ರಾಜ್ಯ

ಧಾರವಾಡದ 20ಕ್ಕೂ ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ದೃಢ……!?

ಧಾರವಾಡ prajakiran.com : ಪ್ರಸ್ತುತ ಎಲ್ಲೆಡೆ ತನ್ನ ಕದಂಬಬಾಹುಗಳನ್ನು ಚಾಚುತ್ತಿರುವ ಕೊರೋನಾ ಈಗ ಧಾರವಾಡದ ಪೊಲೀಸರ ಬೆನ್ನು ಹತ್ತಿದೆ.

ಇದೀಗ ಧಾರವಾಡದ ಸಂಚಾರ ಪೊಲೀಸ್ ಪೊಲೀಸ್ ಠಾಣೆಯ 6 ಕ್ಕೂ ಹೆಚ್ಚು ಸಿಬ್ಬಂದಿ,  ವಿದ್ಯಾಗಿರಿ ಠಾಣೆಯ 7 ಪೊಲೀಸ್ ಸಿಬ್ಬಂದಿಯಲ್ಲಿ ಕೊರೋನಾ ಲಕ್ಷಣಗಳಿರುವುದು ದೃಢಪಟ್ಟಿದ್ದು,ಇಬ್ಬರು ಎ ಎಸ್ ಐ ಗಳಿಗೂ ಸೋಂಕು ತಗುಲಿದರೆ

ಇದು ಧಾರವಾಡದ ಇತರ ಸಿಬ್ಬಂದಿ ಮತ್ತು ಪೊಲೀಸ್ ಕುಟುಂಬದವರನ್ನು ಆತಂಕಕ್ಕೀಡು ಮಾಡಿದೆ.

ವಿದ್ಯಾಗಿರಿ ಪೊಲೀಸ್ ಠಾಣೆಯ ಒಟ್ಟು 73 ಸಿಬ್ಬಂದಿಯ ಆರ್‌ಟಿಪಿಸಿಆರ್ ತಪಾಸಣೆ ನಡೆಸಿದಾಗ ಅವರಲ್ಲಿ 7 ಜನರಿಗೆ ಕೊರೋನಾ ಸೋಂಕು ತಗುಲಿರುವುದು ಗೊತ್ತಾಗಿದೆ.

ಇನ್ನೊಂದೆಡೆ ಧಾರವಾಡ ಶಹರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಕೂಡ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ.

ಧಾರವಾಡದ ಉಪನಗರ ಪೊಲೀಸ್ ಠಾಣೆಯ  ಒಬ್ಬ ಎ ಎಸ್ ಐ, ಒಬ್ಬ ಹೆಡ್ ಕಾನ್ಸಸ್ಟೇಬಲ್ ಹಾಗೂ ನಾಲ್ವರು ಪೊಲೀಸ್ ಸಿಬ್ಬಂದಿಗೆ ಕರೋನಾ ಹರಡಿದೆ.

ಅಲ್ಲದೆ, ಇದು ಇನ್ನಷ್ಟು ಜನರಿಗೆ ಹರಡುವ ಭೀತಿಯಿದ್ದು, ನಿತ್ಯ ಕರ್ತವ್ಯದಲ್ಲಿ ತೊಡಗುವ ಪೊಲೀಸರು ಸೋಂಕಿಗೆ ಈಡಾಗುತ್ತಿರುವುದು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಸಿಬ್ಬಂದಿ ಗೆ ಕಳವಳಕಾರಿ ಸಂಗತಿಯಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *