ರಾಜ್ಯ

ಧಾರವಾಡದ ಎಸ್ ಡಿ ಎಂ ನಲ್ಲಿ 3973 ಜನರ ತಪಾಸಣೆ : ಒಟ್ಟು 306 ಜನರಲ್ಲಿ ಕೋವಿಡ್ ಸೋಂಕು

ಶನಿವಾರ 2217 ವ್ಯಕ್ತಿಗಳ ತಪಾಸಣೆಗಳಲ್ಲಿ 25 ಜನರಿಗೆ ಕೋವಿಡ್ ದೃಢ

ಧಾರವಾಡ prajakiran.com ನ.27:

ಇಲ್ಲಿನ ಎಸ್ ಡಿ ಎಂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶನಿವಾರ ಕೋವಿಡ್ ತಪಾಸಣೆಗೆ ಒಳಗಾಗಿದ್ದ 2217 ಜನರ ಕೋವಿಡ್ ತಪಾಸಣಾ ವರದಿಗಳು ಲಭ್ಯವಾಗಿದ್ದು ,ಇವರಲ್ಲಿ 25 ಜನರಿಗೆ ಮಾತ್ರ ಕೋವಿಡ್ ಸೋಂಕು ದೃಢವಾಗಿದೆ.

ಪಾಸಿಟಿವಿಟಿ ದರ ಶೇ.1.12 ರಷ್ಟಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಕೆ ಪಾಟೀಲ ತಿಳಿಸಿದ್ದಾರೆ.

ಕಳೆದ ಮೂರು ದಿನಗಳ ಅವಧಿಯಲ್ಲಿ ತಪಾಸಣೆ ಮಾಡಲಾಗಿದ್ದ 1756 ಜನರಲ್ಲಿ 281 ಜನರಲ್ಲಿ ಸೋಂಕು ದೃಢಪಟ್ಟು ಪಾಸಿಟಿವಿಟಿ ದರ ಶೇ.16 ಕ್ಕೇರಿತ್ತು.
ಶುಕ್ರವಾರ ಮತ್ತು ಶನಿವಾರ ಸ್ವ್ಯಾಬ್ ಸಂಗ್ರಹಿಸಿದ್ದ 2217 ಜನರಲ್ಲಿ ಕೇವಲ 25 ವ್ಯಕ್ತಿಗಳಲ್ಲಿ ಮಾತ್ರ ಸೋಂಕು ಕಂಡು ಬಂದಿದೆ.

ಪಾಸಿಟಿವಿಟಿ ದರ ಶೇ.1.12 ಇದೆ. ಎಸ್ ಡಿ ಎಂ‌ ಆವರಣದ ವಿದ್ಯಾರ್ಥಿಗಳು,ವೈದ್ಯರು,ಸಿಬ್ಬಂದಿ, ರೋಗಿಗಳು, ಸಹಾಯಕರು ಸೇರಿ ಒಟ್ಟು 3973 ತಪಾಸಣೆಯಿಂದ 306 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ಎಸ್ ಡಿ ಎಂ ಆವರಣದ ವಿದ್ಯಾರ್ಥಿಗಳು,ವೈದ್ಯರು ಹಾಗೂ ಸಿಬ್ಬಂದಿ ವರ್ಗದ ಕೆಲವರಲ್ಲಿಯೇ ಈ ಸೋಂಕು ಸೀಮಿತವಾಗಿದೆ.

ರೋಗಿಗಳು,ಅವರ ಆರೈಕೆದಾರರಲ್ಲಿ ಈ ಸೋಂಕು ವ್ಯಾಪಿಸಿಲ್ಲ. ಜಿಲ್ಲಾಡಳಿತ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸರು,ಎಸ್ ಡಿ ಎಂ ಆಡಳಿತ ಮಂಡಳಿ ಬಿಗಿಕ್ರಮಗಳನ್ನು ಮುಂದುವರೆಸಲಿವೆ ಎಂದು ಅವರು ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *