ರಾಜ್ಯ

ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ : ದೀಪಕ್ ಚುಂಚೋರೆ

ಧಾರವಾಡ prajakiran.com : ಧಾರವಾಡದ  ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ಅಗಸ್ಟ್ 14ರ ವರೆಗೆ ಮೇಯರ್ ಈರೇಶ ಅಂಚಟಗೇರಿ ಅವರಿಗೆ ಗಡುವು ನೀಡಲಾಗುವುದು. ಒಂದು ವೇಳೆ ಠರಾವು ಪಾಸ್ ಮಾಡದೇ ಇದ್ರೆ ಮುಂದೆ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಆಗಬೇಕೆಂದು ಚಳುವಳಿ ಆರಂಭಿಸಲಾಗುವುದು ಎಂದು ಎಐಸಿಸಿ ಸದಸ್ಯ ದೀಪಕ್ ಚಿಂಚೋರೆ ತಿಳಿಸಿದರು. ಅವರು ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಸ್ಥಾನ ಆಯ್ಕೆ ಧಾರವಾಡಕ್ಕೆ ಸಿಕ್ಕಿದ್ದು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಕೂಗು […]

ರಾಜ್ಯ

ಜನ ಜಾಗೃತಿ ಸಂಘ, ಬಸವರಾಜ್ ಕೊರವರ್ ಗೆಳೆಯರ ಬಳಗದ ವತಿಯಿಂದ ಧಾರವಾಡದ ತಾಲೂಕಿನ 17 ಸರಕಾರಿ ಶಾಲೆಗಳ ನಾಲ್ಕು ಸಾವಿರಕ್ಕೂ ಅಧಿಕ ಮಕ್ಕಳಿಗೆ ನೋಟ್ ಬುಕ್ ವಿತರಣೆ

ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳು ಬಡವರಲ್ಲ : ಬಸವರಾಜ ಕೊರವರ ಸರಕಾರಿ ಶಾಲೆಗಳಲ್ಲಿ ಕಲಿಕೆ ಜೊತೆಗೆ ಮಕ್ಕಳಿಗೆ ಜೀವನ ಪಾಠ ಧಾರವಾಡ : ಧಾರವಾಡದ ಜನಜಾಗೃತಿ ಸಂಘ ಹಾಗೂ ಬಸವರಾಜ ಕೊರವರ ಗೆಳೆಯರ ಬಳಗದ ವತಿಯಿಂದ ತಾಲೂಕಿನ  17 ಸರಕಾರಿ ಶಾಲೆಯ 4 ಸಾವಿರ ಮಕ್ಕಳಿಗೆ ಸುಮಾರು 10 ಸಾವಿರ ನೋಟ್ ಬುಕ್ ವಿತರಣೆ ಮಾಡಲಾಗಿದೆ‌. ಅದೇ ರೀತಿಯಾಗಿ ಶನಿವಾರ ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ನೂರಾರು ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಯಿತು. […]

ರಾಜ್ಯ

ಕಳಪೆ ಬಾಳೆ ಸಸಿ ಪೂರೈಕೆ : ಧಾರವಾಡ ರೈತನಿಗೆ 4 ಲಕ್ಷ ರೂ. ನಷ್ಟ ಪರಿಹಾರಕ್ಕೆ ಗ್ರಾಹಕರ ಆಯೋಗ ಆದೇಶ

50 ಪ್ರಕರಣಗಳನ್ನು ರಾಜಿ ಸಂಧಾನ ಧಾರವಾಡ prajakiran. com ಜೂ 24: ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಇಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರೈತರೊಬ್ಬರಿಗೆ ಕಳಪೆ ಬಾಳೆ ಸಸಿ ಪೂರೈಸಿದ್ದ ಅಗ್ರೋ ಕೇಂದ್ರವು 4 ಲಕ್ಷ ರೂ.ಪರಿಹಾರ ನೀಡುವ ಆದೇಶವೂ ಸೇರಿದಂತೆ, ಸುಮಾರು 50 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಕೈಗೊಳ್ಳಲಾಯಿತು. ಅವುಗಳಲ್ಲಿ 17 ಪ್ರಕರಣಗಳು ರಾಜಿಯಾಗಿ ಒಟ್ಟು ಸುಮಾರು 45 ಲಕ್ಷ ರೂಪಾಯಿ ಪರಿಹಾರ ನಿಗದಿಪಡಿಸಲಾಯಿತು . 2012-13 ನೇ ಸಾಲಿನ ಸರ್ಕಾರದ […]

ರಾಜ್ಯ

ಧಾರವಾಡ ಹೈಕೋರ್ಟ್ ತಡೆಯಾಜ್ಞೆಯಿದ್ದರೂ ಮನೆ ಕಟ್ಟಿ ಉದ್ಘಾಟನಾ ಸಮಾರಂಭ ನೆರವೇರಿಸಿದ ಫ್ರೂಟ್ ಇರ್ಪಾನ್ ಸಹಚರರು….!

ಧಾರವಾಡ ಉಪನಗರ ಪೊಲೀಸರ ಜಾಣಕುರುಡು ಅಚ್ಚರಿ ತಂದ ಪೊಲೀಸರ ನಡೆ ಧಾರವಾಡ prajakiran.com : ಧಾರವಾಡದ ಮಾಳಾಪುರದ ಕರ್ನಾಟಕ ಗಾದಿ ಕಾರ್ಖಾನೆಯ ಸಮೀಪದ ಸರ್ವೇ ನಂಬರ್ 73/1 ನಲ್ಲಿ ಐದು ಎಕರೆ 2 ಗುಂಟೆ, 73/2 ನಲ್ಲಿ ಮೂರು ಎಕರೆ ಹಾಗೂ ಸರ್ವೇ ನಂಬರ್ 60/1 ನಲ್ಲಿ ಮೂರು ಎಕರೆ 32 ಗುಂಟೆ ಗಿರೀಶ ಗಿರಿಯಪ್ಪನವರ ಅವರ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್ 2022ರ ಫೆ. 21 ರಂದು ತಡೆಯಾಜ್ಞೆ ನೀಡಿದೆ. ಜೊತೆಗೆ ಹಾಗೂ ಧಾರವಾಡದ […]

ರಾಜ್ಯ

ಬೆಳಗಾವಿಯ ತಾಯಿ, ಇಬ್ಬರು ಮಕ್ಕಳ ಹತ್ಯೆ ಕೇಸ್ : ಆರೋಪಿ ಪ್ರವೀಣ್ ಭಟ್ ನಿರ್ದೋಷಿ ಎಂದ ಧಾರವಾಡ ಹೈಕೋರ್ಟ್

ಬೆಳಗಾವಿ prajakiran. com :  ಬೆಳಗಾವಿಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಭಟ್ ನಿರ್ದೋಷಿ ಎಂದು ಹೈಕೋರ್ಟ್‌ ಧಾರವಾಡ ಪೀಠ ಮಹತ್ವದ ತೀರ್ಪು ಪ್ರಕಟಿಸಿದೆ. ಆರೋಪಿ ಪ್ರವೀಣ್ ಭಟ್ ಗೆ ಬೆಳಗಾವಿ ಎರಡನೇ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ 2018, ಏಪ್ರಿಲ್ 16ರಂದು ಜೀವಾವಧಿ ಶಿಕ್ಷೆ ಸಿ ಆದೇಶ ಹೊರಡಿಸಿತ್ತು. ಈ ತೀರ್ಪಿನ ವಿರುದ್ಧ ಪ್ರವೀಣ್ ಭಟ್ ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದ. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ಎಸ್.ಮುದಗಲ್, ಎಂಜಿಎಸ್ […]

ರಾಜ್ಯ

ಬಸವಣ್ಣ ಕುರಿತ ಪಾಠ : ಹಿಂದಿನ ಸಮಿತಿಗಳ ಪಠ್ಯದಲ್ಲೂ ದೋಷ : ಸಾಣೆಹಳ್ಳಿ ಶ್ರೀ

ಬೆಂಗಳೂರು prajakiran.com ಜೂನ್ 20 : ಬಸವಣ್ಣನವರ ಕುರಿತ ಪಾಠದಲ್ಲಿ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯಷ್ಟೇ ಅಲ್ಲ; ಇದಕ್ಕೂ ಹಿಂದಿನ ಪ್ರೊ. ಬರಗೂರು ರಾಮಚಂದ್ರಪ್ಪ ಸಮಿತಿ ಹಾಗೂ ಪ್ರೊ. ಮುಡಂಬಡಿತ್ತಾಯ ಅಧ್ಯಕ್ಷತೆಯ ಸಮಿತಿಗಳು ರೂಪಿಸಿರುವ ಪಾಠದಲ್ಲಿಯೂ ದೋಷಗಳಿದ್ದವು ಎಂದು ಸಾಣೇಹಳ್ಳಿಯ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಸಾಣೆಹಳ್ಳಿ ಸ್ವಾಮೀಜಿಯವರು, “ಶ್ರೀ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪರಿಷ್ಕರಣಾ ಸಮಿತಿಯವರು ಹೊರ ತಂದಿರುವ 9ನೇ […]

ರಾಜ್ಯ

ಕರ್ನಾಟಕಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಕಾಂಗ್ರೆಸ್ ಹಲವು ಪ್ರಶ್ನೆ

ಧಾರವಾಡದಲ್ಲಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಹೇಳಿಕೆ ಧಾರವಾಡ prajakiran. com : ಕೇಂದ್ರ ಬಿಜೆಪಿ ಸರಕಾರವನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸಿದಕ್ಕೆ ಸ್ವಾಗತ ಕೋರಿರುವ ಕಾಂಗ್ರೆಸ್ ಪಕ್ಷದ ವಕ್ತಾರ ಪಿ.ಎಚ್. ನೀರಲಕೇರಿ ಹಲವು ಪ್ರಶ್ನೆ ಕೇಳಿದ್ದಾರೆ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಕರ್ನಾಟಕ ರಾಜ್ಯದ ಜನತೆಯ ಪರವಾಗಿ ಕೆಲವು ಪ್ರಶ್ನೆಗಳು ಕೇಳುವುದಾಗಿ ತಿಳಿಸಿದರು. ಪ್ರಶ್ನೆ ವಿವರ ಹೀಗಿದೆ. 1) ಕಳೆದ 3 ವರ್ಷಗಳಿಂದ ರಾಜ್ಯಕ್ಕೆ ಬರಬೇಕಾಗಿದ್ದ GST ಪಾಲಿನ ಹಣವನ್ನು ಯಾವಾಗ ನೀಡುತ್ತೀರಿ? […]

ರಾಜ್ಯ

ಧಾರವಾಡ ವಿಧಾನ ಸಭಾ ಕ್ಷೇತ್ರ 71ರ 93 ಸರಕಾರಿ ಶಾಲೆಯ 20 ಸಾವಿರ ಸರಕಾರಿ ಶಾಲೆ ಮಕ್ಕಳಿಗೆ ಒಂದೂವರೆ ಲಕ್ಷಕ್ಕೂ ಅಧಿಕ ನೋಟ್ ಬುಕ್ ವಿತರಣೆ ಗುರಿ : ಬಸವರಾಜ ಕೊರವರ

ಧಾರವಾಡದ ನರೇಂದ್ರದಲ್ಲಿ ಜನಜಾಗೃತಿ ಸಂಘದ ವತಿಯಿಂದ ಸಾವಿರಾರು ಮಕ್ಕಳಿಗೆ ನೋಟ್ ಬುಕ್ ವಿತರಣೆ ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯ : ಬಸವರಾಜ ಕೊರವರ ಧಾರವಾಡ prajakiran.com : ಧಾರವಾಡ ವಿಧಾನ ಸಭಾ ಕ್ಷೇತ್ರ ೭೧ರ ವ್ಯಾಪ್ತಿಯ ೯೩  ಸರಕಾರಿ ಶಾಲೆಯ ೨೦ ಸಾವಿರ ಮಕ್ಕಳಿಗೆ ಹಾಗೂ ಧಾರವಾಡದ ಒಂಬತ್ತು ವಾರ್ಡುಗಳ ಹತ್ತಾರು ಸರಕಾರಿ ಶಾಲೆಯ ಸಾವಿರಾರು ಮಕ್ಕಳಿಗೆ ಮುಂದಿನ ಒಂದೂವರೆ ತಿಂಗಳಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ನೋಟ್ ಬುಕ್ ವಿತರಣೆ ಮಾಡುವ ಗುರಿ ಹೊಂದಲಾಗಿದೆ ಎಂದು […]

ರಾಜ್ಯ

ಕಾಂಗ್ರೆಸ್ ಬೌದ್ಧಿಕ, ರಾಜಕೀಯ, ಸಂಘಟನಾತ್ಮಕವಾಗಿ ದಿವಾಳಿ

ಬೆಂಗಳೂರು prajakiran. com, ಜೂನ್ 18: ಕಾಂಗ್ರೆಸ್ ನವರು ಬೌದ್ಧಿಕವಾಗಿ, ರಾಜಕೀಯವಾಗಿ, ಸಂಘಟನಾತ್ಮಕವಾಗಿ ದಿವಾಳಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ಜನಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ದೇಶದಲ್ಲಿ ಮತ್ತೊಮ್ಮೆ ಅರಾಜಕತೆಯನ್ನು ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಶಾಂತಿ ಇರುವಲ್ಲಿ ದೇಶದ ಪ್ರಗತಿ ಸಾಧ್ಯ. ಅವರಿಗೆ ಶಾಂತಿ ಬೇಕಾಗಿಲ್ಲ. ಅಧಿಕಾರ ಬೇಕು. ಅದಕ್ಕಾಗಿ ಯಾವುದೇ ಮಾರ್ಗ ಹಿಡಿಯಲು ತಯಾರಿದ್ದಾರೆ. ಸಣ್ಣ ವಿಚಾರವನ್ನು ತೆಗೆದುಕೊಂಡು ಬೀದಿಗಿಳಿದು ಸಮಾಜದಲ್ಲಿ ಅರಾಜಕತೆ, ಕ್ಷೋಭೆಯನ್ನು ಉಂಟು ಮಾಡುತ್ತಿದ್ದಾರೆ. ಹಿಂದೆ […]

ರಾಜ್ಯ

ಕೆಯುಡಬ್ಲ್ಯೂಜೆಯಿಂದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಬೆಂಗಳೂರು prajakiran. com : ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ)ದಿಂದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು. ಎಸ್ ಎಸ್ ಎಲ್‌ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ (ಶೇ.80)ಗಳನ್ನು ಪಡೆದ ವಿದ್ಯಾರ್ಥಿಗಳಿಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ರಾಜ್ಯ ಮಟ್ಟದಲ್ಲಿಯೂ ಇದೇ ರೀತಿಯಲ್ಲಿ ಶೇ.90 ಕ್ಕೂ ಹೆಚ್ಚು ಅಂಕ‌ ಪಡೆದ ಪತ್ರಕರ್ತರ ಸಂಘದ […]