ರಾಜ್ಯ

ರಾಜ್ಯದಲ್ಲಿ 10 ಹೊಸ ಸೋಂಕು ಪತ್ತೆ : ಹಲವು ಜಿಲ್ಲೆಗಳಲ್ಲಿ ಕರೋನಾ ಅಟ್ಟಹಾಸ

ಬೆಂಗಳೂರು prajakiran.com : ರಾಜ್ಯದಲ್ಲಿ ಸೋಮವಾರ ಮತ್ತೆ 10 ಹೊಸದಾಗಿ ಕರೋನಾ ಸೋಂಕು ಪತ್ತೆಯಾಗಿವೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಕರೋನಾ ಅಟ್ಟಹಾಸಮುಂದುವರೆದಿದ್ದು, ಆ ಮೂಲಕ ರಾಜ್ಯದ ಸೋಂಕಿತರ ಸಂಖ್ಯೆ 858ಕ್ಕೆ ಏರಿಕೆಯಾಗಿದೆ.

ಬೆಣ್ಣೆನಗರಿ ದಾವಣಗೆರೆಯಲ್ಲಿ ಮತ್ತೇ ಮೂವರಿಗೆ ಹೆಮ್ಮಾರಿ ಅಟ್ಯಾಕ್ ಆಗಿದೆ. ಬಾಗಲಕೋಟೆಯ ಬನಹಟ್ಟಿಯ 20 ವರ್ಷದ ಯುವಕನಾಗಿದ್ದು, ಆತ ಗುಜರಾತನಅಹಮದಾಬಾದ್ ಗೆ ಹೋಗಿದ್ದ ಬಂದಿದ್ದ.

 ತಬ್ಲಿಘ್ ಲಿಂಕ್ ಹೊಂದಿದ ಒಬ್ಬನಿಗೆ ಮತ್ತು ಬಾದಾಮಿಯ ಯುವಕನಿಗೆ ಸೋಂಕು ಬಂದಿದೆ.

ಅದೇ ಬೀದರ್ ನಲ್ಲಿ ಎರಡು ಬಂದಿವೆ. ಇನ್ನೂ  ಹಾವೇರಿಯಲ್ಲಿ ಮತ್ತೊಂದು ಸೋಂಕು ಕಾಣಿಸಿಕೊಂಡಿದೆ.  ಅವನು ಮುಂಬೈನಿಂದ ಬಂದ ವ್ಯಕ್ತಿಯಾಗಿದ್ದಾನೆ.

ಮಾವಿನಹಣ್ಣಿನ ವ್ಯಾಪಾರಿಯಾಗಿದ್ದ ಈತ ಎರಡು ಬಾರಿ ಮುಂಬೈಗೆ ಹೋಗಿಬಂದಿದ್ದ ಎಂದು ತಿಳಿದುಬಂದಿದೆ.

ಅದೇ ರೀತಿ  ಕಲಬುರಗಿ, ವಿಜಯಪುರದಲ್ಲಿ ತಲಾ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ.   

ನಿನ್ನೇ ಭಾನುವಾರ 54 ಪ್ರಕರಣ ಗಳು ದೃಢಪಟ್ಟಿದ್ದವು. ಆದರೆ ಸೋಮವಾರ ಬೆಳಗ್ಗೆ ಕೇವಲ 10 ಕೇಸ್ ಪಾಸಿಟಿವ್ ಕೇಸ್  ಬಂದಿರುವುದು ತುಸು ಸಮಾಧಾನದ ಸಂಗತಿಯಾಗಿದೆ.

ಇದು ಸಂಜೆಯ ವೇಳೆಗೆ ಮತ್ತೇ ಎಷ್ಟು ಆಗುತ್ತದೆ ಎಂಬ ಆತಂಕ ಎಲ್ಲರಲ್ಲಿ ಮನೆ ಮಾಡಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *