ಧಾರವಾಡ ಪ್ರಜಾಕಿರಣ.ಕಾಮ್ : ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ರೋಪ್ ಸ್ಕಿಪಿಂಗ್ ಪುರುಷ ಮತ್ತು ಮಹಿಳೆಯರ ಪಂದ್ಯಾವಳಿಗಳು ಜ. 21 ರಿಂದ 24 ರವರೆಗೆ ಎಲ್‌ಎನ್ ಸಿಟಿ ವಿಶ್ವವಿದ್ಯಾಲಯ ಭೂಪಾಲ್ ದಲ್ಲಿ ನಡೆದಿದವು.
ಕರ್ನಾಟಕ ವಿಶ್ವವಿದ್ಯಾಲಯದ ಕ್ರೀಡಾಪಟುಗಳು ಒಟ್ಟು 19 ಪದಕಗಳನ್ನು ಬೇಟೆಯಾಡಿದರು.
ಮಹಿಳೆಯರ ತಂಡ ದ್ವಿತೀಯ ಸ್ಥಾನವನ್ನು ಪಡೆದಿದ್ದು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೆಮ್ಮೆ ತಂದಿದ್ದಾರೆ.
ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ
1. ಐಶ್ವರ್ಯ ಎಚ್ ಡಬಲ್ ಅಂಡರ್ ಮಹಿಳಾ ಸ್ಪರ್ಧೆಯಲ್ಲಿ ಬಂಗಾರದ ಪದಕ
2. ಕೃತಿಕ ಹಟ್ಟಿ ಟ್ರಿಬಲ್ ಅಂಡರ್ ಮಹಿಳಾ ಸ್ಪರ್ಧೆಯಲ್ಲಿ ಬಂಗಾರದ ಪದಕ
3. ಭೂಮಿಕಾ ಬನ್ನಿಕೊಪ್ಪ ಮಹಿಳಾ ಸ್ಪೀಡ್ಹೋಪ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ
4. ಪ್ರೀತಿ ಸಂದಿಮನಿ ಮಹಿಳಾ ಸ್ಪೀಡ್ ಪ್ರಿಂಟ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ
5. ಭೀಮಾಂಬಿಕ ನಸಬಿ ಮಹಿಳಾ ಎಸ್ ಆರ್ ಪಿ ಸ್ಟೈಲ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ
6. ನೇತ್ರ ತಳವಾರ್ ಮಹಿಳಾ ಸ್ಪೀಡ್ ಎಂಡೋರೆನ್ಸ್ ಸ್ಪರ್ಧೆಯಲ್ಲಿ ಕಂಚಿನ ಪಡೆದಿದ್ದಾರೆ.
ಪುರುಷರ ವೈಯಕ್ತಿಕ ವಿಭಾಗ
ಹರೀಶ್ ವೆಂಕನಗೌಡ ಪುರುಷರ ಸ್ವೀಟ್ ಪ್ರಿಂಟ್ ಸ್ಪರ್ಧೆಯಲ್ಲಿ ಕಂಚಿನ ಪದಕ, ಭೀಮ್ ಸೇನ್ ಪರಸಾಪುರ್, ಪ್ರವೀಣ್ ನೀರುಳ್ಳಿ, ಹರೀಶ್ ವೆಂಕನಗೌಡರು, ಅಭಿಷೇಕ್ ಪೂಜಾರ್ ಇವರನ್ನ ಒಳಗೊಂಡ ತಂಡ ಪುರುಷರ ಸ್ಪೀಡ್ ರಿಲೇ ತಂಡದಲ್ಲಿ ಕಂಚಿನ ಪದಕ ಪಡೆದಿದೆ.
ಭೀಮಾಂಬಿಕ ನಸವಿ, ನೇತ್ರ ತಳವಾರ್, ಐಶ್ವರ್ಯ ಹುಬ್ಬಳ್ಳಿಮಠ, ಕೃತಿಕ ಹಟ್ಟಿ ಇವರನ್ನೊಳಗೊಂಡ ಮಹಿಳೆಯರ ಸ್ಪೀಡ್ ರಿಲೇ ತಂಡದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದರು.
ಭೀಮಾಂಬಿಕನ ಶ್ರೀ ಕುಮಾರಿ ನೇತ್ರ ತಳವಾರ್ ಕುಮಾರಿ ಐಶ್ವರ್ಯ ಹುಬ್ಬಳಿ ಮಠ ಕುಮಾರಿ ಕೃತಿಕ ಹಟ್ಟಿ ವರನ್ನು ಒಳಗೊಂಡ ತಂಡ ಮಹಿಳೆಯರು ಡಬಲ್ ಟಚ್ ಸ್ಪೀಡ್ ರಿಲೇಯಲ್ಲಿ ಕಂಚಿನ ಪದಕ ಗಳಿಸಿದರು.
2 ಬಂಗಾರ, 7 ಬೆಳ್ಳಿ, 10 ಕಂಚಿನ ಪದಕದೊಂದಿಗೆ ಒಟ್ಟು 19 ಪದಕಗಳನ್ನು ಒಳಗೊಂಡು ಮಹಿಳೆಯರ ತಂಡ ದ್ವಿತೀಯ ಸ್ಥಾನವನ್ನು ಪಡೆದಿದೆ.
ರೋಪ್ ಕೀಪಿಂಗ್ ತಂಡಕ್ಕೆ ಮುಖ್ಯ ತರಬೇತಿದಾರರಾಗಿ ಬಸವರಾಜ ಪಟಾತ ತಂಡದ ವ್ಯವಸ್ಥಾಪಕರಾಗಿ ಮುತ್ತುರಾಜ್ ಹಿಪ್ಪರಗಿ
ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ ಬಿ ಗುಡಿಸಿ, ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಭಾಗದ ನಿರ್ದೇಶಕ ಡಾ. ಬಿ ಎಮ್ ಪಾಟೀಲ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.