ಮೃತ ಸೋಂಕಿತರನ್ನು ಹುಬ್ಬಳ್ಳಿ ದಾಜಿಬಾನಪೇಟೆ ನಿವಾಸಿ ಪಿ-76754 ( 74,ಪುರುಷ)
ಅಣ್ಣಿಗೇರಿ ತಾಲೂಕಿನ ನಿವಾಸಿ ಪಿ-102168 (34,ಪುರುಷ)
ಹುಬ್ಬಳ್ಳಿ ಜೆಪಿ ನಗರ ನಿವಾಸಿ ಪಿ-103008 (53 ,ಪುರುಷ)
ಹುಬ್ಬಳ್ಳಿ ವಿಜಯನಗರದ ನಿವಾಸಿ ಪಿ-95123 (72,ಪುರುಷ)
ಹುಬ್ಬಳ್ಳಿ ಹೊಸೂರು ನಿವಾಸಿ ಪಿ-102213 (72,ಪುರುಷ)
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹತ್ತಿಮತ್ತೂರ ಗ್ರಾಮದ ನಿವಾಸಿ
ಪಿ-106577 (55,ಪುರುಷ)
ಧಾರವಾಡ ತಾಲೂಕಿನ ಹಾರೋಬೆಳವಡಿ ನಿವಾಸಿ ಪಿ-68689 ( 73,ಪುರುಷ)
ಧಾರವಾಡ ತಾಲೂಕಿನ ಹೊನ್ನಾಪೂರ ನಿವಾಸಿ ಪಿ-106986 ( 56,ಪುರುಷ)
ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ,ಕಫ,ಎದೆ ನೋವು ಮತ್ತಿತರ ಲಕ್ಷಣಗಳನ್ನು ಹೊಂದಿದ್ದರು.
ಕೋವಿಡ್ -19 ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ