ಜಿಲ್ಲೆ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಾರ್ಡ 32, 49ರಲ್ಲಿ ಬಿಜೆಪಿ ಗೆಲುವು,

ಹುಬ್ಬಳ್ಳಿ ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ.

ವಾರ್ಡ್ 49 ರಲ್ಲಿ ಬಿಜೆಪಿ ಅಭ್ಯರ್ಥಿ ವೀಣಾ ಚೇತನ ಬರದ್ವಾಡ 3576 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಅನ್ನಪೂರ್ಣ ಮಡಿವಾಳರ 598 ಹಾಗೂ ಕಾಂಗ್ರೇಸ್ ಅಭ್ಯರ್ಥಿ ರಾಜೇಶ್ವರಿ ಮೆಹರವಾಡೆ 519 ಮತಗಳನ್ನು ಪಡೆದಿದ್ದಾರೆ. 120 ನೋಟಾ ಮತಗಳು ಸೇರಿ 4813 ಮತಗಳು ಚಲಾಯಿಸಲ್ಪಟಿವೆ. ಒಂದು ಮತ ತಿರಸ್ಕೃತವಾಗಿದೆ.

ವಾರ್ಡ್ ನಂಬರ್ 32 ರಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ ಸುರೇಂದ್ರ ಹಾನಗಲ್ 3862 ಮತಗಳನ್ನು ಪಡೆದು ಜಯಗಳಿಸಿದ್ದಾರೆ

ಕಾಂಗ್ರೆಸ್ ಅಭ್ಯರ್ಥಿ ಶೇಖರ ಕರ್ಲೆಕ್ಕನವರ 1369, ಜೆಡಿಎಸ್ ಅಭ್ಯರ್ಥಿ ವೀರೇಶ ಬಸವರಾಜ ಕುಬಸದ 205, ಎಎಪಿ ಅಭ್ಯರ್ಥಿ ಕುಮಾರ ನೂಲ್ವಿ 163 ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಪೂಜಾ ರಮೇಶ ಬಾಕಳೆ 154, ಕುಬೇರ ಪವಾರ 63 ಮತಗಳನ್ನು ಪಡೆದಿದ್ದಾರೆ. ನೋಟಾ 84 ಮತಗಳು ಸೇರಿ ಒಟ್ಟು 5898 ಮತಗಳು ಚಲಾವಣೆಯಗಿವೆ. 5814 ಮತಗಳು ಸಿಂಧು ಆಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *