ಹುಬ್ಬಳ್ಳಿ-ಧಾರವಾಡ ಪ್ರಜಾಕಿರಣ.ಕಾಮ್ : ಕಳೆದುಕೊಂಡಿದ್ದ ಮೊಬೈಲ್ ಫೋನ್ ಗಳ ಪತ್ತೆಗಾಗಿ ಇತ್ತೀಚೆಗೆ ಜಾರಿ ತಂದಿದ್ದ ನೂತನ ಇ-ಪೋರ್ಟಲ್ ( ಇ-ಸ್ಪಂದನ) ಮೂಲಕ ಅಂದಾಜು 3 ಲಕ್ಷ ರೂ ಮೌಲ್ಯದ 30 ಮೊಬೈಲ್ ಪೋನ್ ಗಳನ್ನು ಪತ್ತೆ ಮಾಡಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ರಮಣಗುಪ್ತಾ ತಿಳಿಸಿದರು.
ಅವರು ಶನಿವಾರ ಪೊಲೀಸ್ ಆಯುಕ್ತರ ಕಾರ್ಯಾಲಯದಲ್ಲಿ ಈ ಕುರಿತು ಮಾತನಾಡಿದರು.
ಇಂದು ಅವುಗಳ ಮೂಲ ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದು ಅವರು ವಿವರಿಸಿದರು.
ಸಾರ್ವಜನಿಕರು ಈ ನೂತನ ಉಪಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪೊಲೀಸ್ ಆಯುಕ್ತ ರಮಣಗುಪ್ತ ಕೋರಿದ್ದಾರೆ.
ಮೊಬೈಲ್ ಕಳೆದುಕೊಂಡ ಅನೇಕರು ಅವುಗಳನ್ನು ಮರಳಿ ಪಡೆದ ಬಳಿಕ ಅವರ ಮುಖದಲ್ಲಿ ಮಂದಹಾಸ ಮೂಡಿತ್ತು.
ಜೊತೆಗೆ ಪೊಲೀಸ್ ಇಲಾಖೆಯ ನೂತನ ಹೆಜ್ಜೆ ಗುರುತಿಗೆ ಅದರಲ್ಲಿಯೂ ಜನಮುಖಿ ಕೆಲಸಕ್ಕೆ ಮುಕ್ತ ಕಂಠದಿಂದ ಶ್ಲಾಘಿಸಿದರು.