ಜಿಲ್ಲೆ

ಧಾರವಾಡದ ಮದರಮಡ್ಡಿಯಲ್ಲಿ ಕೊಳಚೆ ಮಿಶ್ರಿತ ನೀರು….!?

ಸ್ಥಳೀಯರ ಪ್ರತಿಭಟನೆ* ಧಾರವಾಡ ಪ್ರಜಾಕಿರಣ.ಕಾಮ್  : ಕುಡಿಯುವ ನೀರಿನಲ್ಲಿ ಹುಳಗಳು ಹಾಗೂ ಕೊಳಚೆ ಮಿಶ್ರಿತ ನೀರು ಬರುತ್ತಿದೆ ಎಂದು ಧಾರವಾಡದ ಮದಾರಮಡ್ಡಿ ನಿವಾಸಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ. ಬಂದರೂ ಅದರಲ್ಲಿ ಹುಳಗಳು ಬರುತ್ತಿದ್ದು, ಚಿಕ್ಕ ಮಕ್ಕಳಿಗೆ ಕಾಯಿಲೆಗಳು ಬರುತ್ತಿವೆ. ಈ ಕುರಿತು ಮಹಾನಗರ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ  ಎಂದು ಧಿಕ್ಕಾರ ಕೂಗುತ್ತಾ ಅಸಮಾಧಾನ ವ್ಯಕ್ತಪಡಿಸಿದರು ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ […]

ಜಿಲ್ಲೆ

ಧಾರವಾಡದ ನರೇಂದ್ರದಲ್ಲಿ ಜನಜಾಗೃತಿ ಸಂಘದ 2024ರ ದಿನದರ್ಶಿಕೆ ಬಿಡುಗಡೆ

ಧಾರವಾಡದ ನರೇಂದ್ರದಲ್ಲಿ ಜನಜಾಗೃತಿ ಸಂಘದ 2024ರ ದಿನದರ್ಶಿಕೆ ಬಿಡುಗಡೆ ಧಾರವಾಡ ಪ್ರಜಾಕಿರಣ.ಕಾಮ್ : ಸಮಾಜಕ್ಕೆ ಪ್ರಯೋಜನ ಆಗುವ ಕೆಲಸ ಯಾವುದೇ ರೂಪದಲ್ಲಿ ಇದ್ದರೂ ಅದು ಜನರನ್ನು ತಲುಪುತ್ತದೆ ಎಂದು ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಮಳೆಪ್ಪಜ್ಜನ‌ಮಠದ ಶ್ರೀ ಸಂಗಮೇಶ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ಸೋಮವಾರ ಮಠದಲ್ಲಿ ಜನಜಾಗೃತಿ ಸಂಘದ 2024ರ ದಿನದರ್ಶಿಕೆ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು. ದಿನದರ್ಶಿಕೆಗಳು ನಮ್ಮ‌ ಬದುಕಿಗೆ ಶಿಸ್ತು ಮತ್ತು‌ ಸಮಯಪಾಲನೆ ಸೂಚಿಸುವ ಮಾರ್ಗದರ್ಶಿಗಳು. ನಿತ್ಯದ ಕಾಯಕಗಳಿಗೆ ಸೂಕ್ತ ದಿನ ಮತ್ತು ಸಮಯ […]

ಜಿಲ್ಲೆ

ರೈತರು ಸಂಘಟಿತ ಹೋರಾಟ ನಡೆಸಬೇಕಿದೆ ; ಬಸವರಾಜ ಕೊರವರ

ಧಾರವಾಡ ಪ್ರಜಾಕಿರಣ.ಕಾಮ್ : ರೈತ ವಿರೋಧಿ ಪ್ರಭುತ್ವದ ವಿರುದ್ಧ ಕೃಷಿಕರು ಸಂಘಟಿತರಾಗಿ ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅಭಿಪ್ರಾಯಪಟ್ಟರು. ಶನಿವಾರ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಶ್ರೀ ಸಾಯಿ ವಿದ್ಯಾಮಂದಿರದ ನೇತೃತ್ವ ಮತ್ತು ಶ್ರೀ ಶಿವಶಕ್ತಿ ಹವ್ಯಾಸಿ ಯುವಕ ಮಂಡಳ, ಶ್ರೀ ಗಜಾನನ ಯುವಕ ಮಂಡಳ ಮತ್ತು ಶ್ರೀ ಸಿದ್ಧಾರೂಢ ಯುವಕ ಮಂಡಳ ಸಹಯೋಗದಲ್ಲಿ ರೈತ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ರೈತರ ಸನ್ಮಾನ ಮತ್ತು ಸಾಂಸ್ಕöÈತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು […]

ಜಿಲ್ಲೆ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ 61ನೇ ಜನುಮದಿನ : ಬೃಹತ್ ರಕ್ತದಾನ ಶಿಬಿರ

ಧಾರವಾಡ ಪ್ರಜಾಕಿರಣ.ಕಾಮ್ : ಇಲ್ಲಿನ ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕಾರ್ತಿಕ ಶನಿವಾರದ ಪಾವನ ಪರ್ವದಂದು ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿಯವರು ಸುದೀರ್ಘ ಕಾಲ ಬಾಳಿ ಇನ್ನು ಹೆಚ್ಚಿನ ಜನಸೇವೆಗೈಯಲು ಹಾಗೂ 2024ರಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರು ದೇಶದ ಪ್ರಧಾನ ಮಂತ್ರಿಗಳಾಗಲೆಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಆಂಜನೇಯನ‌ ಆಶೀರ್ವಾದಕ್ಕೆ ಭಾಜನರಾಗಿ ಕೇಂದ್ರ ಸಚಿವರ 61ನೇ ಜನುಮದಿನದ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಜರುಗಿತು ನೂರಾರು ಯುವಕರು, ಹಿತೈಷಿಗಳು ರಕ್ತದಾನ […]

ಜಿಲ್ಲೆ

ಧಾರವಾಡದ ಹಿರಿಯ ರೈತ‌ ಹೋರಾಟಗಾರ ಖಂಡೇಶ್ವರ ಇನ್ನು ನೆನಪು ಮಾತ್ರ

ಕಳಚಿದ ರೈತ‌‌ ಚಿಂತನೆಯ ಕೊಂಡಿ ಧಾರವಾಡ ಪ್ರಜಾಕಿರಣ.ಕಾಮ್ : ತಾಲೂಕಿನ ನರೇಂದ್ರ ಗ್ರಾಮದ ಹಿರಿಯರು, ಪ್ರಗತಿಪರ ರೈತರು, ರೈತ ಹೋರಾಟಗಾರ ಖಂಡೇಶ್ವರ ಬಸವಂತಪ್ಪ ನರೇಂದ್ರ (ಈಳಿಗೇರ) (80) ಗುರುವಾರದಂದು ನಿಧನ ಹೊಂದಿದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಗ್ರಾಮದ ಪ್ರತಿಷ್ಠಿತ ಈಳಿಗೇರ ರೈತ ಕುಟುಂಬದಲ್ಲಿ ಜನಿಸಿದ ಅವರು ಇಂಜಿನೀಯರಿಂಗ್ ಪದವಿ ಪಡೆದಿದ್ದರು. ಅಂದಿನ ರೈತ ನಾಯಕರಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಬಾಬಾಗೌಡ ಪಾಟೀಲ, ಎಚ್.ಎಸ್. ರುದ್ರಪ್ಪ, ಪುಟ್ಟಣ್ಣಯ್ಯ ಅವರ ಜೊತೆ ರೈತ […]

ಜಿಲ್ಲೆ

ಕಲಘಟಗಿಯ ಟ್ರ್ಯಾಕ್ಟರ ಅವಘಡಕ್ಕೆ ಗ್ರಾಪಂ ಸದಸ್ಯ ಬಲಿ

ಕಲಘಟಗಿ ಪ್ರಜಾಕಿರಣ.ಕಾಮ್ : ಜಮೀನ ಉಳುಮೆ ಮಾಡುತ್ತಿರುವಾಗ ಟ್ರ್ಯಾಕ್ಟರ್ ಮುಗುಚಿ ಬಿದ್ದ ಪರಿಣಾಮ ಗ್ರಾಪಂ ಸದಸ್ಯ ಸ್ಥಳದಲ್ಲೇ ಮೃತಪಟ್ಟ ಘಟನೆ ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೂರಶೆಟ್ಟಿ ಗ್ರಾಮದ ಸಂತೋಷಕುಮಾರ ಹೊಸಮನಿ (೩೧) ಮೃತ ಯುವಕ. ತಮ್ಮ ಜಮೀನಿನಲ್ಲಿ ಮೆಕ್ಕೆಜೋಳ ಕಟಾವಿನ ನಂತರ ಟ್ರ್ಯಾಕ್ಟರ್ ಮುಖಾಂತರ ಹಿಂಗಾರು ಹಂಗಾಮಿಗೆ ಜಮೀನು ಹದಗೊಳಿಸಲು ಮುಂದಾಗಿದ್ದ. ಈ ವೇಳೆ ಏಕಾಏಕಿ ಟ್ರ್ಯಾಕ್ಟರ್ ಮುಗುಚಿ ಬಿದ್ದಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿಯೇ ಮೃತಪಟ್ಟಿದ್ದಾರೆ. […]

ಜಿಲ್ಲೆ

ಧಾರವಾಡದ ಜಕನಿ ಭಾವಿ ಹತ್ತಿರ ಯುವಕನಿಗೆ ತಳಿಸಿದ ವಿಡಿಯೋ ವೈರಲ್….!?

ಧಾರವಾಡ ಪ್ರಜಾಕಿರಣ.ಕಾಮ್  : 10 ಪುಡಿ ರೌಡಿಗಳ ತಂಡ ಧಾರವಾಡ ನಗರದ ಜಕನಿ ಭಾವಿಯ ಹತ್ತಿರ ಯುವಕನೊಬ್ಬನ ಮೇಲೆ ಮನ ಬಂದಂತೆ ತಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು ವಿದ್ಯಾಕಾಶಿ, ಸುಸಂಸ್ಕೃತ ನಗರಿ ಎಂದು ಕರೆಯಿಸಿಕೊಳ್ಳುವ ಧಾರವಾಡ ಮೊದಲಿನಂತೆ ಉಳಿದಿಲ್ಲ. ಬೀದಿ ರಂಪಾಟಗಳು, ಹೊಡೆದಾಟಗಳು ಸರ್ವೇ ಸಾಮಾನ್ಯವಾಗಿ ನಡೆಯುತ್ತಿವೆ. ಅದರಲ್ಲೂ ಪುಡಿ ರೌಡಿಗಳ ಹಾವಳಿ ಧಾರವಾಡದಲ್ಲಿ ಮೀತಿ ಮೀರಿದೆ. ಧಾರವಾಡ ಶಹರ ಪೊಲೀಸ್ ಠಾಣೆ ಹತ್ತಿರವೇ ಈ ಘಟನೆ ನಡೆದಿದ್ದು, ಪುಡಿ ರೌಡಿಗಳಿಗೆ ಭಯವೇ […]

ಜಿಲ್ಲೆ

ಧಾರವಾಡಿಗರ ಗಮನ ಸೆಳೆದ ಶಶಸ್ತ್ರ ಪಡೆ ಪೊಲೀಸರ ಪಥ ಸಂಚಲನ

ಗಣೇಶ ಹಬ್ಬದ ನಿಮಿತ್ಯ ಧಾರವಾಡದಲ್ಲಿ ಶಶಸ್ತ್ರ ಪಡೆ ಪೊಲೀಸರ ಪಥ ಸಂಚಲನ ಧಾರವಾಡ ಪ್ರಜಾಕಿರಣ.ಕಾಮ್ : ಗಣೇಶ ಚತುರ್ಥಿ ಪ್ರಯುಕ್ತ ನಗರದಲ್ಲಿ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಪೊಲೀಸರು, ಶಶಸ್ತ್ರ ಪಡೆ ಜೊತೆ ಪಥ ಸಂಚಲನ ನಡೆಸಿ ಸಾರ್ವಜನಿಕರ ಗಮನ ಸೆಳೆದರು. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಇವರ ನೇತೃತ್ವದಲ್ಲಿ ಎಲ್ಲಾ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ನಗರದ ಎಮ್ಮಿಕೇರಿ ನಿಂದ ಶುರುವಾಗಿ ಬಾಗಲಕೋಟ್ ಪೆಟ್ರೋಲ್ ಪಂಪ್ ಜನ್ನತ್ ನಗರ್, ಮದರ್ ಮಡ್ಡಿ ಗಾಂಧಿ ಚೌಕ್. […]

ಜಿಲ್ಲೆ

ನರೇಗಾ ಅಡಿ ಕೆಲಸ ಸರಿಯಾಗಿ ನೀಡಲು ಆಗ್ರಹಿಸಿ ಪ್ರತಿಭಟನೆ

ಧಾರವಾಡ ಪ್ರಜಾಕಿರಣ.ಕಾಮ್  : ಗೊಂಗಡಿಕೊಪ್ಪ ಮತ್ತು ಕ್ಯಾರಕೊಪ್ಪ ಗ್ರಾಮಗಳ ದುಡಿಯುವ ಜನರಿಗೆ ನರೇಗಾ ಯೋಜನೆ ಅಡಿಯಲ್ಲಿ ‘ಘೋಷಿತ ಮಾನವ ದಿನಗಳ’ ಕೆಲಸ ಸರಿಯಾಗಿ ನೀಡಬೇಕೆಂದು ಆಗ್ರಹಿಸಿ ಎ.ಐ.ಎಮ್.ಎಸ್.ಎಸ್‌ನ ಗೊಂಗಡಿಕೊಪ್ಪ ಮತ್ತು ಕ್ಯಾರಕೊಪ್ಪ ಗ್ರಾಮ ಘಟಕಗಳಿಂದ ಜಿಲ್ಲಾ ಪಂಚಾಯತ್ ಮುಂದೆ ಪ್ರತಿಭಟನೆ ಮಾಡಿ, ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳಿಗೆ ಮತ್ತು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಇಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎ.ಐ.ಎಮ್.ಎಸ್.ಎಸ್)ಯ ಗೊಂಗಡಿಕೊಪ್ಪ ಮತ್ತು ಕ್ಯಾರಕೊಪ್ಪ ಗ್ರಾಮ ಘಟಕಗಳಿಂದ ಗ್ರಾಮದ ಜನತೆಗೆ ನರೇಗಾ ಯೋಜನೆ […]

ಜಿಲ್ಲೆ

ಏಕ ಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲ್‌ನಲ್ಲಿ ನೀರಿನ ಬಳಕೆ ನಿಷೇಧಕ್ಕೆ ಸ್ವಾಗತ

ಧಾರವಾಡ ಪ್ರಜಾಕಿರಣ .ಕಾಮ್  20 : ಇನ್ನು ಮಂದೆ ಎಲ್ಲ ಸಭೆ ಸಮಾರಂಭಗಳಲ್ಲಿ ಏಕ ಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲ್‌ನಲ್ಲಿ ನೀರಿನ ಬಳಕೆ, ಸರಬರಾಜು ಮಾಡುವುದನ್ನು ನಿಲ್ಲಿಸಬೇಕು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಶರ್ಮಾ ಜಿಲ್ಲಾಡಳಿತಗಳಿಗೆ ಸುತ್ತೋಲೆ ಹೊರಡಿಸಿರುವುದು ಸ್ವಾಗತಾರ್ತ.  ಇನ್ನುಂದೆ ಯಾವುದೇ ಸಭೆ ಸಮಾರಂಭಗಳಲ್ಲಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರಿನ ಬಳಕೆ, ಸರಬರಾಜು ಮಾಡುವುದನ್ನು ನಿಲ್ಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಸರಕಾರದಿಂದ ಆಯೋಜಿಸಲ್ಪಡುವ ಸಭೆ ಸಮಾರಂಭ ಮತ್ತು ಸರಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳ […]