ರಾಜ್ಯ

ರಾಜ್ಯದಲ್ಲಿ ಒಂದೇ ದಿನ 105 ಪಾಸಿಟಿವ್ ಪ್ರಕರಣ ಪತ್ತೆ

ಬೆಂಗಳೂರು prajakiran.com :  ಕರ್ನಾಟಕದಲ್ಲಿ ಶುಕ್ರವಾರ ಒಂದೇ ದಿನ 105 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಆ ಮೂಲಕ ರಾಜ್ಯದ ಕರೋನಾ ಸೋಂಕಿತರ ಸಂಖ್ಯೆ 1710 ಕ್ಕೆ ಏರಿಕೆಯಾಗಿದೆ .

ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿಯೇ 51 ಜನರಿಗೆ ಕರೋನಾ ಸೋಂಕು ತಗುಲಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದೆ.

ಅದೇ ರೀತಿ ತುಮಕೂರಿನಲ್ಲಿ 8 ಮಂದಿಗೆ ಮಹಾಮಾರಿ ಸೋಂಕು ವಕ್ಕರಿಸಿಕೊಂಡಿದೆ. 8 ಜನರ ಪೈಕಿ ಇಬ್ಬರು ಬಾಲಕರು ಇದ್ದಾರೆ. ಆರು ಜನರು ಮುಂಬಯಿನಿಂದ ಬಂದವರಿದ್ದಾರೆ.

ಕರಾವಳಿಯ ಜನರಿಗೆ ಕರೋನಾ ಬೆಂಬಿಡದೆ ಕಾಡುತ್ತಿದೆ. ಯುವತಿ ಸೇರಿ 9 ಜನರು ಮಂಗಳೂರಿಗೆ ಬಂದಿದ್ದರು. ಅದರಲ್ಲಿ ಬೆಳ‍್ತಂಗಡಿ ತಾಲೂಕಿನ ಆರಂಬೋಢಿಯ ಯುವತಿಗೆ ಕರೋನಾ ಪಾಸಿಟಿವ್ ಬಂದಿದೆ. ಇದು ಉಳಿದವರಿಗೆ ಆತಂಕ ತಂದಿದೆ.

ಬೆಂಗಳೂರಿನಲ್ಲಿ 5 ಮಂದಿಗೆ ಕಿಲ್ಲರ್ ಕರೋನಾ ತಗುಲಿದೆ. ಇವರ ಪ್ರಯಾಣ ಹಿಸ್ಟರಿ ಭಯಾನಕವಾಗಿದೆ.

ಬೀದರ ಜಿಲ್ಲೆಯ 6 ಜನರ ಪೈಕಿ ಮುಂಬಯಿನಿಂದ ಬಂದ ನಾಲ್ವರಿಗೆ ಹಾಗೂ ತೆಲಂಗಾಣದಿಂದ  ಬಂದ ಇಬ್ಬರಿಗೆ ವೈರಸ್ ಅಟ್ಯಾಕ್ ಆಗಿದೆ.

ಅದರಲ್ಲಿ ಎರಡು ವರ್ಷದ ಮಗು ಸೇರಿದೆ. ಆ ಮೂಲಕ ಸೋಂಕಿತರ ಸಂಖ್ಯೆ ಬೀದರ ಜಿಲ್ಲೆಯೊಂದರಲ್ಲಿಯೇ 75ಕ್ಕೆ ಏರಿಕೆಯಾಗಿದೆ.  

ಹಾವೇರಿಯಲ್ಲಿ  3, ವಿಜಯಪುರದಲ್ಲಿ 2 ಪಾಸಿಟವ್ ಪ್ರಕರಣ ಪತ್ತೆಯಾಗಿವೆ. ಮಂಡ್ಯದಲ್ಲಿ 3, ಹಾಸನದಲ್ಲಿ ಶುಕ್ರವಾರ ಮತ್ತೆ 14 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಆ ಮೂಲಕ ಸೋಂಕಿತರ ಸಂಖ್ಯೆ 80ಕ್ಕೆ ಏರಿಕೆಯಾಗಿದೆ.

ಧಾರವಾಡದಲ್ಲಿ 2 ಪಾಸಿಟಿವ್ ಕೇಸ್ ಗಳು ದೃಢಪಟ್ಟಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆಗೊಳಿಸಿರುವ ಹೆಲ್ತ್ ಬುಲೇಟಿನ್ ತಿಳಿಸಿದೆ.

ತಮಿಳುನಾಡಿನಿಂದ ಉತ್ತರ ಪ್ರದೇಶಕ್ಕೆ ಹೊರಟಿದ್ದ ಯುವಕನಿಗೆ ಚಿತ್ರದುರ್ಗದ ಚಳ್ಳಕೆರೆಯಲ್ಲಿ ತಡೆಯ ಹಿಡಿಯಲಾಗಿತ್ತು.

ಆತನನ್ನು ತಪಾಸಣೆ ನಡೆಸಿ ಕ್ವಾರಂಟೆನ್ ಮಾಡಲಾಗಿತ್ತು. ಇತನೊಂದಿಗೆ 25 ಜನ ಸಂಪರ್ಕದಲ್ಲಿದ್ದರು. ಅವರ ಮೇಲೂ ನಿಗಾವಹಿಸಲಾಗಿದೆ.

ಬಾಗಲಕೋಟೆಯ ಬಾದಾಮಿ ಪಟ್ಟಣದ ಎಲ್ ಐಸಿ ಎಜೆಂಟ್ ನಿಗೆ ಸೋಂಕು ಬಂದಿದೆ. ಈತನಿಗೆ ರೋಗಿ ನಂ 680ರಿಂದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಯಿಂದ ತನ್ನ ಚಿಕ್ಕಪ್ಪನಿಗೆ ಸೋಂಕು ತಗುಲಿದೆ.

ದೆಹಲಿಯಿಂದ ಬಂದ ಧಾರವಾಡದ ಇಬ್ಬರು 23, 22 ವರ್ಷದ ಯುವಕರಿಗೆ ಸೋಂಕು ತಗುಲಿದೆ. ಅವರಿಬ್ಬರು ದೆಹಲಿಯಿಂದ ವಾಪಾಸ್ ಆದವರಾಗಿದ್ದಾರೆ. ಆ ಯುವಕರಿಗೆ ಕರೋನಾ ಕಾಣಿಸಿಕೊಂಡಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ.

ಹಾವೇರಿಯ ಮೂವರಿಗೆ ವೈರಸ್ ಆಟ್ಯಾಕ್ ಆಗಿದೆ. ಮಹಾರಾಷ್ಟ್ರದಿಂದ ಬಂದವರಿಗೆ ಸೋಂಕು ಕಾಣಿಸಿಕೊಂಡಿದೆ. ಹಾವೇರಿ ಜಿಲ್ಲೆಯ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

105 ಜನರ ಪೈಕಿ 41 ಮಹಿಳೆಯರು, 10 ವರ್ಷದ ಒಳಗಿನ 7 ಮಕ್ಕಳು ಇದ್ದಾರೆ. 105 ಜನರಲ್ಲಿ 83 ಜನರಿಗೆ ಮಹಾರಾಷ್ಟ್ರ ಮೂಲದ ನಂಟಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *