ಕ್ರೀಡೆ

ಬಿಜೆಪಿ ಸಂಸದ ಬೃಜಭೂಷಣ್ ಸಿಂಗ್ ಬಂಧಿಸಲು ಸಿಎಂ ಸಿದ್ದರಾಮಯ್ಯ ಆಗ್ರಹ

ಮಹಿಳಾ ಕುಸ್ತಿಪಟುಗಳ ಬಂಧಿಸಿ ದೌರ್ಜನ್ಯ ಎಸಗಿರುವುದಕ್ಕೆ ದೇಶ ವ್ಯಾಪ್ತಿ ಖಂಡನೆ ನವದೆಹಲಿ ಪ್ರಜಾಕಿರಣ.ಕಾಮ್ : ಲೈಂಗಿಕ ದೌರ್ಜನ್ಯ ಎಸಗಿರುವ ಭಾರತ ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೋರಾಡುತ್ತಿರುವ ಮಹಿಳಾ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿ ದೌರ್ಜನ್ಯ ಎಸಗಿರುವುದಕ್ಕೆ ದೇಶ ವ್ಯಾಪ್ತಿ ಖಂಡನೆ ವ್ಯಕ್ತವಾಗಿದೆ. ಇದು ಟ್ವಿಟರ್ ಟ್ರೇಂಡಿಗ್ ಆಗಿದ್ದು, ಬಿಜೆಪಿ ವಿರುದ್ದ ವಿಪಕ್ಷಗಳು ಮುಗಿಬಿದ್ದಿವೆ. ತಕ್ಷಣ ಬಂಧಿತ ಮಹಿಳಾ ಕುಸ್ತಿಪಟುಗಳನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹ ಕೇಳಿಬಂದಿದೆ. ನೂತನ ಸಂಸತ್ ಭವನದ ಉದ್ಘಾಟನೆಯನ್ನು ಪ್ರಜಾಪ್ರಭುತ್ವದ ಹಬ್ಬ ಎಂಬಂತೆ […]

ಕ್ರೀಡೆ

ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ರೋಪ್ ಸ್ಕಿಪಿಂಗ್ ಪಂದ್ಯಾವಳಿ : 19 ಪದಕ ಬೇಟೆಯಾಡಿದ ಕವಿವಿ

ಧಾರವಾಡ ಪ್ರಜಾಕಿರಣ.ಕಾಮ್ : ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ರೋಪ್ ಸ್ಕಿಪಿಂಗ್ ಪುರುಷ ಮತ್ತು ಮಹಿಳೆಯರ ಪಂದ್ಯಾವಳಿಗಳು ಜ. 21 ರಿಂದ 24 ರವರೆಗೆ ಎಲ್‌ಎನ್‌ ಸಿಟಿ ವಿಶ್ವವಿದ್ಯಾಲಯ ಭೂಪಾಲ್ ದಲ್ಲಿ ನಡೆದಿದವು. ಕರ್ನಾಟಕ ವಿಶ್ವವಿದ್ಯಾಲಯದ ಕ್ರೀಡಾಪಟುಗಳು ಒಟ್ಟು 19 ಪದಕಗಳನ್ನು ಬೇಟೆಯಾಡಿದರು. ಮಹಿಳೆಯರ ತಂಡ ದ್ವಿತೀಯ ಸ್ಥಾನವನ್ನು ಪಡೆದಿದ್ದು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೆಮ್ಮೆ ತಂದಿದ್ದಾರೆ. ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ 1. ಐಶ್ವರ್ಯ ಎಚ್ ಡಬಲ್ ಅಂಡರ್ ಮಹಿಳಾ ಸ್ಪರ್ಧೆಯಲ್ಲಿ ಬಂಗಾರದ ಪದಕ 2. ಕೃತಿಕ ಹಟ್ಟಿ […]

ಕ್ರೀಡೆ

ಲಗೋರಿ, ಹಗ್ಗ ಜಗ್ಗಾಟ, ಗೋಣಿಚೀಲ ಓಟ, ಗಾಲಿ ಓಟ ಸೇರಿ ಹಲವು ದೇಸಿ ಕ್ರೀಡೆ ಆಡಿ ನಲಿದ ನೂರಾರು ಮಕ್ಕಳು, ಮಹಿಳೆಯರು

ಕುಣಿದು ಕುಪ್ಪಳಿಸಿದ ಚಿಣ್ಣರು ಧಾರವಾಡ ಪ್ರಜಾಕಿರಣ.ಕಾಮ್  : ಇಲ್ಲಿಯ ದೊಡ್ಡನಾಯಕನಕೊಪ್ಪ ಬಡಾವಣೆಯ ಕೆ ಎಚ್ ಬಿ ವಾಟರ್ ಟ್ಯಾಂಕ್ ಮೈದಾನದಲ್ಲಿ ಜನಜಾಗೃತಿ ಸಂಘದಿAದ ಸ್ವಾಮಿವಿವೇಕಾನಂದರ ೧೬೦ನೇ ಜಯಂತಿ ಹಾಗೂ ಸುಭಾಸಚಂದ್ರ ಬೋಸ್ ರವರ ೧೨೬ನೇ ಜಯಂತಿ ಪ್ರಯುಕ್ತ ಹತ್ತು ಹಲವು ದೇಸಿಕ್ರೀಡಾಕೂಟಗಳು ನಡೆದವು. ನೂರಾರು ಮಕ್ಕಳು, ಮಹಿಳೆಯರು ಲಗೋರಿ, ಹಗ್ಗ ಜಗ್ಗಾಟ, ಗೋಣಿಚೀಲ ಓಟ, ಗಾಲಿ ಓಟ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಹಲವು ವರ್ಷಗಳ ಬಳಿಕ ಇಂತಹ ಕ್ರೀಡೆಗಳಲ್ಲಿ ಪಾಲ್ಗೊಂಡಿರುವುದು ಬಾಲ್ಯದ ನೆನಪುಗಳು ಮರುಕಳಿಸಿವೆ […]

ಕ್ರೀಡೆ

23 ನೇ ರಾಷ್ಟ್ರೀಯ ರೋಪ್ ಸ್ಕಿಪ್ಪಿಂಗ್ -ಜಂಪ್ ರೋಪ್ ಚಾಂಪಿಯನ್‌ಶಿಪ್ ನಲ್ಲಿ ವಿಜಯ ಪತಾಕೆ ಹಾರಿಸಿದ ಧಾರವಾಡ ಚಿಣ್ಣರು

ನವದೆಹಲಿ prajakiran.com : ರಾಷ್ಟ್ರದ ರಾಜಧಾನಿ ‌ನವದೆಹಲಿಯಲ್ಲಿ ನಡೆದ 23 ನೇ ರಾಷ್ಟ್ರೀಯ ರೋಪ್ ಸ್ಕಿಪ್ಪಿಂಗ್ -ಜಂಪ್ ರೋಪ್ ಚಾಂಪಿಯನ್‌ಶಿಪ್ ನಲ್ಲಿ ಧಾರವಾಡ ಚಿಣ್ಣರು ವಿಜಯ ಪತಾಕೆ ಹಾರಿಸಿದ್ದಾರೆ. ಒಟ್ಟು 11 ಚಿನ್ನದ ಪದಕ, 19 ಬೆಳ್ಳಿ ಪದಕ, 10 ಕಂಚಿನ ಪದಕ ಪಡೆದುಕೊಂಡಿದ್ದಾರೆ. ಗೆಲವು ದಾಖಲಿಸಿ ತವರು ಜಿಲ್ಲೆ ಧಾರವಾಡಕ್ಕೆ ಆಗಮಿಸಿದ ವೇಳೆ ಧಾರವಾಡ ರೈಲು ನಿಲ್ದಾಣದಲ್ಲಿ ಇವರಿಗೆ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ, ಅವರ ಧರ್ಮಪತ್ನಿ ಸುಮಾ ಕೊರವರ, ಉಪಾಧ್ಯಕ್ಷರಾದ ನಾಗರಾಜ ಕಿರಣಗಿ […]

ಕ್ರೀಡೆ

ಭಾರತೀಯ ಆಟ್ಯಾಪಾಟ್ಯಾ ಫೆಡರೇಶನ್ ಅಧ್ಯಕ್ಷ ವಿ.ಡಿ. ಪಾಟೀಲ ಇನ್ನಿಲ್ಲ

ಧಾರವಾಡ prajakiran. com :  ಆಟ್ಯಾಪಾಟ್ಯಾ ಫೆಡರೇಷನ್ ಏಷ್ಯಾ ಖಂಡದ ಹಾಗೂ ಭಾರತೀಯ ಆಟ್ಯಾಪಾಟ್ಯಾ ಫೆಡರೇಷನ್ ಅಧ್ಯಕ್ಷ ವಿ.ಡಿ. ಪಾಟೀಲ ಭಾನುವಾರ ರಾತ್ರಿ ನಿಧನ ಹೊಂದಿದರು. ಅವರಿಗೆ 57 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಒಬ್ಬ ಮಗ ಒಬ್ಬ ಮಗಳನ್ನು ಅಗಲಿದ್ದಾರೆ. ಪಾಟೀಲ ಅವರು ಆಟ್ಯಾಪಾಟ್ಯಾ ಆಟದ ಅಂತರಾಷ್ಟ್ರೀಯ ಆಟಗಾರ ಹಾಗು ಕೊಕ್ಕೋ ಆಟದ ರಾಷ್ಟ್ರೀಯ ಆಟಗಾರರಾಗಿದ್ದರು. ರಾಷ್ಟ್ರೀಯ ಆಟ್ಯಾಪಾಟ್ಯಾ ತಂಡಕ್ಕೆ ಉಪನಾಯಕರಾಗಿದ್ದರು. ಭಾರತದಲ್ಲಿ ಆಟ್ಯಾಪಾಟ್ಯಾ ಕ್ರೀಡೆ ಬೆಳೆಯಲು ಪ್ರಮುಖ ಕಾರಣಿಕರ್ತರಲ್ಲಿ ಇವರು ಒಬ್ಬರಾಗಿದ್ದರು. ಸದ್ಯ ಅವರು […]

ಕ್ರೀಡೆ

ಕರಾಟೆ ಸ್ಪರ್ಧೆ : ಮಲೇಶಿಯಾದದಲ್ಲಿ ಧಾರವಾಡದ ಮೂವರಿಗೆ ಪದಕ

ಧಾರವಾಡ prajakiran. com : ಧಾರವಾಡದ ಮಾಳಾಪುರದ ನಿವಾಸಿ ಶ್ರೇಯಸ್ ಈರಣ್ಣ ಅಕ್ಕಿಮರಡಿ ಮಲೇಶಿಯಾದದಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕ ಗೆದ್ದು ಬಂದು ಭಾರತಕ್ಕೆ ಹೆಮ್ಮೆ ತಂದಿದ್ದಾನೆ. ಧಾರವಾಡದ ಮಲ್ಲಸಜ್ಜನ ಶಾಲೆಯ ವಿದ್ಯಾರ್ಥಿಯ ಈ ಸಾಧನೆಗೆ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 18 ನೇ ಅಂತರರಾಷ್ಟ್ರೀಯ ಓಕಿನವಾ ಗೊಜು ರೂಂ ಇಪ್ಪೊ ಸಿಟಿ ಕರಾಟೆ ಓಪನ್ ಚಾಂಪಿಯನ್ ಶಿಪ್ 2022 ನಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದಿದ್ದಾನೆ. […]

ಕ್ರೀಡೆ

ಧಾರವಾಡ ಜರ್ನಲಿಸ್ಟ್ ಗಿಲ್ಡ್ ನ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಪತ್ರಕರ್ತರು

ಧಾರವಾಡ prajakiran.com ಧಾರವಾಡ ಜರ್ನಲಿಸ್ಟ್ ಗಿಲ್ಡ್ ವತಿಯಿಂದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ 2 ದಿನಗಳ ಕಾಲ ಆಯೋಜಿಸಿದ್ದ ಗಿಲ್ಡ್‌ ವಾರ್ಷಿಕ ಕ್ರೀಡಾಕೂಟ ಸೋಮವಾರ ಸಮಾರೋಪಗೊಂಡಿತು. ಕೂಟದ ಸಂಪೂರ್ಣ ಫಲಿತಾಂಶ ಇಂತಿದೆ. ಒಳಾಂಗಣ ವಿಭಾಗದ ಕೇರಂ ಸಿಂಗಲ್ಸ್ ನಲ್ಲಿ ಬಸವರಾಜ ಅಳಗವಾಡಿ (ಪ್ರ), ರಾಯಸಾಬ ಅನ್ಸಾರಿ (ದ್ವಿ) ಹಾಗೂ ಮಿಲಿಂದ ಪಿಸೆ (ತೃ) ಶೆಟಲ್ ಬ್ಯಾಡ್ಮಿಂಟನ್  ಸಿಂಗಲ್ಸ್‌ನಲ್ಲಿ ರವೀಶ ಪವಾರ (ಪ್ರ), ಸುಧೀಂದ್ರಪ್ರಸಾದ ಇ.ಎಸ್. (ದ್ವಿ), ಬಸವರಾಜ ಹಿರೇಮಠ (ತೃ), ಶೆಟಲ್ ಡಬಲ್ಸ್ ನಲ್ಲಿ ರವೀಶ ಪವಾರ ಹಾಗೂ […]

ಕ್ರೀಡೆ

ಧಾರವಾಡದ ಕಲ್ಲೂರಿನಲ್ಲಿ ಮೈ ನವಿರೇಳಿಸಿದ ಭಾರಿ ಜಂಗಿ ನಿಕಾಲಿ ಕುಸ್ತಿ

ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ 52 ಕುಸ್ತಿ ಪಟುಗಳು 5 ಮಹಿಳಾ ಜೋಡಿಗಳು ಭಾಗಿ ಧಾರವಾಡ prajakiran. com : ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಕಾರ್ಮಿಕರ ದಿನಾಚರಣೆ ಹಾಗೂ ಬಸವ ಜಯಂತಿ ಅಂಗವಾಗಿ ಜೈ ಹನುಮಾನ್ ಕುಸ್ತಿ ಸಂಘದ ವತಿಯಿಂದ ಭಾರಿ ಜಂಗಿ ನಿಕಾಲಿ ಕುಸ್ತಿ ನಡೆಯಿತು. ಗ್ರಾಮದ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಶಾಲೆ ಮೈದಾನದಲ್ಲಿ ನಡೆದ ಕುಸ್ತಿಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಒಟ್ಟು 52 ಪುರುಷ ಜೋಡಿಗಳು, 5 ಜೋಡಿ ಮಹಿಳೆಯರು […]

ಕ್ರೀಡೆ

ಧಾರವಾಡದ ಪ್ರಿಯಾಂಕಾ 19ನೇ ISF ವರ್ಲ್ಡ್ ಸ್ಕೂಲ್ ಜಿಮ್ನಾಸೈಡ್ ಸ್ಪರ್ಧೆಗೆ ಆಯ್ಕೆ : ಆಥಿ೯ಕ ಸಹಾಯ ನೀಡಲು ಮನವಿ

ಧಾರವಾಡ prajakiran.com : ಪ್ರಿಯಾಂಕಾ ಓಲೇಕಾರ ಧಾರವಾಡದ ಅತ್ಯುತ್ತಮ ಕ್ರೀಡಾಪಟು ಆಗಿದ್ದು, ಅವಳು ಫ್ರಾನ್ಸ್‌ನ ನಾರ್ಮಂಡಿಯಲ್ಲಿ ನಡೆಯುತ್ತಿರುವ 19ನೇ ISF ವರ್ಲ್ಡ್ ಸ್ಕೂಲ್ ಜಿಮ್ನಾಸೈಡ್ ಸ್ಪರ್ಧೆಗೆ ಆಯ್ಕೆಯಾಗಿದ್ದು, ಮೇ 14 ರಿಂದ 22 ರವರೆಗೆ ನಡೆಯಲಿರುವ 800 ಮೀ. ಓಟದಲ್ಲಿ ಆಯ್ಕೆಯಾಗಿ ಪ್ರಿಯಂಕಾ ಭಾರತವನ್ನು ಪ್ರತಿನಿಧಿಸುತ್ತಿದ್ದಾಳೆ. ಹೀಗಾಗಿ ಆಥಿ೯ಕ ಸಹಾಯ ನೀಡಿ ಪ್ರೋತ್ಸಾಹಸಿ ಎಂದು ಸಾರ್ವಜನಿಕರಲ್ಲಿ ಧಾರವಾಡದ ಹಿರಿಯ ಕ್ರೀಡಾಪಟು ಆಗಿರುವ ಜಿಲ್ಲಾ ಒಲಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಶಿವು ಹಿರೆಮಠ ವಿನಂತಿ ಮಾಡಿದರು. ಅವರು ಪತ್ರಿಕಾ ಗೋಷ್ಠಿಯಲ್ಲಿ […]

ಕ್ರೀಡೆ

ಧಾರವಾಡದ ಕುಸ್ತಿಪಟು ರಫೀಕ್‍ ಮುಡಿಗೆ ಚಿನ್ನದ ಪದಕ

ಧಾರವಾಡ prajakiran. com : ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಇತ್ತೀಚೆಗೆ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆಸಿದ 2022ನೇ ಸಾಲಿನ ಫೆಡರೇಷನ್ ಕಪ್ (ಸೀನಿಯರ್) ಫ್ರೀಸ್ಟೈಲ್, ಗ್ರೀಕೊರೋಮನ್ ಚಾಂಪಿಯನ್‍ಶಿಪ್‍ನ ಧಾರವಾಡ ಮೊಹ್ಮದ್ ರಫೀಕ್ ಹೊಳಿ ಚಿನ್ನದ ಪದಕ ಗೆದ್ದಿದ್ದಾರೆ. ಗ್ರೀಕೋ ರೋಮನ್ ವಿಭಾಗದಲ್ಲಿ ರಫೀಕ್, 77 ಕೆಜಿ ವರ್ಗದಲ್ಲಿ ಚಿನ್ನದ ಪದಕ ಗೆದ್ದರು.  ಈ ಸ್ಪರ್ಧೆಯ್ಲಿ ರಫೀಕ್ ಭಾರತೀಯ ಸೇನೆಯ ಎಸ್‍ಎಸ್‍ಬಿಸಿ ತಂಡವನ್ನು ಪ್ರತಿನಿಧಿಸಿದ್ದರು. ಫೈನಲ್‍ನಲ್ಲಿ ಅವರು ಹರಿಯಾಣದ ಸೋನು ಅವರನ್ನು 7-3ರಿಂದ ಮಣಿಸಿ ಗೆಲುವಿನ ನಗೆ ಬೀರಿದರು. Share on: WhatsApp